Get Updates
Get notified of breaking news, exclusive insights, and must-see stories!

ಒಳಮೀಸಲಾತಿ: ದುರ್ಬಲರಿಗೆ ಜೇನುತುಪ್ಪ ಸಿಗಲೆಂದು ಸರ್ಕಾರ ನಿರ್ಧಾರ: ಸಿಎಂ ಹೀಗೆ ಹೇಳಿದ್ದೇಕೆ?

ಹುಬ್ಬಳ್ಳಿ ಮಾರ್ಚ್ 26: ಕರ್ನಾಟಕದಲ್ಲಿ ಬಹಳಷ್ಟು ಜನರು ಜೇನುಗೂಡಿಗೆ ಕೈಹಾಕಬೇಡಿ ಎಂದು ಹೇಳಿದ್ದರೂ. ಆದರೆ ನಾವು ತುಳಿತಕ್ಕೆ ಒಳಗಾಗಿರುವ ಜನರಿಗೆ ಜೇನುತುಪ್ಪ ದೊರೆಯಲಿ ಎಂದು ಒಳಮೀಸಲಾತಿಯ ನಿರ್ಧಾರ ಮಾಡಿದೆವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಯಕ್ರಮವೊಂದಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ತುಳಿತಕ್ಕೊಳಗಾದ, ಹಿಂದುಳಿದ ವರ್ಗಗಳನ್ನು ಜೇನುಗೋಡಿಗೆ ಹೋಲಿಕೆ ಮಾಡಿದ್ದಾರೆ. ಅವರಿಗೆ ಮೀಸಲಾತಿ ಕಲ್ಪಿಸುವುದು ಸುಲಭದ ಕೆಲಸವಲ್ಲ ಎಂಬ ರೀತಿಯಲ್ಲಿ ಜನಾಂಗಗಳಿಗೆ ನ್ಯಾಯ ದೊರಕಿಸುವವರೆಗೂ ವಿಶ್ರಮಿಸುವುದಿಲ್ಲ. ಅವರಿಗೆ ಜೇನು ತುಪ್ಪ ಸಿಗಲಿ ಎಂಬ ಉದ್ದೇಶದಿಂದಲೇ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಮಾರ್ಮಿಕವಾಗಿ ಹೇಳಿದರು.

Karnataka: Will Not Rest Till The Oppressed Classes Are Rendered Justice: CM Bommai

ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಬೇಡಿಕೆ ಸುಮಾರು 30 ವರ್ಷಗಳಿಂದಲೂ ಇದೆ. ಕಾಂಗ್ರೆಸ್ ಅವರಿಗೆ ಆಶ್ವಾಸನೆಗಳನ್ನು ನೀಡಿ ಮೂಗಿಗೆ ತುಪ್ಪ ಹಚ್ಚಿ ಕೊನೆಗೆ ಗಳಿಗೆಯಲ್ಲಿ ಕೈಕೊಟ್ಟಿತು. ಬಿಜೆಪಿಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು, ಅದರೂ ಬದ್ಧತೆಯ ನಮ್ಮ ಸರ್ಕಾರ ವರದಿ ತರಿಸಿ, ಅಧ್ಯಯನ ಮಾಡಿ, ಸಂಪುಟ ಉಪ ಸಮಿತಿ ರಚಿಸಿ, ಕಾನೂನಿನ ಪ್ರಕಾರ ವ್ಯವಸ್ಥಿತವಾಗಿ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕಾಂಗ್ರೆಸ್ ನಾಯಕರು ಹತಾಶಗೊಂಡಿದ್ದಾರೆ: ಸಿಎಂ ವ್ಯಂಗ್ಯ

ಕಾಂಗ್ರೆಸ್ ನಾಯಕರಿಗೆ ತಾವು ಮಾಡದೆ ಇರುವುದನ್ನು ಬಿಜೆಪಿ ಮಾಡಿದೆ ಎಂಬ ಕಾರಣಕ್ಕೆ ಅವರ ಹತಾಶ ಮನೋಭಾವ ಉಂಟಾಗಿದೆ. ಹತಾಶೆಯಿಂದಲೇ ಅವರು ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಕಿಮ್ಮತ್ತಿಲ್ಲ. ಅವರು ಸದಾ ಎಸ್‌ಸಿ, ಎಸ್‌ಟಿ ಅವರನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಅದು. ಸಹಾನುಭೂತಿ ತೋರಿಸುವ ಮೂಲಕ ಮತ ಪಡೆಯಬಹುದು ಎಂದುಕೊಂಡಿದ್ದಾರೆ.

ಬಿಜೆಪಿ ಸರ್ಕಾ ಸಾಮಾಜಿಕ, ಅಭಿವೃದ್ಧಿ, ಸಂಘ-ಸಂಸ್ಥೆಗಳ ಬೇಡಿಕೆ ವಿಚಾರದಲ್ಲಿ ಆಗಲಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಗಳನ್ನು ಮಾಡಿದೆ. ಈ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ನಿರ್ಣಾಯಕ ತೀರ್ಮಾನ ಮಾಡುವ ಸರ್ಕಾರ ಇದೆ ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.

Karnataka: Will Not Rest Till The Oppressed Classes Are Rendered Justice: CM Bommai

ಅಲ್ಪಸಂಖ್ಯಾತರಿಗೆ ಶೇ.4ರ ಬದಲು ಹತ್ತರಷ್ಟು

ಮುಸ್ಲಿಮರಿಗೆ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಿ ಶೇಕಡಾ 4ರಷ್ಟಿದ್ದ ಮೀಸಲಾತಿ ಹಂಚಿ ಅನ್ಯಾಯ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಶೇಕಡಾ 4 ರಲ್ಲಿ ಅವರಿಗೆ ಆರ್ಥಿಕವಾಗಿ ಅರ್ಹತೆ ಇದೆ. ನಾಲ್ಕರ ಬದಲಿಗೆ ಶೇಕಡಾ 10 ರಷ್ಟು ನೀಡಲಾಗಿದೆ. ಅನ್ಯಾಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಹಿತರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗಿದೆ ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು.

ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಮಹದಾಯಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅಷ್ಟರಲ್ಲಿ ಅರಣ್ಯ ಇಲಾಖೆಯ ಅನುಮೋದನೆ ದೊರೆತರೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಉತ್ತರ ಕರ್ನಾಟಕದ ಜೀವನಾಡಿ ಮಹಾದಾಯಿ ನದಿ ವಿಚಾರ ಕುರಿತು ತಿಳಿಸಿದರು.

ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇನ್ನೇನು ಸ್ವಲ್ಪದಿನದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ದಿನಾಂಕ ಘೋಷಣೆ ಆದ ಬಳಿಕವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸರ್ಕಾರ ಬಿಡುಗಡೆ ಮಾಡುತ್ತದೆ. ಅದರಂತೆಯೇ ಈ ಬಾರಿಯೂ ದಿನಾಂಕ ಘೋಷಣೆಯಾದ ನಂತರವೇ ಸರಿಯಾದ ಸಮಯ ನೋಡಿಕೊಂಡು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+