ಇನ್ನೂ 5 ವರ್ಷ ಕ್ಷೇತ್ರಕ್ಕೆ ಬರಲ್ಲ, ತೊಂದರೆ ಏನು ಎಂದ ಸಂತೋಷ್ ಲಾಡ್
ಹುಬ್ಬಳ್ಳಿ, ಏಪ್ರಿಲ್ 23: ಧಾರವಾಡ ಜಿಲ್ಲೆಯ ಕಲಘಟಗಿ ಇಲ್ಲಿನ ಸ್ಥಳೀಯರು, ಸತತ ಎರಡು ಬಾರಿ ಕ್ಷೇತ್ರದಲ್ಲಿ ಗೆದ್ದು ಬಂದಿರುವ ಸಂತೋಷ್ ಲಾಡ್ ಕ್ಷೇತ್ರಕ್ಕೆ ಚುನಾವಣೆಗೆ ಮಾತ್ರ ಬರುತ್ತಾರೆ, ಬಳಿಕ ಕಾಣೆ ಆಗುತ್ತಾರೆ ಎಂಬ ಆರೋಪಗಳನ್ನು ಮಾಡುತ್ತಿದ್ದರು.
ಆದರೆ, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತಿಯೊಬ್ಬರು ಸಚಿವರಿಗೇ ನೇರವಾಗಿ ಈ ಪ್ರಶ್ನೆ ಕೇಳಿದ್ದು, ಇದಕ್ಕೆ ಖಾರವಾಗಿ ಉತ್ತರ ನೀಡಿದ ಸಚಿವ ಸಂತೋಷ ಲಾಡ್, "ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ನಿನಗೆ ಏನು ತೊಂದರೆ ಆಗೈತಿ? ಸಮಸ್ಯೆ ಇದ್ದರೆ ಪಟ್ಟಿ ಕೊಡು" ಎಂದು ಕಾರ್ಯಕರ್ತನೊಬ್ಬನಿಗೆ ಅವಾಜ್ ಹಾಕಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಆ ವಿಡಿಯೋ ಈಗ ವೈರಲ್ ಆಗಿದೆ. ಕಲಘಟಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತನೊಬ್ಬ ಸಂತೋಷ ಲಾಡ್ ಗೆ ನೀವು ಐದು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಬಂದರೆ ಕಷ್ಟ ಎಂದಿದ್ದಾನೆ. ಈ ಮಾತಿಗೆ ಸಿಟ್ಟಾದ ಸಂತೋಷ ಲಾಡ್, ಉಡಾಫೆಯಿಂದ ಉತ್ತರಿಸಿದ್ದಾರೆ.

ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೂ ಬರಲ್ಲ. ನಿನಗೆ ತೊಂದರೆ ಏನೈತಿ ಈಗ. ನಿನ್ನ ಸಮಸ್ಯೆಗಳ ಪಟ್ಟಿ ಕೊಡು. ಇನ್ನೂ ಐದು ವರ್ಷ ಬರಲ್ಲ ನೋಡು ಎಂದು ಗದರಿಸಿದ್ದಾರೆ. ಸಂತೋಷ ಲಾಡ್ ಉಡಾಫೆ ಮಾತಿಗೆ ಕಾರ್ಯಕರ್ತನೇ ದಂಗಾಗಿ ಹೋಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications