ಹುಬ್ಬಳ್ಳಿ: ಗಣೇಶ ಮೂರ್ತಿ ತಯಾರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಮಹಿಳೆ

ಹುಬ್ಬಳ್ಳಿ, ಆಗಸ್ಟ್‌, 18: ಹುಬ್ಬಳ್ಳಿಯ ಮೂಲದ ಮುಸ್ಲಿಂ ಮಹಿಳೆ ಕಳೆದ 2 ವರ್ಷಗಳಿಂದ ಗಣೇಶ ಪ್ರತಿಮೆ ತಯಾರಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಕೆ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆಯಾಗಿದ್ದಾರೆ. ಹಾಗಾದರೆ ಇವರ ಯಾರು ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಪ್ರತಿ ವರ್ಷ ಮಳೆಗಾಲ ಆರಂಭಕ್ಕೆ ಮುನ್ನವೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. ವಿಗ್ರಹ ತಯಾರಕರಾದ ನಿರುಪಮಾ ಯಾದವ್ ಅವರ ಬಳಿ ಸಹಾಯಕಿಯಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಇನ್ನಿಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದು, ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಟಚ್ ನೀಡುತ್ತಾರೆ.

Muslim woman Making Ganesha idol in Hubballi

ಹಣಕಾಸಿನ ಸಮಸ್ಯೆಯಿಂದಾಗಿ ಸುಮನ್ ತಮ್ಮ ಮನೆಯ ಬಳಿಯಿದ್ದ ವಿಗ್ರಹ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ನಿಷೇಧದ ನಂತರ ಕಾಗದದ ವಿಗ್ರಹ ತಯಾರಿಸಲು ಆರಂಭಿಸಿದೆ. ಮುಸ್ಲಿಂ ಸಮುದಾಯದ ಮಹಿಳೆ ಸೇರಿದಂತೆ ವಿವಿಧ ಸಮುದಾಯಗಳ 6 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ನಿರುಪಮಾ ಯಾದವ್ ಹೇಳಿದ್ದಾರೆ. ಅಲ್ಲದೆ ಉತ್ತಮ ಗುಣಮಟ್ಟದ ಮಣ್ಣು ಸಿಗುವುದು ಈ ದಿನಗಳಲ್ಲಿ ತುಂಬಾ ಕಷ್ಟವಾಗಿದೆ. ಜೇಡಿ ಮಣ್ಣಿನಿಂದ ತಯಾರಿಸುವ ಗಣೇಶ ಪ್ರತಿಮೆಗಳು ಬೇಗ ಬಿರುಕು ಬಿಡುತ್ತವೆ ಎಂದರು.

ಆದ್ದರಿಂದ ಜನಪ್ರಿಯವಾಗಿರುವ 'ಪೊರ್ಬಂದರ್ ಚಾಕ್ ಮಿಟ್ಟಿ' ಮತ್ತು ವೃತ್ತಪತ್ರಿಕೆಗಳೊಂದಿಗೆ ವಿಗ್ರಹಗಳನ್ನು ತಯಾರಿಸಲು ನಾನು ಯೋಚಿಸಿದೆ.

ಸೀಮೆ ಸುಣ್ಣದ ಪುಡಿ ಮತ್ತು ವೃತ್ತಪತ್ರಿಕೆಯ ಸಂಯೋಜನೆಯು ಕಡಿಮೆ ತೂಕವಿದ್ದು, ಅದರಿಂದ ಬಿರುಕು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಹೀಗೆ ಈ ಭಾಗದಲ್ಲಿ ಇವರೊಬ್ಬರೇ ಕಾಗದದಿಂದ ಗಣೇಶ ತಯಾರಿಸುವವರಾಗಿದ್ದಾರೆ. ಪ್ರತಿ ವರ್ಷ ಸುಮಾರು 500 ವಿಗ್ರಹ ತಯಾರಿಸುತ್ತಾರೆ. ನಂತರ ಸುಮ್ಮನ್ ಮಾತನಾಡಿ, ನಾನು ಕಳೆದ ನಾಲ್ಕು ವರ್ಷಗಳಿಂದ ಪರಿಸರ ಸ್ನೇಹಿ ಗಣಪ‌ ತಯಾರು ಮಾಡುವುದರ ಜೊತೆಗೆ ಯಾವುದೇ ಜಾತಿ, ಮತ ಪಂಥ ಹೆಣ್ಣು-ಗಂಡು ಭೇದ-ಭಾವ ಎನ್ನದೇ ಒಳ್ಳೆಯ ಕಾಯಕ ಮಾಡುತಿದ್ದೇನೆ ಎನ್ನುತ್ತಾರೆ.

ಇನ್ನು ನಿರುಪಮಾ ಯಾದವ್ ಸಹ ಇದೇ ವೇಳೆ ಮಾತನಾಡಿ,‌ ಇಂದು ಜಾತಿ ಮತಗಳ ಪಂಥ ಹಾಗೂ ಧರ್ಮಗಳ ನಡುವೆ ಕಂದಕ ಉಂಟಾಗಿ ಅಶಾಂತಿ ನೆಲಸಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಹಿಳೆ ಅನ್ಯ ‌ಕೋಮಿನ ಸಾಂಪ್ರದಾಯಿಕ ಕಾಯಕದಲ್ಲಿ ನಿರತವಾಗಿದ್ದು ಸಂತಸ ತಂದಿದೆ ಎನ್ನುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+