• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಡಿಕೆ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ ಅದು ದುರ್ದೈವ

|
   ದೋಸ್ತಿ ಸಂಕಟಕ್ಕೆ ನೆರವಾಗ್ತಾರ ಕುಮಾರಣ್ಣ..? | hd kumaraswamy | Oneindia Kannada

   ಹುಬ್ಬಳ್ಳಿ, ಆಗಸ್ಟ್ 30: ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ.

   ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜೋಶಿ, ಡಿಕೆಶಿಯವರನ್ನು ಉಲ್ಲೇಖಿಸಿ, " ಉಪ್ಪು ತಿಂದವರು ನೀರು ಕುಡಿಯಲೇ ಬೇಕು" ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

   ರಾಜಕೀಯ ಪ್ರೇರಿತ ತಂತ್ರವನ್ನು ಎದುರಿಸಿ ಗೆಲ್ಲುವೆ: ಡಿಕೆಶಿ

   " ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯಂತೆ, ಒಂದು ವೇಳೆ ಕುಮಾರಸ್ವಾಮಿ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ, ಅದು ದುರ್ದೈವ" ಎಂದು ಜೋಶಿ ಹೇಳಿದ್ದಾರೆ.

   " ಇಡಿ ಸಮನ್ಸ್ ಜಾರಿ ಮಾಡಿದ ವಿಚಾರವನ್ನು ಇಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು, ಇದರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ" ಎಂದು ಜೋಶಿ, ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

   " ಅಧಿಕಾರ ಇದ್ದಾಗ ಜನರ ಬಳಿ ಹೋಗುವವರು, ಅಧಿಕಾರ ಹೋದ ಕೂಡಲೇ ಮಜಾ ಮಾಡಲು ಹೋಗಿದ್ದಾರೆ" ಎಂದು ಕುಮಾರಸ್ವಾಮಿಯವರ, ಮಲೇಷ್ಯಾ ಪ್ರವಾಸವನ್ನು ಜೋಶಿ ವಿಶ್ಲೇಷಿಸಿದ್ದಾರೆ.

   ಸಂಸತ್ತಿಗೆ ಗೈರು: ಸಚಿವರಿಗೆ ಕಾದಿದೆ ಆಘಾತ!

   " ರಾಜಕೀಯ ಪ್ರೇರಿತ ದಾಳಿ ನನ್ನ ಮೇಲೆ 2017ರಿಂದ ನಡೆಯುತ್ತಲೇ ಇದೆ. ಆದರೆ ಇವೆಲ್ಲವನ್ನೂ ನಾನು ಎದಿರುಸುತ್ತೇನೆಯೇ ಹೊರತು ಯಾವುದರಿಂದಲೂ ಪಲಾಯನ ಮಾಡುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್, ಇಡಿ ಸಮನ್ಸ್ ಬಗ್ಗೆ ಹೇಳಿದ್ದಾರೆ.

   English summary
   As Per Media Report, If Former Karnataka CM HD Kumaraswamy Gone To Malaysia For Enjoying That Is Wrong, Union MInister Prahlad Joshi
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X