ಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆ

ಬ್ಬಳ್ಳಿ, ನವೆಂಬರ್ 27 : ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ದೇಶಗಳಿಗೆ ಇಂಡಿಗೋ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 1ರಿಂದ ಜಾರಿಗೆ ಬರುವಂತೆ ವಿವಿಧ ದೇಶಗಳಿಗೆ ವಿಮಾನ ಸೇವೆ ಆರಂಭವಾಗಲಿದೆ.

ಇಂಡಿಗೋ ಏರ್‌ಲೈನ್ಸ್ ಹುಬ್ಬಳ್ಳಿಯಿಂದ ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾದ ವಿವಿಧ ದೇಶಗಳನ್ನು ಸಂಪರ್ಕಿಸಲಿದೆ. ಅಬುದಾಬಿ, ದುಬೈ, ದೋಹಾ, ಕುವೈತ್, ಮಸ್ಕತ್ ಮುಂತಾದ ದೇಶಗಳಿಗೆ ವಿಮಾನ ಸೇವೆ ಒದಗಿಸಲಿದೆ.

IndiGo Airlines to connect Dubai, Abu Dhabi

ಸಿಂಗಾಪುರ, ಹಾಂಗ್‌ಕಾಂಗ್, ಫುಕೆಟ್, ಬ್ಯಾಂಕಾಕ್, ಕೊಲಂಬೋ ದೇಶಗಳಿಗೆ ಸಹ ಇಂಡಿಗೋ ವಿಮಾನಗಳು ಹುಬ್ಬಳ್ಳಿಯಿಂದ ಹಾರಾಟ ನಡೆಸಲಿವೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಜನರು ವಿದೇಶಗಳಿಗೆ ಪ್ರಯಾಣ ಬೆಳೆಸಲು ಬೆಂಗಳೂರಿಗೆ ಬರುವುದು ತಪ್ಪಲಿದೆ.

'ನಾವು ಉಡಾನ್ ಯೋಜನೆ ಮೂಲಕ ವಿಮಾನ ಹಾರಾಟವನ್ನು ಆರಂಭಿಸಿದೆವು. ಈಗ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭವಾಗಿದೆ. ಹುಬ್ಬಳ್ಳಿ, ಧಾರವಾಡ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ' ಎಂದು ಪ್ರಹ್ಲಾದ್ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಅಂತರಾಷ್ಟ್ರೀಯ ದರ್ಜೆಗೆ ಏರಿಸಲಾಗಿದೆ. ನೂತನ ಟರ್ಮಿನಲ್ ನಿರ್ಮಿಸಲಾಗಿದ್ದು, 2,600 ಮೀ ರನ್‌ವೇ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ದೊಡ್ಡ ವಿಮಾನ ನಿಲ್ದಾಣವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಬದಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+