135 ವರ್ಷದ ಸರ್ಕಾರಿ ಶಾಲೆಗೆ ಸಂಚಕಾರ ತಂದ ಕಿಡಿಗೇಡಿಗಳು, ಆಗಿದ್ದೇನು?
ಹುಬ್ಬಳ್ಳಿ, ಆಗಸ್ಟ್ 20: ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಸರ್ಕಾರದಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ದತ್ತು ಪಡೆಯುವುದು, ಅನುದಾನದಡಿ ಅಭಿವೃದ್ಧಿ, ಸಾಮಾಜಿಕ ಕಳಕಳಿಯ ಕಾರಣದಿಂದಾಗಿ ಸರ್ಕಾರಿ ಶಾಲೆಗಳು ಉಳಿದಿವೆ. ಇಂತಹ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು, ಒಂದೂವರೆಗೆ ಶತಮಾನದ ಹೊಸ್ತಿಲಲ್ಲಿದ್ದ ಈ ಸರ್ಕಾರಿ ಶಾಲೆಯ ಗೋಡೆಯನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇಲ್ಲಿನ ಕಾರವಾರ ರಸ್ತೆಯ ಗಿರಣಿಚಾಳ ಪ್ರದೇಶದಲ್ಲಿರುವ 'ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ'ಗೆ ಸುಮಾರು 135 ವರ್ಷಕ್ಕೂ ಅಧಿಕ ಇತಿಹಾಸ ಇದೆ. ಶತಮಾನ ಪೂರೈಸಿ ಮತ್ತೆ 50 ವರ್ಷಗಳ ಗಡಿ ಸಮೀಪಿಸುತ್ತಿದೆ.

ಈ ಶಾಲೆಯ ಕೊಠಡಿಯನ್ನು ರಾತ್ರೋ ರಾತ್ರಿ ಧ್ವಂಸ ಮಾಡಿದ ದುಷ್ಕರ್ಮಿಗಳು 1 ರಿಂದ 5ರವರೆಗೆ ತರಗತಿಗಳು ಇರುವ ಸರ್ಕಾರಿ ಶಾಲೆ ಇದಾಗಿದೆ. ಇಲ್ಲಿನ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಕೊಠಡಿಯನ್ನು ಧ್ವಂಸಗೊಳಿಸಲಾಗಿದೆ.
ಈ ವಿಚಾರವನ್ನು ಮಾರನೇ ದಿನ ಬೆಳಗ್ಗೆ ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ಬಂದಿದ್ದು, ದುಷ್ಕರ್ಮಿಗಳ ಕೃತ್ಯವೆಸಗಿದ್ದಾರೆ. ಈ ಕುರಿತು ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುದ್ದಿ ತಿಳಿದು ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಪ್ರಕರಣವು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಸಿಸಿಟಿವಿ ಪರಿಶೀಲನೆ, ಆರೋಪಿಗಳಿಗಾಗಿ ಶೋಧ
125 ಕ್ಕೂ ಅಧಿಕ ವರ್ಷದ ಶಾಲೆಯ ಗೋಡೆ ಏಕಾ ಏಕಿ ಧ್ವಂಸ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಶಾಲೆ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಶಾಲೆಯ ಉಳಿವಿಗಾಗಿ ಹೋರಾಟಕ್ಕೆ ಅದೇ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಶತಮಾನ ಕಂಡ ಶಾಲೆಯ ಉಳಿವಿಗಾಗಿ ನಿರಂತರ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಘಟನೆ ಖಂಡಿಸಿ ಸ್ಥಳೀಯರ ಪ್ರತಿಭಟನೆ
ಶಾಲೆ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಾಗಿದೆ. ಜಾಗ ಕಬಳಿಸುವ ಹುನ್ನಾರ ಇದಾಗಿದೆ ಎಂದು ಅವರು ದೂರಿದರು.
ಸುಮಾರು 135 ವರ್ಷಗಳ ಇತಿಹಾಸವುಳ್ಳ ಶಾಲೆಯಾಗಿದ್ದು, ಹಳೆ ಕಟ್ಟಡವನ್ನು ಕೆಡವಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಕಟ್ಟಡ ಕೆಡವಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕೆಡವಿರುವ ಕಟ್ಟಡದಲ್ಲಿ 4 ಮತ್ತು 5ನೇ ವರ್ಗದ ತರಗತಿಗಳು ನಡೆಯುತ್ತಿದ್ದವು.
ಬಾಗಿಲು ಹಾಗೂ ಗೋಡೆ ಭಾಗ ಕೆಡವಿದ್ದು, ತರಗತಿಗಳು ನಡೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅವರ ತಂದೆ ಮತ್ತು ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಕಲಿತಿರುವ ಶಾಲೆ ಇದಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.












Click it and Unblock the Notifications