ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಕೊಲೆ ಆರೋಪಿಗಳು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 23: ನಗರದ ಕೇಶ್ವಾಪುರ ಭಾಗದ ಬೆಂಗೇರಿಯಲ್ಲಿ ಜುಲೈ 17 ರಂದು ನಡೆದ ಕೊಲೆ ಪ್ರಕರಣದ 7 ಆರೋಪಿಗಳನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹು-ಧಾ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ , ಡೊಳ್ಳ ಮಂಜ್ಯಾ, ಮಾರುತಿ, ಮಣಿಕಂಠ, ಭೂತ ಮಂಜ್ಯಾ, ಮುತ್ತುರಾಜ, ಈರಣ್ಣ, ದಾದಾಪೀರ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.[ಹುಬ್ಬಳ್ಳಿಯಲ್ಲಿ ನಿರಂತರ ಮಳೆ: ಸಾಂಕ್ರಾಮಿಕ ರೋಗ ಭೀತಿ]

hubballi

ಜುಲೈ 17 ರಂದು ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಾಧಿಕ್ ಗೋಕಾಕ (22) ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಆರೋಪಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಡಿಸಿಪಿ ಜೀನೇಂದ್ರ ಖನಗಾವಿ ನೇತೃತ್ವದಲ್ಲಿ ತನಿಖೆ ನಡೆಸಿದ ಕೇಶ್ವಾಪುರ ಪೊಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

ಕೊಲೆಗೀಡಾದ ಯುವಕ ಸಾಧಿಕ್ ಕಳೆದ ವರ್ಷ ದೀಪಕ ಎಂಬಾತನ ಕೊಲೆ ಮಾಡಿದ್ದನೆನ್ನಲ್ಲಾಗಿದೆ. ಇವನ ವಿರುದ್ಧ ಸೇಡು ತೀರಿಸಿಕೊಳ್ಳಲು ಮೃತ ದೀಪಕ್ ನ ಮಾವ ಡೊಳ್ಳ ಮಂಜ್ಯಾ ತನ್ನ ಸಹಚರರದೊಂದಿಗೆ ಸಾಧಿಕ್ ನ ಕೊಲೆ ಮಾಡಿ ಪರಾರಿಯಾಗಿದ್ದ.

hubballi

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: Hubbali police arrested total 7 people who are involved with a murder case which was happened on July 17.
Please Wait while comments are loading...