Hubballi-Mumbai-Ahamdabad Flight: ಈ ವಿಮಾನ ಸೇವೆಯ ಪುನಾರಂಭಕ್ಕೆ ಆಗ್ರಹ, ರೈಲು ಸೇವೆ ವಿಸ್ತರಣೆ

ಹುಬ್ಬಳ್ಳಿ, ಜೂನ್ 16: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಹಲವು ಮನವಿಗಳ ಬಳಿಕ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್-3 ವಿಸ್ತರಣೆಗೆ ಈಗಾಗಲೇ 273 ಕೋಟಿ ರೂ. ಘೋಷಣೆ ಆಗಿದೆ. ಇದರ ಕಾರ್ಯ ತ್ವರಿತಗತಿಯಲ್ಲಿ ನಡೆಯುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಪದಾಧಿಕಾರಿಗಳು ಸಚಿವರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ವಿವಿಧೆಡೆ ತೆರಳುತ್ತಿದ್ದ ಡೊಮೆಸ್ಟಿಕ್ ಏರ್‌ಲೈನ್ ಸೇವೆ ನಿಲ್ಲಿಸಲಾಗಿದೆ. ಇವುಗಳನ್ನು ಮರು ಪ್ರಾರಂಭಿಸುವಂತೆ ಕೆಸಿಸಿಐ ಒತ್ತಾಯಿಸಿದೆ.

KCCI Has Requested to Resume Flight Services From Hubli Airport to Mumbai Kochi and Other Places

ಹುಬ್ಬಳ್ಳಿಯಿಂದ ಮುಂಬೈ, ಜೋಧಪುರ, ಅಹಮದಾಬಾದ್ ಮತ್ತು ಕೊಚ್ಚಿಯಂಥ ಸ್ಥಳಗಳಿಗೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಿಮಾನಗಳ ಸೇವೆಯನ್ನು ಮರು ಪ್ರಾರಂಭಿಸಬೇಕು. ಬೆಳಗಾವಿ- ಸೂರತ್ ವಿಮಾನ ಸೇವೆ ಆರಂಭಿಸಬೇಕು. ಇಂಡಿಗೋ ಏರ್‌ಲೈನ್ಸ್ ಹುಬ್ಬಳ್ಳಿ- ಅಹಮದಾಬಾದ್ ವಿಮಾನ ಸೇವೆ ಹಿಂತೆಗೆದುಕೊಳ್ಳಲಾಗಿದೆ.

ಹುಬ್ಬಳ್ಳಿಯಿಂದ ಇಲ್ಲಿಗೂ ಸೇವೆ ಪುನಾರಂಭಿಸಿ

ಇನ್ನೂ ಸ್ಟಾ‌ರ್ ಏ‌ರ್ ವಿಮಾನಗಳ ಸೇವೆಯು ಟೇಕಾಫ್ ಆಗುವ ಕೊನೆಯ ನಿಮಿಷದಲ್ಲಿ ರದ್ದತಿಯಿಂದ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗಿದೆ. ಅಹಮದಾಬಾದ್, ಗೋವಾ, ಮುಂಬೈ, ಬೆಂಗಳೂರು, ಹಿಂಡನ್ (ದೆಹಲಿ) ಮತ್ತು ತಿರುಪತಿಯಂಥ ನಗರಗಳಿಗೆ ವಿಮಾನಗಳ ಪುನಾರಂಭಕ್ಕೆ ಅವರು ಮನವಿ ಮಾಡಿದರು.

ಅಳ್ಳಾವರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತಾವಿತ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು. ಹುಬ್ಬಳ್ಳಿ-ಅಂಕೋಲಾ ಹಾಗೂ ಹುಬ್ಬಳ್ಳಿ-ಬೆಳಗಾವಿ (ವಯಾ ಕಿತ್ತೂರ್) ರೈಲ್ವೆ ಲೈನ್ ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಅವರು ಕೇಂದ್ರ ಸಚಿವರ ಬಳಿಕ ಮನವಿ ಮಾಡಿಕೊಂಡಿದ್ದಾರೆ.

KCCI Has Requested to Resume Flight Services From Hubli Airport to Mumbai Kochi and Other Places

ಮನವಿಗೆ ಕೇಂದ್ರ ಸಚಿವರ ಭರವಸೆ

ವಾಣಿಜ್ಯೋದ್ಯಮ ಸಂಸ್ಥೆಯ ಮನವಿ ಸ್ವೀಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ್ ಬಿಡಸಾರಿಯಾ, ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ, ಮಹೇಂದ್ರ್ ಸಿಂಘಿ, ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ರೈಲುಗಳ ಸೌಲಭ್ಯ ವಿಸ್ತರಣೆಗೆ ಮನವಿ

ನೈರುತ್ಯ ರೈಲ್ವೆ ವಲಯ (SWR) ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆಗೆ ತೀರ್ಮಾನಿಸಿದೆ. ಹುಬ್ಬಳ್ಳಿ-ರಾಮೇಶ್ವರಂ (ರೈಲು ಸಂಖ್ಯೆ 07355) ವಿಶೇಷ ರೈಲು ಜುಲೈ 6ರಿಂದ ಡಿಸೆಂಬರ್‌ 28ರವರೆಗೆ ಸಂಚಾರ ನಡೆಸಲಿದೆ. ಮರಳಿ ರಾಮೇಶ್ವರಂ-ಹುಬ್ಬಳ್ಳಿ (ರೈಲು ಸಂಖ್ಯೆ07356) ರೈಲು ಸಂಚಾರ ಜುಲೈ1ರಿಂದ ಡಿ. 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ- ಡಾ.MGR ಚೆನ್ನೈ ಸೆಂಟ್ರಲ್‌ (ರೈಲು ಸಂಖ್ಯೆ 22697) ರೈಲು ಸೆಪ್ಟೆಂಬರ್‌ 7ರಿಂದ ಸೆಪ್ಟಂಬರ್ 8ರವರೆಗೆ ಡಾ.MGR ಚೆನ್ನೈ ಸೆಂಟ್ರಲ್‌-ಹುಬ್ಬಳ್ಳಿ (ರೈಲು ಸಂಖ್ಯೆ 22698) ರೈಲು ಬದಲಿ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಪ್ರಕಟಣೆಯಲ್ಲಿ SWR ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+