• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳು: ಹುಬ್ಬಳ್ಳಿಯಲ್ಲಿ ಜನರನ್ನು ಸೆಳೆದ ಗಾಳಿಪಟ ಉತ್ಸವ

|

ಹುಬ್ಬಳ್ಳಿ, ಜನವರಿ 21: ಪ್ರಾಣಿ, ಪಕ್ಷಿ, ಡ್ರ್ಯಾಗನ್ ಮುಂತಾದ ಗಾಳಿಪಟಗಳು ಬಾನಂಗಳದಲ್ಲಿ ಬಣ್ಣ-ಬಣ್ಣದ ಚಿತ್ತಾರವನ್ನು ಮೂಡಿಸಿ ಜನರನ್ನು ಸೆಳೆದವು. ಹೌದು, ಎರಡು ದಿನಗಳ ಗಾಳಿಪಟ ಉತ್ಸವ ಹುಬ್ಬಳ್ಳಿಯಲ್ಲಿ ಜನರನ್ನು ಆಕರ್ಷಿಸಿದವು.

ಹುಬ್ಬಳ್ಳಿಯ ಕುಸಗಲ್ ರಸ್ತೆ ಬಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಕ್ಷಮತಾ ಸಂಸ್ಥೆ ಎರಡು ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜನೆ ಮಾಡಿತ್ತು. ಸ್ವತಃ ಪ್ರಹ್ಲಾದ್ ಜೋಶಿ ಗಾಳಿಪಟ ಹಾರಿಸಿ ಉತ್ಸವದಲ್ಲಿ ಪಾಲ್ಗೊಂಡರು.

ನಾಲ್ಕು ವರ್ಷದ ಬಾಲಕಿಯ ಕತ್ತು ಸೀಳಿದ ಗಾಳಿಪಟ ದಾರ

15 ದೇಶಗಳ 32 ಗಾಳಿಪಟ ತಜ್ಞರು ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಗಾಳಿಪಟಗಳನ್ನು ಹಾರಿಸಿದರು. ವಿವಿಧ ಬಗೆಯ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸುವುದನ್ನು ಜನರು ಕಣ್ತುಂಬಿಕೊಂಡರು. ಗಾಳಿಪಟ ಹಾರಿಸಲು ಅಪಾಯಕಾರಿಯಾದ ಮಂಜಾದಾರ ಬಳಕೆ ಮಾಡದಂತೆ ಜಾಗೃತಿಯನ್ನು ಮೂಡಿಸಲಾಯಿತು.

ಬೆಳಗಾವಿ: ಬಾನಂಗಳದಲ್ಲಿ ಹಾರಿದ ನಗ್ನ ಚಿತ್ರವುಳ್ಳ ಗಾಳಿಪಟ

ಉತ್ಸವ ನೋಡಲು ಬಂದ ಮಕ್ಕಳಿಗೆ ಗಾಳಿಪಟವನ್ನು ನೀಡಲಾಅಯಿತು. ಚಿತ್ರಕಲಾ ಸ್ಪರ್ಧೆ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಜನವರಿ 20 ಮತ್ತು 21ರಂದು ನಡೆದ ಗಾಳಿಪಟ ಉತ್ಸವದ ಜೊತೆ ಹಮ್ಮಿಕೊಳ್ಳಲಾಗಿತ್ತು.

ಗಾಳಿಪಟ ಹಾರಿಸಲು ಬಳಸುವ ನೈಲಾನ್ ದಾರಕ್ಕೆ ನಿಷೇಧ

ವಿವಿಧ ಬಗೆಯ ಗಾಳಿಪಟಗಳು

ವಿವಿಧ ಬಗೆಯ ಗಾಳಿಪಟಗಳು

ದೊಡ್ಡ ಗಾತ್ರದ ಗರುಡ, ಹಾವು, ಗೊಂಬೆ, ಮೀನು, ಕೋಬ್ರಾ, ಸಾಂತಾಕ್ಲಾಸ್ ಸೇರಿದಂತೆ ವಿವಿಧ ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಿ ಜನರಲ್ಲಿ ರೋಮಾಂಚನ ಮೂಡಿಸಿದವು. ಸಾವಿರಾರು ಜನರು ಬಗೆ-ಬಗೆಯ ಗಾಳಿಪಟಗಳನ್ನು ಕಣ್ತುಂಬಿಕೊಂಡರು.

ವಿವಿಧ ದೇಶಗಳ ಜನರ ಆಗಮನ

ವಿವಿಧ ದೇಶಗಳ ಜನರ ಆಗಮನ

ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಲಂಡನ್, ಇಂಗ್ಲೆಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳ ಜನರು ಪಾಲ್ಗೊಂಡಿದ್ದರು. ವಿವಿಧ ಬಗೆಯ ಗಾಳಿಪಟಗಳನ್ನು ಹಾರಿಸಿ ಜನರನ್ನು ರಂಜಿಸಿದರು.

ಗಮನ ಸೆಳೆದ ಉತ್ಸವ

ಗಮನ ಸೆಳೆದ ಉತ್ಸವ

ಎರಡು ದಿನಗಳ ಗಾಳಿಪಟ ಉತ್ಸವದಲ್ಲಿ ಗಾಂಧಿಜಿ ಗಾಳಿಪಟ, ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಸಂದೇಶ ಸಾರುವ ಗಾಳಿಪಟ, ಸರಣಿಗಾಳಿಪಟಗಳು ಇದ್ದವು. ರಾತ್ರಿವೇಳೆ ಲೇಸರ್ ಮತ್ತು ಎಲ್‌ಇಡಿ ಲೈಟ್ ಗಾಳಿಪಟಗಳು ಜನರ ಮೆಚ್ಚುಗೆಗೆ ಪಾತ್ರವಾದವು.

ಆಗಸದಲ್ಲಿ ಹಾರಾಡಿದ ಡ್ರ್ಯಾಗನ್

ಆಗಸದಲ್ಲಿ ಹಾರಾಡಿದ ಡ್ರ್ಯಾಗನ್

ಗಾಳಿಪಟ ಉತ್ಸವದಲ್ಲಿ ದೊಡ್ಡ ಡ್ರ್ಯಾಗನ್ ಎಲ್ಲರ ಗಮನ ಸೆಳೆಯಿತು. ಭೂಮಿ ಮೇಲೆ 15 ಕೆಜಿ ಇದ್ದ ಡ್ರ್ಯಾಗನ್ ಆಗಸದಲ್ಲಿ ಹಾರಾಡಿದಾಗ ಇನ್ನೂ ಭಾರವಾಗುತ್ತದೆ.

English summary
In pics : Hubballi witnessed for the two days of colorful Kite Festival 2020. Here are pics of festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X