ಸ್ವಾತಂತ್ರ್ಯೋತ್ಸವ ದಿನ: ಬೆಂಗೇರಿ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಬೇಡಿಕೆ

Written By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 29: ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ. ಕೇವಲ ರಾಷ್ಟ್ರಧ್ವಜ ಮಾರಾಟದಿಂದಲೇ ಪ್ರಸಕ್ತ ವರ್ಷ ಎರಡೂವರೆ ಕೋಟಿ ರುಪಾಯಿ ವಹಿವಾಟು ನಡೆಸುವ ಗುರಿ ಹೊಂದಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ

ಕಳೆದ ಹಲವು ವರ್ಷಗಳಿಂದ ಸಂಘವು ದೇಶದ ಇಪ್ಪತ್ತೊಂಬತ್ತು ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಪೂರೈಕೆ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಕೂಡ ಹೆಚ್ಚುತ್ತಿದೆ. ಕಳೆದ ಬಾರಿ ಎರಡು ಕೋಟಿ ರುಪಾಯಿ ವಹಿವಾಟು ನಡೆಸಿದ್ದ ಸಂಘ, ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಮೊದಲೇ ಎರಡೂವರೆ ಕೋಟಿ ರುಪಾಯಿ ವಹಿವಾಟು ನಡೆಸುವ ಸಾಧ್ಯತೆ ಇದೆ.

Karnataka Khadi Gramodyog Samyukta Sangh expect Rs 2.5 crore turnover by national flag sale

ಉತ್ತರ ಪ್ರದೇಶದಿಂದ ಹೆಚ್ಚು ಬೇಡಿಕೆ
ಬೆಂಗೇರಿ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ತಯಾರಿಸುವ ತ್ರಿವರ್ಣ ಧ್ವಜಗಳಿಗೆ ದೇಶಾದ್ಯಂತ ಬೇಡಿಕೆ ಇದ್ದು, ಅತೀ ಹೆಚ್ಚಿನ ಬೇಡಿಕೆ ಉತ್ತರಪ್ರದೇಶದಿಂದ ಬರುತ್ತದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತಿಸ್ ಗಢ, ಕರ್ನಾಟಕ, ಜಾರ್ಖಂಡ, ಕೇರಳ ರಾಜ್ಯಗಳಿಂದ ಬಂದಿವೆ ಎಂದು ಸಂಘದ ಮೂಲಗಳು ಖಚಿತಪಡಿಸಿವೆ.

Karnataka Khadi Gramodyog Samyukta Sangh expect Rs 2.5 crore turnover by national flag sale

ಪ್ರತಿವರ್ಷ ವಹಿವಾಟಿನಲ್ಲಿ ಹೆಚ್ಚಳ
ಅಲ್ಲದೆ ರಾಷ್ಟ್ರಧ್ವಜ ಮಾರಾಟದ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದ್ದು, 2015-16ರಲ್ಲಿ 1.5 ಕೋಟಿ, 2016-17ರಲ್ಲಿ 2 ಕೋಟಿ ಮೌಲ್ಯದ ಧ್ವಜಗಳು ಮಾರಾಟವಾಗಿದ್ದವು. ಪ್ರಸಕ್ತ ವರ್ಷ ಈಗಾಗಲೇ 4.5x3 ಅಳತೆಯ 5000, 3x2 ಅಳತೆಯ 15,000 ಹಾಗೂ 21x14 ಅಳತೆಯ 32 ಧ್ವಜಗಳು ಮಾರಾಟವಾಗಿವೆ.

Karnataka Khadi Gramodyog Samyukta Sangh expect Rs 2.5 crore turnover by national flag sale

ಹುಬ್ಬಳ್ಳಿಯೇ ಮೂಲ
ರಾಷ್ಟ್ರಧ್ವಜಕ್ಕೆ ಹುಬ್ಬಳ್ಳಿ ಬೆಂಗೇರಿಯೇ ಮೂಲವಾದರೂ ಅಗತ್ಯವಿರುವ ಕಚ್ಚಾವಸ್ತುಗಳನ್ನು ಬೇರೆ ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಲಿಮ್ಕಾದಾಖಲೆ ಸೇರಲು ಪಟಪಟಿಸುತ್ತಿರುವ ರಾಷ್ಟ್ರಧ್ವಜ

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿಯಿಂದ ಖಾದಿ ಬಟ್ಟೆ ಪೂರೈಕೆಯಾಗುತ್ತಿದ್ದು, ಬಿಳಿ ಬಣ್ಣದ ಬಟ್ಟೆಯಲ್ಲಿ ಅಶೋಕ ಚಕ್ರವನ್ನು ಹುಬ್ಬಳ್ಳಿಯಲ್ಲಿ ಮುದ್ರಿಸಿ ನಂತರ ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ಹಸಿರು ಮತ್ತು ಕೇಸರಿ ಬಣ್ಣ ಸೇರಿಸಿ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ.

ರಾಷ್ಟ್ರಧ್ವಜಕ್ಕೆ ಹಗ್ಗ ಮತ್ತು ಕುಣಿಕೆಯನ್ನು ಸೇರಿಸಿ, ಇಸ್ತ್ರಿಮಾಡಿದ ನಂತರ ರಾಷ್ಟ್ರಧ್ವಜ ಅಂತಿಮ ಸ್ವರೂಪ ಪಡೆದುಕೊಳ್ಳುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Demand is increasing of national flag produced by Karnataka Khadi Gramodyog Samyukta Sangh of Bengeri, its expected turnover is Rs 2.5 crore for the 2017-18 financial year. Bengeri is only center for producing national flag with BIS approved.
Please Wait while comments are loading...