ಅಂಜಲಿ ಹತ್ಯೆ ಖಂಡಿಸಿ ನೇಹಾ ಹಿರೇಮಠ್ ತಂದೆಯಿಂದ ಉಗ್ರ ಹೋರಾಟ: ಮಠಾಧೀಶರು ಭಾಗಿ ಸಾಧ್ಯತೆ
ಹುಬ್ಬಳ್ಳಿ, ಮೇ 17: ಹುಬ್ಬಳ್ಳಿಯಲ್ಲಿ ನೇಹಾ ಹಿರಮೇಠ ಅವರ ಕೊಲೆಯಾಗಿ ನಾಳೆ ಮೇ 18ಕ್ಕೆ ಸರಿಯಾಗಿ ಒಂದು ತಿಂಗಳು. ಈ ಮಧ್ಯೆ ಯುವತಿ ಅಂಜಲಿ ಅಂಬಿಗೇರ ಕೊಲೆ ನಡೆದಿದೆ. ಈ ಹತ್ಯೆ ಖಂಡಿಸಿ ಅನೇಕ ಪ್ರತಿಭಟನೆಗಳು ಇಂದು ಹಬ್ಬಳ್ಳಿ-ಧಾರವಾಡದಲ್ಲಿ ಜರುಗಿವೆ. ಒಂದು ತಿಂಗಳ ಹಿಂದಷ್ಟೇ ಮಗಳು ನೇಹಾ ಕಳೆದುಕೊಂಡಿರುವ ತಂದೆ ನಿರಂಜನ್ ಹಿರೇಮಠ್ ಅವರ ನೇತೃತ್ವದಲ್ಲಿ ಈ ಹತ್ಯೆ ಖಂಡಿಸಿ ಉಗ್ರ ಹೋರಾಟ ನಡೆಯಲಿದೆ.
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಖಂಡಿಸಿ ಶನಿವಾರ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ನೇಹಾ ತಂದೆ ಹಾಗೂ ಪಾಲಿಕೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ತಿಳಿಸಿದರು.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ ಅವರು, ನಾಳೆ ನಾವು ವಾರ್ಡ್ ವತಿಯಿಂದ ಹೋರಾಟ ಮಾಡಲಿದ್ದೇವೆ. ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಿದ್ದು. ಅಂಜಲಿ ನಿವಾಸಿದಿಂದ ದಾಜಿಬಾನಪೇಟೆ, ಮಂಗಳವಾರ ಪೇಟೆ ಮಾರ್ಗವಾಗಿ ಚೆನ್ನಮ್ಮ ವೃತ್ತದವರೆಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮತ್ತೊಂದು ಘಟನೆ ಮರುಕಳಿಸಿರುವ ಕಾರಣ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಸ್ವಾಮೀಜಿಗಳು, ಇತರರು ಪ್ರತಿಭಟನೆಯಲ್ಲಿ ಭಾಗಿ
ನಾಳೆ ಬೃಹತ್ ಪ್ರತಿಭಟನೆಗೆ ಶ್ರೀ ಚೌಡಯ್ಯ ಸ್ವಾಮೀಜಿಗಳು ಸಾಥ್ ನೀಡಲಿದ್ದಾರೆ. ಅಂಜಲಿ ಕುಟುಂಬ ಬಡವರು, ಅವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ ಅವರು ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಂಜಲಿ ಮನೆಗೆ ಬರಲಿದ್ದಾರೆ.
ವಿನಯ್ ಕುಲಕರ್ಣಿ ಸಹ ಮಾತನಾಡಿದ್ದಾರೆ. ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಅಂಬಿಗೇರ ಸಮುದಾಯದ ಶ್ರೀಗಳ ಜೊತೆ ಅನೇಕ ಮಠಾಧಿಪತಿಗಳು ನಾಳೆ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ಅಂಜಲಿ ಕುಟುಂಬದವರಿಗೆ ಮನೆ ನೀಡಲು ಆಗ್ರಹ
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೋರಾಟ ಅಂಜಲಿ ಕುಟುಂಬಕ್ಕೆ ಮನೆ ಇಲ್ಲ ಅವರ ಮನೆ ಖಾಲಿ ಮಾಡಿಸುವ ಕೆಲಸ ಆಗುತ್ತಿದೆ. ಇನ್ನು ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿದ್ದಾರೆ. ಬಡವರಾದ ಕಾರಣ ಅಂಜಲಿ ಕುಟುಂಬಸ್ಥರಿಗೆ ಮನೆ ನೀಡುವಂತೆ ನಿರಂಜನ್ ಅವರು ಮನವಿ ಮಾಡಿದರು.
ಇದು ಕೊಲೆ ಒಬ್ಬನೇ ಮಾಡಲು ಸಾಧ್ಯ ಇಲ್ಲ. ಆತ ಯಾರ ಜೊತೆ ಗಾಂಜಾ ಸೇದಿದ್ದ ಎಂಬುದು ತನಿಖೆ ಆಗಬೇಕು
ಪೊಲೀಸರು ಯಾರ ಒತ್ತಡಕ್ಕೆ ಒಳಗಾಗಬಾರದು. ಸಿಪಿಐ ಅಮಾಯಕರಾಗಿದ್ದು ಅವರ ತಲೆದಂಡ ಆಗಿದೆ. ಈ ಅಮಾನತಿನಿಂದ ನನಗೆ ಬೇಸರವಾಗಿದೆ ಎಂದು ಅವರು ತಿಳಿಸಿದರು.
ಅಂಜಲಿ ಕುಟುಂಬಸ್ಥರಿಗೆ ವಿನಯ್ ಕುಲಕರ್ಣಿ ಸಾಂತ್ವನ
ಅಂಜಲಿ ಕುಟುಂಬಸ್ಥರಿಗೆ ಶುಕ್ರವಾರ ದೂರವಾಣಿ ಕರೆ ಮಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಾಂತ್ವನ ಹೇಳಿದ್ದಾರೆ. ನಿರಂಜನ ಹಿರೇಮಠ ಅವರ ಪೋನ್ ಗೆ ಕರೆ ಮಾಡಿದ ವಿನಯ ಕುಲಕರ್ಣಿ ಅವರು, ಆ ಮೂಲಕ ಅಂಜಲಿ ಸಹೋದರಿಗೆ ಧೈರ್ಯ ಹೇಳಿದ್ದಾರೆ.
ನಮ್ಮ ಅಕ್ಕನ ಸಾವಿಗೆ ನ್ಯಾಯ ಕೊಡಿಸುವಂತೆ ಈ ವೇಳೆ ಅಂಜಲಿ ಸಹೋದರಿ ಯಶೋಧಾ ಕೇಳಿದ್ದಾರೆ. ಸರ್ಕಾರ ನಿಮ್ಮ ಜೊತೆ ಇರುತ್ತದೆ. ಧೈರ್ಯವಾಗಿರಿ ಎಂದು ಅವರು ಭರವಸೆ ನೀಡಿದ್ದಾರೆ.
ಆರೋಪಿ ಎನ್‌ಕೌಂಟರ್‌ಗೆ ಆಗ್ರಹಿಸಿ ಪ್ರತಿಭಟನೆ
ಅಂಜಲಿ ಹತ್ಯೆ ಖಂಡಿಸಿ, ಆರೋಪಿ ಗಿರೀಶ ಎನ್‌ಕೌಂಟರ್‌ಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಇತ್ತ ಹುಬ್ಬಳ್ಳಿಯಲ್ಲಿ ಶ್ರೀರಾಮ್ ಸೇನೆಯಿಂದ ಪ್ರತಿಭಟನೆ ನಡೆಯಿತು.












Click it and Unblock the Notifications