• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್ ಪರ ಘೋಷಣೆ; ಹುಬ್ಬಳ್ಳಿಗೆ ದೌಡಾಯಿಸಿದ ಪೋಷಕರು

|

ಹುಬ್ಬಳ್ಳಿ, ಫೆಬ್ರವರಿ, 18: ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದ ಇಲ್ಲಿನ ಕೆಎಲ್‌ಇ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಭೇಟಿಯಾಗಲು ಅವರ ಕುಟುಂಬದವರು ಮಂಗಳವಾರ ಹುಬ್ಬಳ್ಳಿಗೆ ದೌಡಾಯಿಸಿದ್ದಾರೆ.

ಕಾಶ್ಮೀರದಿಂದ ಹುಬ್ಬಳ್ಳಿಯ ಕಮಿಷನರ್ ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳ ಕುಟುಂಬಸ್ಥರು, ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆಯಲು ನವನಗರ ಬಳಿಯ ಪೊಲೀಸ್ ಕಮೀಷನರ್ ಅವರ ಬಳಿ ಮಾಹಿತಿ ಪಡೆಯಲು ತಡಕಾಡುತ್ತಿದ್ದದ್ದು ಕಂಡು ಬಂದಿದೆ. ತಮ್ಮ ಮಕ್ಕಳು ದೇಶದ್ರೋಹ ಕೆಲಸ ಮಾಡುವುದಿಲ್ಲ ದಯವಿಟ್ಟು ಅವರಿಗೆ ಏನು ಮಾಡಬಾರದು ಎಂದು ಪೋಷಕರು ಬೇಡಿಕೊಂಡಿದ್ದಾರೆ.

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದವರನ್ನು ಮತ್ತೆ ಬಂಧಿಸಿದ ಪೊಲೀಸರು

ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಅಮೀರ್, ಬಾಸಿತ್, ತಾಲಿಬ್ ಎನ್ನುವರ ಮೂವರು ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ಅರವನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿ ಪೊಲೀಸ್ ಕಮೀಷನರ್ ದಿಲೀಪ್ ಅವರನ್ನು ಭೇಟಿಯಾಗಲು ಕುಟುಂಬದವರು ಕಾಯ್ದು ಕುಳಿತಿದ್ದಾರೆ.

ಇದೇ ವೇಳೆ ಪ್ರಕರಣವನ್ನು ನಿಬಾಯಿಸಲು ಗೋಕುಲ ಠಾಣೆ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.

English summary
Hubballi Seduction Case Family Members Arrives Hubballi. 3 KLE College Students Arrested by Hubballi Police. Pro Pak Speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X