PM Modi 3.0: 'ಮೋದಿ ಇಡ್ಲಿ ವಡಾ ಸೆಂಟರ್'ನಲ್ಲಿ ಉಚಿತ ಆಹಾರ ಸವಿಯಿರಿ
ಹುಬ್ಬಳ್ಳಿ, ಜೂನ್ 09: ಭಾರತವು ಸಾರ್ವತ್ರಿಕ ಚುನಾವಣೆ ಪೂರ್ಣವಾಗಿ ಮುಗಿಸಿ ಅಧಿಕಾರ ಸ್ವೀಕಾರ ಹಾಗೂ ಹೊಸ ಸರ್ಕಾರ ರಚನೆಯ ಸಂಭ್ರಮದಲ್ಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸರ್ಕಾರ ರಚಿಸಲಿದೆ. ನರೇಂದ್ರ ಮೋದಿಯವರು ಇಂದು ಮೂರನೇ ಭಾರಿಗೆ ಅಧಿಕಾರ ಗದ್ದುಗೆ ಏರಲಿದ್ದಾರೆ. ಈ ಸಂಬಂಧ ಬಿಜೆಪಿ ಕಟ್ಟಾ ಅಭಿಮಾನಿಯೊಬ್ಬರು ಗ್ರಾಹಕರಿಗೆ ಉಚಿತ ಆಹಾರ ವಿತರಣೆ ಮೂಲಕ ತಮ್ಮದೇ ಆದ ರೀತಿಯಲ್ಲಿ ಪ್ರಧಾನಿಗೆ ಸಹಕಾರ ನೀಡುತ್ತಿದ್ದಾರೆ.
ನರೇಂದ್ರ ಮೋದಿ ಮೂರನೇ ಭಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ಇಂದು ನವದೆಹಲಿಯಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಇತ್ತ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಕಲಘಟಗಿಯಲ್ಲಿ ಹೋಟೆಲ್ ವ್ಯಾಪಾರಿಯೊಬ್ಬರು ಉಚಿತವಾಗಿ ಬೆಳಗಿನ ತಿಂಡಿಯನ್ನು ವಿತರಿಸುತ್ತಿದ್ದಾರೆ. ಇಲ್ಲಿ ಸಿಗುವ ಇಡ್ಲಿ, ಪಲಾವ್ ಹಾಗೂ ಸ್ವೀಟ್ ಅನ್ನು ಗ್ರಾಹಕರಿಗೆ ಉಚಿತವಾಗಿ ನೀಡುವ ಮೂಲಕ 'ನಮೋ ಪದಗ್ರಹಣದ ವಿಜಯೋತ್ಸವ'ವನ್ನು ಸಾರ್ವಜನಿಕರೊಂದಿಗೆ ಆಚರಿಸುತ್ತಿದ್ದಾರೆ.
'ಮೋದಿ ಇಡ್ಲಿ ವಡಾ ಸೆಂಟರ್' ಹೋಟೆಲ್
ಇಂದು ಬೆಳಗ್ಗೆಯಿಂದಲೇ ವಿತರಿಸಲಾಗುತ್ತಿದೆ. ಹೋಟೆಲ್ ಮಾಲೀಕ ದೀಪಕ್ ನಿಕ್ಕಮ್ ಅವರ ಮತ್ತವರ ಕುಟುಂಬ ಹಾಗೂ ಗೆಳೆಯರ ಬಳಗದ ವತಿಯಿಂದ ವಿತರಣೆ ಕಲಘಟಗಿಯಲ್ಲಿ ಉಚಿತ ಆಹಾರ ವಿತರಿಸುತ್ತಿದ್ದಾರೆ. ಇವರು ಮೋದಿ ಅಪ್ಪಟ ಅಭಿಮಾನಿ ಆಗಿರುವ ಕಾರಣ ಹೋಟೆಲ್‌ಗೆ 'ಮೋದಿ ಇಡ್ಲಿ ವಡಾ ಸೆಂಟರ್' ಎಂದು ಹೆಸರಿಟ್ಟಿದ್ದಾರೆ. ಪ್ರಧಾನಿ ಮತ್ತೆ ಅಧಿಕಾರಕ್ಕೆ ಬರುವ ಹಿನ್ನೆಲೆಯಲ್ಲಿ ಅವರಲ್ಲಿ ಸಂಭ್ರಮ ಹೆಚ್ಚಾಗಿದೆ.

ದೀಪಕ್ ಅವರು ಪ್ರಧಾನಿ ಮೋದಿಯ ಪದಗ್ರಹಣವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. ತಮ್ಮ ಇಡ್ಲಿ ಸೆಂಟರ್ ಪಕ್ಕ ಪ್ರಧಾನಿ ಮೋದಿಯವರ ದೊಡ್ಡ ಭಾವಚಿತ್ರ ಹಾಕಿದ್ದಾರೆ. ಈ ಪೋಸ್ಟರ್‌ನಲ್ಲಿರುವ ಪ್ರಧಾನಿ ಮೋದಿ ಉಚಿತ ಆಹಾರಕ್ಕೆ ಕೈ ಬೀಸಿ ಕರೆದಂತಿದೆ.
ಪ್ರಧಾನಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿಸಿದ್ದಾರೆ. ನಾಡಿನ ಜನತೆಗೆ ಮೋದಿಯಿಂದ ಇನ್ನಷ್ಟು ಜನಪರ ಕಾರ್ಯ ನೀರಿಕ್ಷೆ ಇದೆ ಎಂದು ಹೋಟೆಲ್ ಮಾಲೀಕರ ದೀಪಕ್ ಅವರು ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಇಂದು ಅವರ ಹೋಟೆಲ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಉಚಿತ ಆಹಾರ ಸೇವಿಸಿ, ನಮೋ ಮತ್ತೆ ಪ್ರಧಾನಿ ಆಗಿದ್ದಕ್ಕೆ ಹೋಟೆಲ್ ಮಾಲೀಕರಿಗೆ ಶುಭಾಶಯ ತಿಳಿಸಿದರು.












Click it and Unblock the Notifications