• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ : ಹಳಿ ದುರಸ್ತಿ ಕಾರ್ಯ ಹಲವು ರೈಲುಗಳ ಸಂಚಾರ ರದ್ದು

|

ಹುಬ್ಬಳ್ಳಿ, ಏಪ್ರಿಲ್ 12 : ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಂಚಾರವನ್ನು ಏಪ್ರಿಲ್ 16 ರಿಂದ 21ರ ತನಕ ರದ್ದುಗೊಳಿಸಲಾಗಿದೆ. ಹಳಿಗಳ ನಿರ್ವಹಣೆ ಕಾರ್ಯದ ಹಿನ್ನಲೆಯಲ್ಲಿ ರೈಲು ಸಂಚಾರ ರದ್ದಾಗಿದೆ.

ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಪ್ಯಾಸೆಂಜರ್ (06919/06920) ರೈಲು ಸಂಚಾರ ರದ್ದು ಮಾಡಲಾಗಿದೆ. ಕೆಲವು ರೈಲುಗಳು ತಡವಾಗಿಯೂ ಸಂಚಾರ ನಡೆಸಲಿವೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಏ.16 ರಿಂದ 21ರ ತನಕ ಸೊಲ್ಲಾಪುರ-ಗದಗ ನಡುವೆ ಸಂಚರಿಸುವ (71303), ಏಪ್ರಿಲ್ 17 ರಿಂದ 22ರ ತನಕ ಗದಗದಿಂದ ಸೊಲ್ಲಾಪುರಕ್ಕೆ ಸಂಚರಿಸುವ (71304), ಏಪ್ರಿಲ್ 16 ರಿಂದ 21ರ ತನಕ ಸೊಲ್ಲಾಪುರ-ಹುಬ್ಬಳ್ಳಿ-ಸೊಲ್ಲಾಪುರ ನಡುವಿನ ಇಂಟರ್‌ ಸಿಟಿ ರೈಲು (11423/11424) ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.

ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ (17308) ರೈಲು ಏ.15ರಂದು 50 ನಿಮಿಷ. ಏಪ್ರಿಲ್ 16ರಂದು 150 ನಿಮಿಷ, ಏಪ್ರಿಲ್ 17, 18 ಮತ್ತು 60 ರಂದು 60 ನಿಮಿಷ, ಏಪ್ರಿಲ್ 21ರಂದು 100 ನಿಮಿಷ ತಡವಾಗಿ ಬಾಗಲಕೋಟೆಯಿಂದ ಹೊರಡಲಿದೆ.

English summary
Due to track repair work Hubballi-Vijayapura-Hubballi passenger train cancelled from April 16 to 21, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X