ಸಂಸದ ಪ್ರಲ್ಹಾದ್ ಜೋಶಿ ಸುಳ್ಳಿನ ಸರದಾರ: ವಿನಯ ಕುಲಕರ್ಣಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್ 23: ಕಳೆದ ಒಂದು ವಾರದಿಂದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಮತ್ತು ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರ ಮಧ್ಯೆ ಮಾತಿನ ಸಮರ ಶುರುವಾಗಿದೆ.

ಧಾರವಾಡ ದಕ್ಷಿಣದ ಶಾಸಕ ವಿನಯ್ ಕುಲಕರ್ಣಿ ಪರಿಚಯ

ಧಾರವಾಡದಲ್ಲಿ ಮಾತನಾಡಿದ ಸಚಿವ ವಿನಯ ಕುಲಕರ್ಣಿ ಅವರು , ಸಂಸದ ಪ್ರಲ್ಹಾದ ಜೋಶಿ ಒಬ್ಬ ಸುಳ್ಳಿನ ಸರದಾರ, ಕಳೆದ 10 ವರ್ಷಗಳಲ್ಲಿ ಅವಳಿ ನಗರಕ್ಕೆ ಅವರೇನು ಮಾಡಿದ್ದಾರೆ ಎಂದು ಹುಬ್ಬಳ್ಳಿ ಸಂತೆಯಲ್ಲಿ ಕೇಳಲಿ ಎಂದು ವ್ಯಂಗ್ಯವಾಡಿದ್ದಾರೆ.

MP Prahlad Joshi is a liar: Vinay Kulkarni in Dharwad

'ಇಷ್ಟು ದಿನ ಅವರ ವಿರುದ್ಧ ಮಾತನಾಡೋರು ಯಾರೂ ಇರಲಿಲ್ಲ, ಈಗ ಜನ ಕೇಳೋಕೆ ಶುರು ಮಾಡಿದ್ದಕ್ಕೆ ಅವರು ಹೀಗೆ ಮಾಡ್ತಾ ಇದಾರೆ. ಅಮಿತ ಷಾ ಅವರು ಕಪ್ಪು ಹಣ ತಂದು, ಪ್ರತಿ ಅಕೌಂಟ್ ನಲ್ಲಿ ಹದಿನೈದು ಲಕ್ಷ ಹಾಕುತ್ತೇನೆ ಎಂದಿದ್ದರು, ಅದು ಏನಾಯ್ತು' ಎಂದು ಕೇಳಿದರು. ಕೇಳಿದ್ರೆ

'ನಮ್ಮ ಸರ್ಕಾರದ ಸಾಧನೆ ನೋಡಿ ಸಹಿಸಲಾಗದವರು ಏನೇನೋ ಮಾತನಾಡುತ್ತಾರೆ. ಮೋದಿ ನಮ್ಮ ರಾಜ್ಯಕ್ಕೆ ಬಂದು ಅದೇನ್ ಸಾಧನೆ ಮಾಡೀದೀವಿ ಅಂತ ಹೇಳ್ಕೋತಾರೋ ಗೊತ್ತಿಲ್ಲ. ವಿದೇಶ ಸುತ್ತಿರೋದು, ನೋಟ ಬ್ಯಾನ್, ಜಿಎಸ್ಟಿಯನ್ನೇ ಸಾಧನೆ ಅಂತಾ ಹೇಳಿಕೊಳ್ಳಬಹುದು. ಅದರಿಂದ ಕಾಂಗ್ರಸ್ಸಿಗೆ ಯಾವ ತೊಂದರೆಯೂ ಆಗೋಲ್ಲ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Dharwad member of parliament Prahlad Joshi is a liar" Dharwad district incharge and minister Vinay Kulakarni told in Dharwad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ