Leopard: ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಪ್ಲಾನ್
ಹುಬ್ಬಳ್ಳಿ, ಆಗಸ್ಟ್ 19: ಕರ್ನಾಟಕ ವಾಣಿಜ್ಯ ನಗರಿ, ಛೋಟಾ ಮುಂಬೈ ಅಂತಲೇ ಕರೆಸಿಕೊಳ್ಳುವ ಹುಬ್ಬಳ್ಳಿಯ ಜನರು ಚಿರತೆ ಹಾವಳಿಗೆ ಭಯಭೀತರಾಗಿದ್ದಾರೆ. ಹೌದು, ನಗರದಲ್ಲಿ ಚಿರೆತೆ ಪ್ರತ್ಯಕ್ಷವಾಗಿದ್ದು, ಚಿರತೆಯ ಚಲನವಲನಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗಾಗ ಕಾಣಿಸಿಕೊಂಡು ಹಾವಳಿ ಇಡುತ್ತಿರುವ ಚಿರತೆಯಿಂದ ಯಾವಾಗ ಏನಾಗಿಬಿಡತ್ತಲೋ ಎಂಬ ಚಿಂತೆಯಲ್ಲಿ ಜನ ಬದುಕುತ್ತಿದ್ದಾರೆ.
ಹುಬ್ಬಳ್ಳಿಯ ಮಲಕನಕೊಪ್ಪ ಗ್ರಾಮದಲ್ಲಿ ಚಿರತೆ ಭಾನುವಾರ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯು ಚಿರತೆ ಬೇಟೆಗೆ ಸಿದ್ಧತೆ ನಡೆಸಿದ್ದಾರೆ. ರೈತರ ಜಮೀನಿನಲ್ಲಿ ಚಿರತೆ ಬೇಟೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ಪ್ರಯುಕ್ತ ಚಿರತೆಗಾಗಿ ಬೋನು ಇಡಲಾಗಿದೆ. ಜೊತೆಗೆ ಅಲಲ್ಲಿ ಸಿಸಿ ಟಿವಿ ಕ್ಯಾಮೆರಾವನ್ನು ತಡರಾತ್ರಿಯೇ ಅಳವಡಿಕೆ ಮಾಡಲಾಗಿದೆ.

ಗ್ರಾಮದ ಗುಡ್ಡದ ಬಳಿ ರೈತರ ಹೊಲದ ಮನೆಯ ಮುಂದೆ ಕಟ್ಟಿದ ನಾಯಿಯನ್ನು ಇದೇ ಚಿರತೆ ಗುರುವಾರ ರಾತ್ರಿ ತಿಂದು ಹಾಕಿತ್ತು. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ನಾಯಿ ತಿಂದ ಬಳಿಕ ಸ್ಥಳದ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಚಿರತೆ ಹೆಜ್ಜೆ ಗುರುತು ಪತ್ತೆ
ಅಳವಡಿಕೆಯಾದ ಸಿಸಿ ಕ್ಯಾಮೆರಾದಲ್ಲಿ ಚಿರತೆ ಸಂಚಾರದ ಗುರುತು ಕಂಡಿರಲಿಲ್ಲ. ತಡರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಮದ್ದು ಗುಂಡು ಹಾರಿಸಿ ತೆರಳಿದ್ದರು. ನಂತರ ಮತ್ತೆ ಚಿರತೆ ಹೆಜ್ಜೆ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಅರುಣ ಅಷ್ಟಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅರಣ್ಯಾಧಿಕಾರಿಗಳು ಹುಲಿ ಹಿಡಿಯಲು ಅದಕ್ಕಾಗಿ ಇಟ್ಟ ಬೋನಿನಲ್ಲಿ ನಾಯಿ ಬಿಟ್ಟಿದ್ದಾರೆ. ಅದರ ಸುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಚಿರತೆಯೊಂದಿಗೆ 2 ರಿಂದ 3 ಮರಿ ಚಿರತೆಗಳಿವೆ ಎಂದು ಸುತ್ತಮುತ್ತಲಿನ ರೈತರು ಹೇಳಿದ್ದಾರೆ.
ಗ್ರಾಮಸ್ಥರದಲ್ಲಿ ಹೆಚ್ಚಾದ ಆತಂಕ, ಭಯ
ಈ ಭಾಗದಲ್ಲಿ ರಾತ್ರಿ ಚಿರತೆ ಓಡಾಡುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ರೈತರು ಹೊಲದ ಮನೆಗಳಲ್ಲಿ ಜಾನುವಾರು ಕಟ್ಟಿಹಾಕಿ ಬರುತ್ತಾರೆ. ಜಾನುವಾರುಗಳಿಗೆ ಮೇವು ಹಾಕಲು, ನಿರುಣಿಸಲು ಜಮೀನುಗಳತ್ತ ತೆರಳಲು ಭಯವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿದು ಗ್ರಾಮಸ್ಥರಿಗೆ ನೆಮ್ಮದಿ ಬದುಕು ಕರುಣಿಸಬೇಕು. ನಿಮ್ಮ ಕಾರ್ಯಕಚರಣೆಯನ್ನು ಚುರುಕುಗೊಳಿಸಿ ಎಂದು ಗ್ರಾಮದ ಮುಖ್ಯಸ್ಥರು ತಿಳಿಸಿದ್ದಾರೆ.
ಅರಸಿಕೆರೆಯ ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ
ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೇ ಹಾಸನ ಜಿಲ್ಲೆಯ ಅರಸೀಕೆರೆ ರಸ್ತೆಯ ಬೆಲವತ್ತಹಳ್ಳಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದಷ್ಟೇ ಚಿರತೆ ಪ್ರತ್ಯಕ್ಷವಾಗಿತ್ತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಚಿರತೆ ಕಂಡು ಭಯಭೀತರಾಗಿದ್ದಾರೆ. ಜನರು ಹೊಲ ಗದ್ದೆಗಳಿಗೆ ತೆರಳಲು, ಜಾನುವಾರು ಮೇಯಿಸುವವರು, ವಾಹನ ಸವಾರರು ಜೀವ ಕೈಲಿ ಹಿಡುಕೊಂಡು ಬದುಕಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಪ್ರಯಾಣಿಕರು ರಾತ್ರಿವೇಳೆ ಸಂಚರಿಸುವಾಗ ಎಚ್ಚರ ವಹಿಸುವಂತೆ, ಒಬ್ಬರೇ ಓಡಾಡದಂತೆ ಇಲ್ಲಿನ ಜನರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಈ ಬಗ್ಗೆ ಪರಿಶೀಲಿಸುವಂತೆ ಕೋರಿದ್ದಾರೆ.












Click it and Unblock the Notifications