Cyber Fraud: ಬರೋಬ್ಬರಿ 270ಕ್ಕೂ ಹೆಚ್ಚು ನಕಲಿ ಖಾತೆ ತೆರೆದು ವಂಚನೆ: ಬಂಧನ

ಹುಬ್ಬಳ್ಳಿ, ಜುಲೈ 17: ಉತ್ತರ ಕರ್ನಾಟಕದಲ್ಲಿ ಬೃಹತ್ ಸೈಬರ್ ಜಾಲವೊಂದನ್ನು ಬೇದಿಸಿರುವ ಹುಬ್ಬಳ್ಳಿ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ವಂಚನೆಗೆ ಸಂಬಂಧಿಸಿದ ಡಿಜಿಟಲ್ ಸೇರಿದಂತೆ ಹಲವು ದಾಖಲೆಗಳನ್ನು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಸೈಬ‌ರ್ ಕ್ರೈಂ ಠಾಣೆ ಪೊಲೀಸರು, ದೆಹಲಿಯಲ್ಲಿ ಇಬ್ಬರು ಮತ್ತು ಮುಂಬೈಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿ ಕೆಲ ದಾಖಲೆ ವಶಪಡಿಸಿಕೊಂಡು, ಕೆಲ ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ವಂಚನೆ ಆಗುತ್ತಿದ್ದ ₹60 ಲಕ್ಷ ಹಣವನ್ನು ತಡೆದಿದ್ದಾರೆ.

In Hubballi Cyber Fraud with Open More 270 Fake Bank Accounts 3 Arrested

ದೆಹಲಿಯ ನಿಖಿಲಕುಮಾರ್ ರೌನಿ ಮತ್ತು ಸಚಿನ್‌ ಬೋಲಾ ಹಾಗೂ ಮುಂಬೈಯ ನಿಗಮ್ ಬಂಧಿತ ಆರೋಪಿಗಳು. ಮೂವರನ್ನು ಹುಬ್ಬಳ್ಳಿಗೆ ಕರೆ ತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಸಲಿಗೆ ನಡೆದಿರುವುದು ಏನು?

ಇಬ್ಬರು ಆರೋಪಿಗಳು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, ಡಾರ್ಕ್‌ನೆಟ್‌ಲ್ಲಿ ಸಕ್ರಿಯರಾಗಿ ಕೋಡಿಂಗ್ ಮತ್ತು ಡಿ-ಕೋಡಿಂಗ್ ಮಾಡುವಲ್ಲಿ ಪರಿಣಿತಿ ಹೊಂದಿದ್ದರು. ಈ ಹಿಂದೆ ಐಟಿ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡಿ ಹೊರಬಂದಿದ್ದರು. ಇನ್ನೊಬ್ಬ ಆರೋಪಿ ಬಟ್ಟೆ ವ್ಯಾಪಾರಿ.

ಈ ಮೂವರು ಕರ್ನಾಟಕ ಸೇರಿ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಿಕೊಂಡಿದ್ದಾರೆ. ಎಲ್ಲ ವಂಚನೆಗಳನ್ನು ಇವರು ಆನ್‌ಲೈನ್ ಮೂಲಕ ನಡೆಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

In Hubballi Cyber Fraud with Open More 270 Fake Bank Accounts 3 Arrested

ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಸಾರ್ವಜನಿಕರನ್ನು ವಂಚಿಸಿ ಗಳಿಸಿದ ಹಣವನ್ನು ಆರೋಪಿಗಳು ಸರ್ಕಾರಿ ಮತ್ತು ಖಾಸಗಿಯ ವಿವಿಧ ಬ್ಯಾಂಕ್‌ಗಳ 37 ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ನಂತರ ಆ ಹಣವನ್ನು ದೇಶದ ವಿವಿಧ ಬ್ಯಾಂಕ್‌ಗಳಲ್ಲಿನ 270ಕ್ಕೂ ನಕಲಿ ಖಾತೆಗೆ ವರ್ಗಾಯಿಸಿಕೊಂಡು, ನಂತರ ಡ್ರಾ ಮಾಡಿಕೊಳ್ಳುತ್ತಿದ್ದರು. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಂದಾಜು ನೂರಾರು ಕೋಟಿಗೂ ಅಧಿಕ ಹಣ ವರ್ಗಾವಣೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಆನ್‌ಲೈನ್‌ ವಂಚನೆ ಕುರಿತು ಪ್ರಕರಣ ದಾಖಲಾಗಿತ್ತು. ಅದರ ಜಾಡು ಹಿಡಿದ ಪೊಲೀಸರಿಗೆ, ವಂಚಕರ ಜಾಲ ದೇಶದೆಲ್ಲೆಡೆ ವಿಸ್ತರಿಸಿರುವುದು ಗೊತ್ತಾಯಿತು. ಹಣ ವರ್ಗಾವಣೆಯಾದ ಬ್ಯಾಂಕ್, ಸ್ಥಳ, ಖಾತೆ ವಿವರ, ವಿಳಾಸ, ಮೊಬೈಲ್ ಸಂಪರ್ಕ ಸಂಖ್ಯೆ ಮಾಹಿತಿ ಕಲೆಹಾಕಿ, ವಿಚಾರಣೆ ತೀವ್ರಗೊಳಿಸಿದ್ದರು. ಆಗ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಸಕಾರಣವಿಲ್ಲದೆ ಹಣ ವಹಿವಾಟು ಆಗಿರುವುದು ಕಂಡು ಬಂದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಯಾರದ್ದೋ ಹೆಸರಲ್ಲಿರುವ ಬ್ಯಾಂಕ್‌ ಖಾತೆಗೆ ಇನ್ಯಾರದ್ದೋ ಹೆಸರಲ್ಲಿ ಇರುವ ಮೊಬೈಲ್ ನಂಬರ್ ಜೋಡಣೆ ಮಾಡಿದ್ದರು. ಬ್ಯಾಂಕ್ ಖಾತೆ ವಿಳಾಸ ಅಸ್ಸಾಂ ರಾಜ್ಯದ್ದಾಗಿದ್ದರೆ ಮೊಬೈಲ್ ಸಂಖ್ಯೆ ವಿಳಾಸ ಕರ್ನಾಟಕದ್ದಾಗಿದೆ. ಹೀಗೆ ಬೇರೆ ಬೇರೆ ರಾಜ್ಯಗಳ ನಿವಾಸಿಗಳ ಹೆಸರಲ್ಲಿ ಬ್ಯಾಂಕ್‌ಗಳಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. 270ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಂದ ಹಣ ವಹಿವಾಟು ನಡೆದಿದೆ. ಹೀಗಾಗಿ ಮೊತ್ತದ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+