ಹುಬ್ಬಳ್ಳಿಯಲ್ಲಿ ಧರೆಗುರುಳಿದ ನೂರು ವರ್ಷದ ಬೇವಿನ ಮರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 29: ಹುಬ್ಬಳ್ಳಿ ಸುತ್ತಮುತ್ತಲೂ ಮಳೆ ಆರ್ಭಟ ಜೋರಾಗಿದೆ. ನಗರದಲ್ಲಿ ಗುರುವಾರ ಮಧ್ಯಾಹ್ನದಿಂದ ಎಡೆಬಿಡದೇ ಜಿಟಿಜಿಟಿ ಮಳೆ ಸುರಿಯುತ್ತಿದೆ.

ಮಳೆ ಕಳಸಾ ಬಂಡೂರಿ ಹೋರಾಟಗಾರರ ಪ್ರತಿಭಟನೆಗೂ ಅಡ್ಡಿ ಉಂಟುಮಾಡಿತ್ತು. ಮಳೆ ಪರಿಣಾಂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿದ್ದ ಬೇವಿನ ಮರವೊಂದು ನೆಲಕ್ಕುರುಳಿದೆ.[ಕೊಳಚೆ ನೀರಿನ ಕೆರೆಯಾದ ಬೆಂಗಳೂರು]

rain

ಗುರುವಾರ ಮಧ್ಯರಾತ್ರಿ 100 ವರ್ಷಕ್ಕೂ ಹಳೆಯದಾದ ಮರ ಉರುಳಿದೆ. ರಾತ್ರಿಯ ಹೊತ್ತಿನಲ್ಲಿ ಮರ ಉರುಳಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರತಿನಿತ್ಯ ಈ ಮರದ ಕೆಳಗೆ ಹಲವಾರು ಹಣ್ಣಿನ ಅಂಗಡಿಗಳು, ಚಹಾ ಅಂಗಡಿಗಳು ವಹಿವಾಟು ಮಾಡುತ್ತಿದ್ದವು. ಅಲ್ಲದೇ ಈ ಮರದ ಕೆಳಗೆ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡಿಕೊಂಡು ಅದರ ವಾಹನ ಚಾಲಕರು ವಾಹನಗಳಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.[ಹುಬ್ಬಳ್ಳಿ ಪಾಲಿಕೆ ಹೊಸ ಆಯುಕ್ತರ ಮುಂದಿನ ಸವಾಲುಗಳು]

ಹಗಲಿನ ಸಮಯದಲ್ಲಿ ಮರ ಬಿದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಮಹಾನಗರ ಪಾಲಿಕೆಯ ಸಿಬ್ಬಂದಿಗ ಮರವನ್ನು ತೆರವು ಮಾಡಿದರು.

ಜಿಟಿಜಿಟಿ ಮಳೆ ರೈತರ ಮುಖದಲ್ಲಿ ಮಂದಹಾಸ :
ಸತತ ಮಳೆಯಿಂದ ಹುಬ್ಬಳ್ಳಿ ತಾಲೂಕಿನ ಸುತ್ತಮುತ್ತಲಿನ ರೈತ ಸಮುದಾಯ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮಳೆ ಸ್ವಲ್ಪ ಕಡಿಮೆಯಾಗಿ ಬಿಸಿಲು ಬಿದ್ದಲ್ಲಿ ಬೀಜಗಳು ಮೊಳಕೆಯೊಡೆದ ಸಸಿಗಳಾಗಲು ನೆರವಾಗುತ್ತದೆ. ಇಲ್ಲವಾದಲ್ಲಿ ಇದೇ ರೀತಿ ಮಳೆ ಮುಂದುವರಿದಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ ಆಗುತ್ತದೆ. ಈ ಹಿಂದಿನ ವರ್ಷ ಬರಗಾಲದಿಂದ ಬೆಳಹಾನಿ ಅನುಭವಿಸಿದ್ದೆವು ಈಗ ಮಳೆಯಿಂದ ಮತ್ತೆಲ್ಲಿ ಬೆಳೆಹಾನಿ ಸಂಭವಿಸುತ್ತದೆಯೋ ಎಂಬ ಆತಂಕ ಎದುರಾಗಿದೆ ಎಂದು ದೇವರಗುಡಿಹಾಳ ಗ್ರಾಮದ ಪರಶುರಾಮ ಆತಂಕ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲಿ ಇನ್ನು ಮೂರು ದಿನ ಮುಂಗಾರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಿಸಿದೆ.

ಜೊತೆಗೆ ನಾಳೆ ಶನಿವಾರ ಕರ್ನಾಟಕ ಬಂದ್ ಕರೆ ನೀಡಿರುವುದರಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಪ್ರತಿಭಟನೆಯ ಕಾವು ಹೆಚ್ಚು ಇರುವುದಿಲ್ಲ ಎಂಬುದು ಪೊಲೀಸರ ಅನಿಸಿಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Monsoon rain lashed Hubballi on 28 th July 2016, . Many parts of Hubballi received heavy rain.
Please Wait while comments are loading...