ಮಹಾದಾಯಿ ವಿಚಾರ ಮೋದಿ ಮಧ್ಯ ಪ್ರವೇಶಕ್ಕೆ ಕೋನರೆಡ್ಡಿ ಆಗ್ರಹ

Posted By: ಧಾರವಾಡ ಪ್ರತಿನಿಧಿ
Subscribe to Oneindia Kannada

ಧಾರವಾಡ, ಡಿಸೆಂಬರ್, 27 : ಮಹಾದಾಯಿ ಸಂಬಂಧ ವಿಧಾನ ಸಭೆಯಲ್ಲಿ ಎರಡು ಬಾರಿ ನಿರ್ಣಯವಾಗಿದೆ ಈ ಕೂಡಲೇ ಪ್ರಧಾನಿ ಮಧ್ಯಸ್ಥಿಕೆವಹಿಸಬೇಕು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.

ಮಹಾದಾಯಿ ಹೋರಾಟ: ಉತ್ತರ ಕರ್ನಾಟಕ ಸ್ತಬ್ಧ

ಉತ್ತರ ಕರ್ನಾಟಕ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ಮಹದಾಯಿ ನೀರಿನ ವಿವಾದ ಇತ್ಯರ್ಥ ಪಡಿಸದಿದ್ದರೆ ಮುಂದೆ ಬಿಜೆಪಿಗೆ ಉತ್ತರ ಕರ್ನಾಟಕಕ್ಕೆ ಪ್ರವೇಶ ನೀಡುವುದು ಕಷ್ಟವಾಗುತ್ತದೆ. ಜನ ಈ ಕಡೆ ಕಾಲಿಡುವುದಕ್ಕೆ ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದ್ದರಿಂದ ಈ ಕೂಡಲೇ ಪ್ರಧಾನಿ ಮಧ್ಯಪ್ರವೇಶಿಸಬೇಕು.

Konareddy urged PM modi intervention on Mahadayi

ಕಾವೇರಿ ವಿವಾದದಲ್ಲಿ ಆ ಭಾಗದ ರಾಜಕಾರಣಿಗಳು ಒಂದಾದಂತೆ ಮಹದಾಯಿ ವಿಷಯದ ಉತ್ತರ ಕರ್ನಾಟಕಭಾಗದ ಎಲ್ಲ ಪಕ್ಷದವರು ಒಂದಾಗಬೇಕಿದೆ. ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಡಿ. 27ರ ಉತ್ತರ ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ?

ಮಹಾದಾಯಿ ವಿವಾದ ಇತ್ಯರ್ಥಗೊಳಿಸಲು ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಬುಧವಾರ ಬಂದ್‌ಗೆ ಕರೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Navalgunda MLA NH Konareddy has urged prime minister Narendra Modi to immediate resolve the Mahadayi river dispute.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ