Muda Scandal: ಸಿದ್ದರಾಮಯ್ಯಗೆ ಇದು ತಾತ್ಕಾಲಿಕ ಬ್ರೇಕ್, ವಾದ-ವಿವಾದ ಬಾಕಿ ಇದೆ: ಬಿಜೆಪಿ ಶಾಸಕ ಎಚ್ಚರಿಕೆ

ಹುಬ್ಬಳ್ಳಿ, ಆಗಸ್ಟ್ 20: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಪ್ರಕರಣ ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಕೊನೆಗೂ ಸುತ್ತಿಕೊಂಡಿದೆ. ಈ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ಕೋರ್ಟ್ ಸಿಎಂ ಸಿದ್ದರಾಮಯ್ಯನವರಿಗೆ ಹತ್ತು ದಿನಗಳ ರಿಲೀಫ್ ನೀಡಿದೆ. ಆದರೆ ಬಿಜೆಪಿ ತನ್ನ ನಿಲ್ಲಿಸದೇ ಮುಂದುವರೆಸಲು ತೀರ್ಮಾನಿಸಿದೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದಶಾಸಕ‌ ಮಹೇಶ್ ಟೆಂಗಿನಕಾಯಿ ಮಾತನಾಡಿ, ಮುಡಾ ಹಗರಣ ಹಾಗೂ ವಾಲ್ಮಿಕಿ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಾರೆ. ಸದ್ಯ ಅವರಿಗೆ ಸಿಕ್ಕಿರುವುದು ಕೇವಲ ತಾತ್ಕಾಲಿಕ ಬ್ರೇಕ್ ನಾವು ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಡುತ್ತೇವೆ ಎಂದು ಎಚ್ಚರಿಸಿದರು.

Muda Scandal BJP Continue fight Against Scam of CM Siddaramaiah s Govt Mahesh Tenginakai

ಇದು ಕಾಂಗ್ರೆಸ್‌ನ ಮನಸ್ಥಿತಿ

ಮುಖ್ಯಮಂತ್ರಿಗಳಿಗೆ ಸಿಕ್ಕಿರುವುದು ತಾತ್ಕಾಲಿಕ ರಿಲೀಫ್ ಹೊರತು ಇದೇ ಅಂತಿಮವಲ್ಲ. ಪ್ರಕರಣ ಸಂಬಂಧ ವಿಚಾರಣಗೆ ತಡೆ ‌ನೀಡಿದರೆ ನಮ್ಮ ಹೋರಾಟ ನಿರಂತರ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಐವಾನ್ ಡಿಸೋಜ್ ಅವರು ಬಾಂಗ್ಲಾದೇಶ ಪ್ರಧಾನಿಗಳಿಗೆ ಆದ ಪರಿಸ್ಥಿತಿ ರಾಜ್ಯಪಾಲರಿಗೆ ಆದ ಗತಿ ಆಗುತ್ತದೆ ಎಂಬ ಹೇಳಿದ್ದಾರೆ. ಒಬ್ಬ ಹಿರಿಯ ನಾಗರಿಕನಾಗಿ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಇದು ಕಾಂಗ್ರೆಸ್‌ನ ಮನಸ್ಥಿತಿ ಎಂದು ಜರಿದರು.

ಐವಾನ್ ಡಿಸೋಜ್ ಅವರು ರಾಜ್ಯಪಾಲರ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ಶಾಸಕರು ಖಂಡಿಸಿದರು. ಕಾಂಗ್ರೆಸ್‌ನವರೇ ದೇಶದ್ರೋಹಿಗಳು. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಾಗ ನಾವು ಇದೇ ರೀತಿ ಹೇಳಿಕೆ ನೀಡಿರಲಿಲ್ಲ ಎಂದು ತಿರುಗೇಟು ಕೊಟ್ಟರು.

ಮಡಾ ಕೇಸ್: ವಾದ, ವಿವಾದ ಇನ್ನೂ ಬಾಕಿ ಇದೆ

ಐವಾನ್ ಡಿಸೋಜ್ ಅವರೇ ಮೊದಲು ಸಿಎಂ ರಾಜೀನಾಮೆ ಕೊಡಲಿ ನಂತರ ನೋಡೋಣ. ಮುಡಾ ಹಗರಣದಲ್ಲಿ ಹೈಕೋರ್ಟ್ ವಿಚಾರಣೆ ಮಾತ್ರ ಆಗಸ್ಟ್ 29 ಕ್ಕೆ ಮುಂದುವಡಿದೆ. ಪ್ರಕರಣದ ವಿಚಾರಣೇ ಈಗಷ್ಟೇ ಆರಂಭವಾಗಿದ್ದು, ಇನ್ನೂ ವಾದ ವಿವಾದ ಇದೆ. ಖಂಡಿತವಾಗಿಯೂ ಹೈಕೋರ್ಟ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ಮೂಡಿಸಿದರು.

ರಾಜ್ಯಪಾಲರ ನಿರ್ಧಾರ ಸರಿಯಾಗಿಯೇ ಇದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಆರೋಪ ಬಂದಾಗ ಸರಿಯಾದ ಜವಾಬ್ದಾರಿ ಹೊರಲು ಸಿದ್ಧವಿರುವಿದಲ್ಲ. ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದಾಗ ಸ್ಪಷ್ಟನೆ ಕೊಡಲಿಲ್ಲ ಅಧಿವೇಶನ ವೇಳೆ ಪಲಾಯನ ಮಾಡಿದರು ಎಂದು ವಾಸ್ತವ ಸಂಗತಿ ಅವರು ಬಿಚ್ಚಿಟ್ಟರು.

Muda Scandal BJP Continue fight Against Scam of CM Siddaramaiah s Govt Mahesh Tenginakai

ಸದನದಲ್ಲೂ ಕಾಂಗ್ರೆಸ್‌ ಉತ್ತರಿಸುವ ಧೈರ್ಯ ಮಾಡಲಿಲ್ಲ

ಅಧಿವೇಶನವನ್ನು ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲೇ ಮೊಟಕುಗೊಳಿಸಲಾಯಿತು. ಮುಡಾ ಹಗರಣದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ. ಸದನದಲ್ಲಿ ಚರ್ಚೆಗೆ ನಿಲುವಳಿ ಮಂಡನೆ ಬಗ್ಗೆ ಸಹ ಅವಕಾಶ ಕೊಡಲಿಲ್ಲ ಎಂದು ಅವರು ದೂರಿದರು.

ಪ್ರಕರಣದ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ತಪ್ಪಿತಸ್ಥರಿಗೆ ಬುದ್ಧಿವಾದ ಹೇಳಲಿಲ್ಲ. ಇದೊಂದು ದುರ್ದೈದ ಸಂಗತಿ ಆಗಿದೆ. ಇದರಲ್ಲಿ ಸಮನಾದ ಸಮಪಾಲು ಸಹ ಇದೆ ಎಂಬುದು ಗೊತ್ತಾಯಿತು. ಕಾಂಗ್ರೆಸ್ ಹೈಕಮಾಂಡ್ ಎಲ್ಲದಕ್ಕೂ ಕರ್ನಾಟಕದ‌ ಸರ್ಕಾರ ಅವಲಂಬಿಸಿದೆ.

ಕರ್ನಾಟಕದ ರಾಜ್ಯ ಸರ್ಕಾರವನ್ನು ಅದರ ಹೈಕಮಾಂಡ್ ಎಟಿಎಂ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಮುಡಾ ಹಗರಣ ಇರಬಹುದು ಬೇರೆ ಭ್ರಷ್ಟಾಚಾರ ಇರಬಹುದು. ಕಾಂಗ್ರೆಸ್ ಹೈಕಮಾಂಡ್ ಸಹ ಪಾಲುಹೊಂದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+