ಸಚಿವ ಸಿ.ಎಸ್.ಶಿವಳ್ಳಿ ಅಸ್ವಸ್ಥ :ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ, ಫೆಬ್ರವರಿ 04: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿನ್ನೆ ಭಾನುವಾರ ತಡರಾತ್ರಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದಾರೆ. ಸದ್ಯ ಶಿವಳ್ಳಿ ಅವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ (ಫೆಬ್ರವರಿ 03) ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಕಾಯಕ್ರಮ ಮುಗಿಸಿ ಬರುವಾಗ ವಾಂತಿಯಾಗಿದೆ. ವಾಂತಿಯಾಗುತ್ತಿದ್ದಂತೆ ಶಿವಳ್ಳಿ ಅವರು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕರಡಿಕೊಪ್ಪ ಗ್ರಾಮದಲ್ಲಿ ಕಾರ್ಯಕ್ರಮದ ನಂತರ ಉಪ್ಪಿಟ್ಟು ಸೇವಿಸಿದ್ದು, ಇದರಿಂದಾಗಿ ವಾಂತಿಯಾಗಿದೆ ಎಂದು ಹೇಳಲಾಗುತ್ತಿದೆ.

ಇವರ ಜೊತೆಗೆ ಸಚಿವರ ಗನ್ ಮ್ಯಾನ್ ಹಾಗೂ ಆಪ್ತಕಾರ್ಯದರ್ಶಿ ಸೇರಿದಂತೆ ನಾಲ್ಕು ಜನರಿಗೂ ವಾಂತಿಯಾಗಿದೆ. ಈ ಘಟನೆ ಹಲವರ ಆತಂಕ ಹಾಗೂ ಸಂಶಯಕ್ಕೂ ಕಾರಣವಾಗಿದೆ. ಈ ಬಗ್ಗೆ ಕಿಮ್ಸ್ ವೈದ್ಯರು ಮಾತ್ರ ಯಾವ ವಿಚಾರವನ್ನು ಸ್ಪಷ್ಟಪಡಿಸುತ್ತಿಲ್ಲ.












Click it and Unblock the Notifications