ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು
ಹುಬ್ಬಳ್ಳಿ, ಡಿಸೆಂಬರ್ 5: ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ, ಬೆಲೆಬಾಳುವ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ನಗರದ ವೈದ್ಯರೊಬ್ಬರ ಪತ್ನಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾನೆ.
ಕೆನಡಿ ಓವೆನ್ ಎಂಬ ಹೆಸರಿನ ವ್ಯಕ್ತಿ ಲಂಡನ್‌ನ ತೈಲ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ವೈದ್ಯರ ಪತ್ನಿಗೆ ಫೇಸ್‌ಬುಕ್‌ಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ವಿದೇಶದಿಂದ ತಾನು ವೈದ್ಯರ ಪತ್ನಿಗೆ ಬೆಲೆ ಬಾಳುವ ಗಿಫ್ಟ್ ಕಳಿಸುವುದಾಗಿ ಆಸೆ ತೋರಿಸಿದ್ದ. ಅದನ್ನು ನಂಬಿದ ಈ ಮಹಿಳೆ ಆತನಿಗೆ 21.41 ಲಕ್ಷ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.
ದೆಹಲಿ ಏರ್‌ಪೋರ್ಟ್ ಪಾರ್ಸೆಲ್ ಆಫೀಸ್‌ನಿಂದ ಪಾರ್ಸಲ್ ಬಂದಿದೆ ಎಂದು ಇಬ್ಬರಿಂದ ವೈದ್ಯರ ಪತ್ನಿಗೆ ಕರೆ ಮಾಡಿಸಿದ್ದಾನೆ. ಪಾರ್ಸಲ್ ನಲ್ಲಿ ಬೆಲೆ ಬಾಳುವ ವಸ್ತುಗಳಿವೆ, ಅವುಗಳನ್ನು ಪಡೆಯಲು ಹಣ ಪಾವತಿಸಬೇಕು ಎಂದು ಐದು ಬ್ಯಾಂಕ್‌ಗಳ ಖಾತೆ ನಂಬರ್‌ಗಳನ್ನು ನೀಡಿದ್ದಾನೆ. ಅದನ್ನು ನಂಬಿದ ಇವರು 21,41,500 ಜಮಾ ಮಾಡಿದ್ದಾರೆ. ನಂತರ ಪಾರ್ಸಲ್ ಸಿಗದೇ ಮೋಸ ಹೋಗಿದ್ದಾರೆ.

ವೈದ್ಯ ಹಾಗೂ ವೈದ್ಯರ ಪತ್ನಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕಿಲಾಡಿ ಆರೋಪಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications