ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್: ಮಾಂಸ ಪ್ರಿಯರ ಮನೆ ಬಾಗಿಲಿಗೆ ಬರಲಿದೆ ಮಾಂಸ...!

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 27: ಲಾಕ್ ಡೌನ್ ಹಿನ್ನಲೆಯಲ್ಲಿ ಜನರ ಅನುಕೂಲಕ್ಕಾಗಿ (MEAT ON WEELS) ಸಂಚಾರಿ ಮಾಂಸ ಮಾರಟ ಮಳಿಗೆಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಇದು ವಿನೂತನ ಪ್ರಯೋಗವಾಗಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಆವರಣದಲ್ಲಿ ಕರ್ನಾಟಕ ಕುರಿ ಅಭಿವೃದ್ಧಿ ನಿಗಮದ ವತಿಯಿಂದ ಆರಂಭಿಸಲಾಗಿರುವ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಸೋಮವಾರ ಚಾಲನೆ ನೀಡಲಾಗಿದೆ.

ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಮಗ; ಹುಬ್ಬಳ್ಳಿಯಲ್ಲಿ ಮಗಳಿಂದಲೇ ಶವಕ್ಕೆ ಅಗ್ನಿಸ್ಪರ್ಶಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಮಗ; ಹುಬ್ಬಳ್ಳಿಯಲ್ಲಿ ಮಗಳಿಂದಲೇ ಶವಕ್ಕೆ ಅಗ್ನಿಸ್ಪರ್ಶ

ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಈ ವೇಳೆಯಲ್ಲಿ ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಇದು ರಂಜಾನ್ ತಿಂಗಳ ಹಿನ್ನಲೆಯಲ್ಲಿ ಜನರು ಮಾಂಸಕ್ಕೆ ಬೇಡಿಕೆ ಹೆಚ್ಚಿದೆ ಪರಿಣಾಮ ಅವರ ಪ್ರದೇಶದಲ್ಲಿಯೇ ಮಾಂಸ ಪದಾರ್ಥಗಳನ್ನು ಮುಟ್ಟಿಸುವ ಉದ್ದೇಶದಿಂದ ಸಂಚಾರಿ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದೆ.

ಉತ್ತಮ ಗುಣಮಟ್ಟದ ಮಾಂಸ

ಉತ್ತಮ ಗುಣಮಟ್ಟದ ಮಾಂಸ

ಉತ್ತಮ ಗುಣಮಟ್ಟದ ಮಾಂಸವನ್ನು ಜನರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ವಾಹನದಲ್ಲಿ ರೆಫ್ರಿಜಿರೇಟರ್ ಹಾಗೂ ಡೀಪ್ ಫ್ರೀಜ್ ಉಪಕರಣಗಳನ್ನು ಅಳವಡಿಸಲಾಗಿದೆ. ಸದ್ಯ ಕೆಜಿ ಚಿಕನ್ ಗೆ 220, ಕೆಜಿ ಮಟನ್ ಗೆ 700 ರೂ ನಿಗದಿ ಮಾಡಲಾಗಿದೆ.

ಬೆಲೆ ಕಡಿಮೆ: ಕುರಿ ನಿಗಮದ ಅಧಿಕಾರಿಗಳಿಗೆ ಮನವಿ

ಬೆಲೆ ಕಡಿಮೆ: ಕುರಿ ನಿಗಮದ ಅಧಿಕಾರಿಗಳಿಗೆ ಮನವಿ

ವೆಂಕಾಬ್ ಚಿಕನ್ ನಿಂದ ಹೋಲಸೇಲ್ ದರದಲ್ಲಿ ಚಿಕನ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಚಿಕನ್ 180 ರೂಪಾಯಿಗಳಿಗೆ ದೊರೆಯುವುದು. ಮಟನ್ ಕೆ.ಜಿ. 650 ರೂಪಾಯಿ ನಿಗದಿ ಮಾಡಿ ಮಾರುವಂತೆ ಕುರಿ ನಿಗಮದ ಅಧಿಕಾರಿಗಳಿಗೆ ಕೋರಲಾಗುವುದು ಎಂದು ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಪ್ರಥಮ ಹಂತದಲ್ಲಿ ನಡೆಯುತ್ತಿದೆ

ಪ್ರಥಮ ಹಂತದಲ್ಲಿ ನಡೆಯುತ್ತಿದೆ

ಪ್ರಥಮ ಹಂತದಲ್ಲಿ ಹುಬ್ಬಳ್ಳಿಯ ನಿಗದಿತ ಏರಿಯಾಗಳಲ್ಲಿ ಸಂಚಾರಿ ಮಾಂಸ‌ ಮಾರಾಟ ಮೂಲಕ ಮನೆ ಬಾಗಿಲಿಗೆ ಮಾಂಸ ತಲುಪಿಸಲಾಗುವುದು. ಧಾರವಾಡ ನಗರದಲ್ಲೂ ಇದೇ ಮಾದರಿ ಸಂಚಾರಿ ಮಾಂಸ ಮಾರಾಟ ಮಳಿಗೆ ಆರಂಭಿಸಲಾಗುವುದು ಇಟ್ನಾಳ ಹೇಳಿದ್ದಾರೆ.

ಪೋನ್ ಮಾಡಿ ಮಾಂಸ ಪಡಿಯಿರಿ

ಪೋನ್ ಮಾಡಿ ಮಾಂಸ ಪಡಿಯಿರಿ

ಮೊಬೈಲ್ ಸಂಖ್ಯೆ 9980699670 ಗೆ ಕರೆ ಮಾಡಿ ಚಿಕನ್ ಮತ್ತು ಮಟನ್ ಆರ್ಡರ್ ನೀಡಿದರೆ, ಎರೆಡು ಗಂಟೆಯ ಒಳಗಾಗಿ ಮನೆಗಳಿಗೆ ಮಾಂಸ ತಲುಪಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಹು-ಧಾ ಮಹಾನಗರ ಪಾಲಿಕೆ ಮನವಿ ಮಾಡಿಕೊಂಡಿದೆ.

English summary
Meat On Wheels At Lockdown Time at hubballi. Hubballi Dharwad Corporation starts it for meat lovers. this is first in karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X