PPE Kit Scam: ಏಜೆಂಟ್ ರೀತಿ ವರ್ತಿಸುವ ನ್ಯಾ.ಡಿ.ಕುನ್ಹಾ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ನವೆಂಬರ್ 11: ಕರ್ನಾಟಕದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಪಿಪಿಇ ಕಿಟ್ ಖರೀದಿಯಲ್ಲಿನ ಹಗರಣ ಕುರಿತು ವರದಿ ಸಲ್ಲಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ನೀವು ಏಜೆಂಟ್ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವಾಗ್ದಾಳಿ ನಡೆಸಿದ್ದಾರೆ.

ಶಿಗ್ಗಾವಿ ಉಪಚುನಾವಣೆ ಸಂಬಂಧ ಭಾನುವಾರ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ಪಿಪಿಇ ಕಿಟ್ ತನಿಖೆಯ ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಅವರು ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು.

Karnataka Covid Kit Scam Probe Pralhad Joshi said Justice D Cunha acting like an agent

ಕೋವಿಡ್ ಕಾಲದಲ್ಲಿ 2020ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯು ನಡೆದಿದೆ ಎನ್ನಲಾದ ಪಿಪಿಇ ಕಿಟ್‌ಗಳ ಖರೀದಿಯ ಅಕ್ರಮ ತನಿಖೆಯನ್ನು ಸಚಿವರು ಟೀಕಿಸಿದ್ದಾರೆ. ಚೀನಾ ಮೂಲ ಕಂಪನಿ/ಸಂಸ್ಥೆಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ಕರ್ನಾಟಕ ಸರ್ಕಾರ ಅಂದು ಖರೀದಿ ಮಾಡಿತ್ತು. ಆಗ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರಿದ್ದರು. ಸದ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾ.ಡಿ'ಕುನ್ಹಾ ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಚುನಾವಣೆ ಹಾಗೂ ಉಪಚುನಾವಣಾ ಸಮಯದಲ್ಲಿ ನ್ಯಾಯಮೂರ್ತಿ ಮೈಕಲ್ ಡಿ'ಕುನ್ಹಾ ತಮ್ಮ ವಿರುದ್ಧವೇ ಮಧ್ಯಂತರ ವರದಿ ಏಕೆ ಬಿಡುಗಡೆ ಮಾಡಿದರು?, ರಾಜ್ಯ ಕಾಂಗ್ರೆಸ್ ಏನು ಮಾಡುತ್ತಿದೆ? ಒಂದೂವರೆ ವರ್ಷದಿಂದ ಈ ನಾಟಕ ಮಾಡುತ್ತಲೇ ಇದೆ ಎಂದು ಅವರು ಸರ್ಕಾರದ ವಿರುದ್ಧವು ಗುಡಗಿದ್ದಾರೆ.

ನೋಟಿಸ್ ನೀಡದೇ ವರದಿ ಜಾರಿ

ಇನ್ನು ಪಿಪಿಇ ಕಿಟ್ ಪ್ರಕರಣ ತನಿಖೆ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಥವಾ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಮಧ್ಯಂತರ ನೋಟಿಸ್ ಕೊಡದೆಯೇ ನ್ಯಾ.ಡಿ.ಕುನ್ಹಾ ಆಯೋಗವು ಮಧ್ಯಂತರ ವರದಿ ಬಿಡುಗಡೆ ಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ವಾಲ್ಮೀಕಿ ಹಗರಣದಲ್ಲಿ ರೂಪಾಯಿ 190 ಕೋಟಿ ಅಲ್ಲ ರೂ.90 ಕೋಟಿ ವಂಚನೆ ಮಾಡಿದ್ದರ ಬಗ್ಗೆ ಮಾತನಾಡಿದ್ದೀರಿ. ಕಾಗೆ ಎಷ್ಟು ತಿಂದರೂ ಅದು ಕಾಗೆಯೇ. ನಿಮ್ಮ ಚುನಾವಣೆ ತಂತ್ರಗಳು, ಸುಳ್ಳುಗಳು, ಸುಳ್ಳು ಆರೋಪಗಳ ನಡೆಯುವುದಿಲ್ಲ. ಅದರಲ್ಲಿ ಯಾವ ಹುರುಳಿಲ್ಲ ಎಂದು ಅವರು ತಿರುಗೇಟು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+