ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್ ಸ್ಟ್ರೈಕ್ ವಿಚಾರ:ಶಾಸಕರ ಹೇಳಿಕೆಗೆ ಎಂ.ಬಿ.ಪಾಟೀಲ್ ಹೇಳಿದ್ದಿಷ್ಟು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 03:ಭಾರತೀಯ ವಾಯು ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಿಯಾಂಕ ಖರ್ಗೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸಾಕ್ಷಿ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಏಕೆ ಸಾಕ್ಷಿ ಕೇಳಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.ಸಾಕ್ಷಿ ಕೇಳುವುದು ಸರಿಯಲ್ಲ ಎಂದರು.

ಸರ್ಜಿಕಲ್ ಸ್ಟ್ರೈಕ್ ಹಿಂದಿರುವ ಬಿಜೆಪಿಯ ಷಡ್ಯಂತ್ರ ಶೀಘ್ರ ಬಯಲು: ಖರ್ಗೆಸರ್ಜಿಕಲ್ ಸ್ಟ್ರೈಕ್ ಹಿಂದಿರುವ ಬಿಜೆಪಿಯ ಷಡ್ಯಂತ್ರ ಶೀಘ್ರ ಬಯಲು: ಖರ್ಗೆ

ಸೈನಿಕರ ಸಾವಿನ ಮೇಲೆ ರಾಜಕೀಯ ‌ಮಾಡುವುದು ನಾಚಿಕೆಗೆಡಿನ ಸಂಗತಿ ಎಂದ ಎಂ.ಬಿ.ಪಾಟೀಲ್, ಇಂದಿರಾ ಗಾಂಧಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದ್ದರು. ಭಾರತೀಯ ಸೇನೆ ಯಾವುದೇ ಪಕ್ಷದ ಸೇನೆಯಲ್ಲ.ಸೇನೆಯನ್ನು ಬಳಸಿ ರಾಜಕೀಯ ಮಾಡೋದು ನಾಚಿಕೆಗೇಡಿನ ವಿಷಯ ಎಂದು ತಿಳಿಸಿದರು.

M.B.Patil talked about Priyank Kharge, Koppal MLA Raghavendra Hitnal statement

ನಾವು ಯಾರಿಗೂ ಸಾಕ್ಷಿ ಕೇಳಿಲ್ಲ ಎಂದ ಎಂ.ಬಿ.ಪಾಟೀಲ್, ಭಾರತೀಯ ವಾಯುಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಹೆಮ್ಮೆ ಇದೆ. ಆದ್ರೆ ಕಾರ್ಯಚರಣೆ ನಡೆದ ಬಳಿಕ ಸಹಜವಾಗಿ ಡೋಜರ್ಸ್(ವೀಡಿಯೋ ಸಾಕ್ಷಿ) ಬಿಡುಗಡೆ ಮಾಡಲಾಗುತ್ತದೆ.‌ಅದು ಇದ್ದರೆ ಬಿಡುಗಡೆ ಮಾಡಲಿ. ಸಾಕ್ಷಿ ಬಿಡುಗಡೆ ಮಾಡಿ ಎಂದು ನಾವು ಯಾರಿಗೂ ಒತ್ತಾಯ ಮಾಡುವುದಿಲ್ಲ. ಯಾವುದೇ ತೊಂದರೆ ಇಲ್ಲದೆ ಇದ್ದರೆ ಕಾರ್ಯಚರಣೆಯ ಸಾಕ್ಷ ಬಿಡುಗಡೆ ಮಾಡಲಿ. ತೊಂದರೆ ಇದ್ದರೆ ಸಾಕ್ಷ ಬಿಡುಗಡೆ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಮಾತನಾಡಿದ ಪೂರ್ತಿ ವಿಡಿಯೋ ನನ್ನ ಬಳಿ ಇದೆ. ಈಗ ಅವರು ಉಲ್ಟಾ ಹೊಡೆದಿದ್ದಾರೆ ಅದು ಸರಿಯಲ್ಲ. ಸೈನಿಕರ ಸಾವಿನ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಪಾಟೀಲ್ ಕಿಡಿಕಾರಿದರು.

English summary
IAF Air Strike: M.B.Patil talked about Priyank Kharge, Koppal MLA Raghavendra Hitnal statement.He said that It is not okay to ask for evidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X