'ಮಿಸ್ ಊರ್ವಶಿ' ಕಿರೀಟವನ್ನು ಮುಡಿಗೇರಿಸಿಕೊಂಡ ವಾಣಿಜ್ಯನಗರಿ ಹುಬ್ಬಳ್ಳಿಯ ಯುವತಿ

ಹುಬ್ಬಳ್ಳಿ, ಸೆಪ್ಟೆಂಬರ್‌, 19: ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022ರ ಕಿರೀಟವನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ವರ್ಶಿಣಿ ಎಂಬ ಯುವತಿ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾಳೆ.

ಹುಬ್ಬಳ್ಳಿಯ ವರ್ಶಿನಿ ಎಂಬ ಯುವತಿ ಸೆಪ್ಟೆಂಬರ್‌ 11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ. ಹುಬ್ಬಳ್ಳಿಯ ವರ್ಶಿಣಿ ಮಿಸ್ ಊರ್ವಶಿ 2022 ಕಿರೀಟವನ್ನು ಪಡೆದಿದ್ದು, ಜೈಪುರದ ರಾಜಬಿ ಮೊದಲ ರನ್ನರ್ ಅಪ್ ಮತ್ತು ಸಿಯಾ ರೈಟ್ ಎರಡನೇ ರನ್ನರ್ ಅಪ್ ಆಗಿದ್ದಾರೆ.

ನಟ ವಿವೇಕ್‌ ಒಬೇರಾಯ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 20ರ ವರ್ಷದ ವರ್ಷಿಣಿ ಧಾರವಾಡದ ಕೆಸಿಡಿ ಕಾಲೇಜ್‌ನಲ್ಲಿ ಟ್ರಾವೆಲ್ ಆ್ಯಂಡ್ ಟೂರಿಸಂ ಕೋರ್ಸ್‌ ತೆಗೆದುಕೊಂಡಿದ್ದು, ವ್ಯಾಸಂಗದಲ್ಲಿ 2ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಇವರು ಪ್ರತಿನಿಧಿಸಿದ್ದರು.

Miss Urvashi won the crown is Hubballi young woman

ಹುಬ್ಬಳ್ಳಿಯ ಯುವತಿಗೆ ಮಿಸ್ ಊರ್ವಶಿ ಕಿರೀಟ
ಅಲ್ಲದೇ ಅಲ್ಲಿ ಸ್ಪರ್ಧೆಯಲ್ಲಿ ಗೆದ್ದು ಬೀಗುವ ಮೂಲಕ ಮಿಸ್ ಊರ್ವಶಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಆಡಿಷನ್ ನಡೆಸಲಾಗಿದ್ದು, ಇಲ್ಲಿಂದಲೇ ವರ್ಷಿಣಿ ಈ ಸೌಂದರ್ಯ ಸ್ಪರ್ಧೆಗೆ ಆಯ್ಕೆ ಆಗಿದ್ದರು. ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಜನರು ಸ್ಪರ್ಧಿಸಿದ್ದರು. ಮಿಸ್ ಊರ್ವಶಿ ಕಿರೀಟವನ್ನು ಕರ್ನಾಟಕಕ್ಕೆ ತಂದು ಕೊಡುವುದರ ಜೊತೆಗೆ ಇವರು ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Miss Urvashi won the crown is Hubballi young woman

ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆ
ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲಿನಿಂದಲೂ ತನ್ನ ಪ್ರತಿಭೆ ತೋರಿಸುವಲ್ಲಿ ಪರಿಣಿತರಾಗಿರುವ ವರ್ಷಿಣಿ ಈಗಾಗಲೇ ಎರಡು ಬಾರಿ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ. ಧಾರವಾಡ ಗ್ಲ್ಯಾಮ್ ಬ್ಯೂಟಿ ಆಗಿಯೂ ವಿಜೇತರಾಗಿದ್ದರು. 2019ರಲ್ಲಿ ಮಿಸ್ ಕರ್ನಾಟಕ ಫೈನಲಿಸ್ಟ್ ಆಗಿದ್ದರು. ಸದ್ಯ ಈ ಕಿರೀಟ ಗೆದ್ದ ನಂತರ ಸಂತೋಷ ವ್ಯಕ್ತಪಡಿಸಿದ ವರ್ಷಿಣಿ, ಮುಂದೆ ಯಾವುದೇ ಸೌಂದರ್ಯ ಸ್ಪರ್ಧೆ ಇದ್ದರೆ ಭಾಗವಹಿಸಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+