ಮೈಕ್ರೋ ಫೈನಾನ್ಸ್‌ನಲ್ಲಿ 27 ಲಕ್ಷ ಅವ್ಯವಹಾರ, ಇಬ್ಬರ ಬಂಧನ

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 13: ಇಲ್ಲಿನ ಬಿಎಫ್‌ಐಎಲ್ ಮೈಕ್ರೋ ಫೈನಾನ್ಸ್ ಕಂಪನಿ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕಂಪನಿಯ ಇಬ್ಬರು ನೌಕರರನ್ನು ಗೋಕುಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಸಿದ್ಧರಾಮೇಶ್ವರ ನಗರದ ನಿವಾಸಿ ಫಯಾಜ್ ಅಹ್ಮದ್ ತಿಗಡಿ (28) ಹಾಗೂ ಗದುಗಿನ ಹೊಂಬಳ ನಾಕಾದ ಜನತಾ ಕಾಲೋನಿ ನಿವಾಸಿ ಮಲ್ಲಿಕಾರ್ಜುನ ಗಡಾದ(27) ಬಂಧಿತ ಆರೋಪಿಗಳು. ಆರೋಪಿಗಳಿಂದ 15.95 ಲಕ್ಷ ನಗದು ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ.

Hubballi: Two BFIL Micro Finance company employees arrested

ಫಯಾಜ್ ಮತ್ತು ಮಲ್ಲಿಕಾರ್ಜುನ ಕಳೆದ ಹಲವು ತಿಂಗಳುಗಳಿಂದ ಬಿಎಫ್‌ಐಲ್ ಮೈಕ್ರೋ ಫೈನಾನ್ಸ್ ಕಂಪನಿ ಹುಬ್ಬಳ್ಳಿ-ಎ ಶಾಖೆಯಲ್ಲಿ ಕ್ರೆಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಕಂಪನಿಗೆ ಸೇರಿದ ಅಂದಾಜು 27 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಂಪನಿಯ ಕ್ರೈಸಿಸ್ ಮ್ಯಾನೇಜರ್ ನೀಲಕಂಠ ಗೋಣಿ ಗೋಕುಲ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿಗಳ ವಶಕ್ಕೆ ಪಡೆದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Gokul police have arrested 2 accused who have involved in misusing the money belongs to BFIL Micro Finance Company. Both were employees of BFIL company and they have misused over Rs 27 lakh. Accused identified as Fayaz Tigadi and Mallikarjun Gadad
Please Wait while comments are loading...