ಹುಬ್ಬಳ್ಳಿಯಲ್ಲಿ ಡಿ.2ರಿಂದ ಇನ್‌ಕಾಮೆಕ್ಸ್ ಕೈಗಾರಿಕಾ ವಸ್ತು ಪ್ರದರ್ಶನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್, 21 : ನಗರದಲ್ಲಿ ಡಿಸೆಂಬರ್ 2 ರಿಂದ 6ರ ವರೆಗೆ ಇನ್ ಕಾಮೆಕ್ಸ್-2016 ಬೃಹತ್ ಕೈಗಾರಿಕಾ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ರಮೇಶ ಎ.ಪಾಟೀಲ ತಿಳಿಸಿದರು.

ಸೋಮವಾರ ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದ ಮಧ್ಯದಲ್ಲಿರುವ ಅಮರಗೋಳ ಎಪಿಎಂಸಿ ಆವರಣದಲ್ಲಿರುವ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು ಎಂದರು. [ಹುಬ್ಬಳ್ಳಿ: ಜರ್ಮನ್ ಸಹಯೋಗದಲ್ಲಿ ಇನ್‌ಕಾಮೆಕ್ಸ್-2016]

'Incomex-2016' Industrial Exhibition in Hubballi

ಈ ಹಿಂದೆ 1996, 2002, 2007, 2013 ರ ವಸ್ತು ಪ್ರದರ್ಶನ ಯಶಸ್ವಿಯಾಗಿದ್ದು. ಈಗ 2016 ರ ಈ ವಸ್ತು ಪ್ರದರ್ಶನದಲ್ಲಿ ಇಂಜಿನೀಯರಿಂಗ್, ಆಟೋಮೋಬೈಲ್ಸ್, ಟ್ರಾಕ್ಟರ್ ಟ್ರೇಲರ್, ಇಂಡಸ್ಟ್ರೀಯಲ್ ವಾಲ್ಸ್ವ್ ಪಂಪ್, ಹೆವಿ ಮೆಟಲ್ ಇಂಜಿನೀಯರಿಂಗ್, ಫ್ಯಾಬ್ರಿಕೇಟಿಂಗ್ ಇಂಡಸ್ಟ್ರೀ ಸೇರಿದಂತೆ ಅನೇಕ ಆಹಾರ ಉತ್ಪನ್ನ ಘಟಕಗಳು ಭಾಗವಹಿಸಲಿವೆ ಎಂದರು.

ಈ ವಸ್ತು ಪ್ರದರ್ಶನದಿಂದ ಉತ್ತರ ಕರ್ನಾಟಕದ ಉತ್ಪನಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು

ವಸ್ತು ಪ್ರದರ್ಶನದೊಂದಿಗೆ ವಿಚಾರ ಸಂಕಿರಣಗಳು ಹಾಗೂ ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಲಾಗುವುದು. ಇನ್ನು ವಸ್ತು ಪ್ರದರ್ಶನದಲ್ಲಿ ಎಫ್ ಕೆಸಿಸಿಐ ನ ಕಮೀಶನರ್ ರಿತ್ವಿಕ್ ಪಾಂಡೆ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.

ಯುವ ಉದ್ಯಮಿಗಳಿಗೆ, ರಫ್ತುದಾರರಿಗೆ, ತಾಂತ್ರಿಕ ವರ್ಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲಾಗುವುದು. ಸ್ಟಾರ್ಟ್ ಆಪ್ ಇಂಡಿಯಾ, ಸ್ಟಾಂಡ ಅಪ್, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾಗಳಿಗೆ ವೇದಿಕೆ ಕಲ್ಪಿಸಲಾಗುವುದು.

ಒಟ್ಟು 407 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಕೃಷಿ ಉತ್ಪನ್ನಗಳನ್ನು ಕೂಡ ಇಲ್ಲಿ ಪ್ರದರ್ಶನಕ್ಕಿಡಲಾಗುತ್ತಿದೆ ಎಂದ ಪಾಟೀಲ, ಬಸಲಿಂಗಯ್ಯ ಹಿರೇಮಠ, ಜಯತೀರ್ಥ ಮೇವುಂಡಿ ಮತ್ತು ಇತರೆ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಅನಂತಕುಮಾರ್, ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವರಾದ ಆರ್.ವಿ.ದೇಶಪಾಂಡೆ, ರಮೇಶ ಜಾರಕಿಹೊಳಿ, ವಿನಯ ಕುಲಕರ್ಣಿ, ಎಚ್.ಕೆ ಪಾಟೀಲ, ಸಂಸದ ಪ್ರಹ್ಲಾದ ಜೋಶಿ, ಪ್ರಭಾಕರ ಕೋರೆ ಮತ್ತಿತರರು ಆಗಮಿಸಲಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi gearing up for'Incomex-2016' industrial exhibition. Pre-exhibition starts on December 02 to 06, at Amargol APMC ground, Hubballi.
Please Wait while comments are loading...