ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಪೊಲೀಸರ ಖೆಡ್ಡಕ್ಕೆ ಬಿದ್ದ ಚಾಲಾಕಿ ಮನೆಗಳ್ಳರು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್, 29: ಅವಳಿ ನಗರವನ್ನು ನಡುಗಿಸಿದ್ದ ಮನೆಗಳ್ಳರು ಅಂತಿಮವಾಗಿ ಹುಬ್ಬಳ್ಳಿ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಾಲ್ವರು ಮನೆಗಳ್ಳರನ್ನು ಭಾನುವಾರ ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ.

ಅವರು ನಗರದ ಉಪನಗರ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹೆಚ್ಚುತ್ತಿದ್ದ ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಪಿಐ ಮಾರುತಿ ಗುಳ್ಳಾರಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದರು.[ಹುಬ್ಬಳ್ಳಿಗರೇ ನಿಮ್ಮನೆ ಬೀಗ ಗಟ್ಟಿ ಇದೆಯಾ ನೋಡ್ಕಳಿ!]

hubballi

ಈ ವಿಶೇಷ ತಂಡ ಕಸಬಾಪೇಟೆಯಲ್ಲಿ 4, ಬೆಂಡಿಗೇರಿ ಠಾಣೆ 1 ಮತ್ತು ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ 4 ಮನೆಗಳ್ಳತನ ಮಾಡಿದ್ದ ನಾಲ್ವರು ಮನೆಗಳ್ಳರು ಮತ್ತು ಕಳ್ಳತನದ ವಸ್ತುಗಳನ್ನು ಕರಗಿಸಿ ಮಾರುತ್ತಿದ್ದ ಇಬ್ಬರನ್ನು ಬಂಧಿಸಿ ಒಟ್ಟು 9.46 ಲಕ್ಷ ರು. ಮೌಲ್ಯದ 300 ಗ್ರಾಂ ಬಂಗಾರದ ಆಭರಣ ಹಾಗೂ ಒಂದು ಸೋನಿ ಟಿವಿ ವಶಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳು ನಗರದ ಹಳೇಹುಬ್ಬಳ್ಳಿಯ ಈಶ್ವರ ನಗರ ಮತ್ತು ಮಾವನೂರ ರೋಡ ಹೊರವಲಯದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದಾಗ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನದ ವಿಷಯ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಬಂಧಿತರಲ್ಲಿ ಇಮ್ರಾನ್ ಎಂಬಾತನು ಹಳೆಯ ಕಳ್ಳನಾಗಿದ್ದು, ಅವರು 18 ವರ್ಷದವನಿದ್ದಾಗಿನಿಂದಲೇ ಕಳ್ಳತನ ವೃತ್ತಿ ಮಾಡುತ್ತಿದ್ದನು. ಈಗ ಇವನೊಂದಿಗೆ ಮೂವರನ್ನು ಬಂಧಿಸಲಾಗಿದೆ ಎಂದರು.[ಹುಬ್ಬಳ್ಳಿ-ಧಾರವಾಡದಲ್ಲೇ ಬೀಡು ಬಿಟ್ಟಿರುವ ಮನೆಗಳ್ಳರು]

hubballi

ಬಂಧಿತ ಮನೆಗಳ್ಳತನದ ಆರೋಪಿಗಳು :
ಹಳೇಹುಬ್ಬಳ್ಳಿ ಜನ್ನತ್ ನಗರ ನಿವಾಸಿ ಇಮ್ರಾನ್ ಟಾಕಾ ಮೌಲಾಸಾಬ ಚಿನ್ನೂರ (20), ಸೋನಿಯಾಗಾಂಧಿ, ಬೀಡಿ ಪ್ಲಾಟ್ ನ ದಾವೂದ ನೂರ ಅಹ್ಮದ ಭೈರಿಕೊಪ್ಪ (20), ಬಿಡ್ನಾಳ ಗ್ರಾಮದ ಫಯಾಜ್ ಸತ್ತಾರಸಾಬ ಧಾರವಾಡ ಬಂಧಿತರು.

ಬಂಧಿತ ಕದ್ದ ವಸ್ತು ತೆಗೆದುಕೊಂಡ ಆರೋಪಿಗಳು :
ಕಳ್ಳತನದ ಒಡವೆಗಳನ್ನು ತೆಗೆದುಕೊಂಡು ಕರಗಿಸಿ ಮಾರುತ್ತಿದ್ದ ಹಳೇಹುಬ್ಬಳ್ಳಿ ಅಲ್ತಾಪ ಪ್ಲಾಟ್ ನ ನಿವಾಸಿಗಳಾದ ಇಮ್ತಿಯಾಜ್ ಅಹ್ಮದ ಅಲಿಸಾಬ ವಡ್ಡೋ (55) ಈತನ ಮಕ್ಕಳಾದ ನದೀಮ ಇಮ್ತಿಯಾಜ ಅಹ್ಮದ್ ವಡ್ಡೋ (21), ವಸೀಮ ಇಮ್ತಿಯಾಜ್ ಅಹ್ಮದ್ ವಡ್ಡೋ (26) ಬಂಧಿತ ಆರೋಪಿಗಳಾಗಿದ್ದಾರೆ.

ಮನೆಗಳ್ಳತನ ಪ್ರಕಣವನ್ನು ಪತ್ತೆ ಹಚ್ಚುವಲ್ಲಿ ಕಸಬಾಪೇಟೆ ಪಿಐ ಮಾರುತಿ ಗುಳ್ಳಾರಿ, ಸಿಬ್ಬಂದಿಗಳಾದ ಎ.ಎಂ.ತಹಸೀಲ್ದಾರ್, ಫಕ್ಕಿರೇಶ ಗೊಬ್ಬರಗುಂಪಿ, ಬಿ.ಎನ್.ಲಂಗೋಟಿ, ಬಿ.ಆರ್.ಮುದೇನಗುಡಿ, ಎಂ.ಸಿ.ಹೊನ್ನಪ್ಪನವರ, ಎಸ್.ಜಿ.ಹಳೇಮನಿ, ರವಿ ಕೋಳಿ, ಪಿ.ಬಿ.ಹಿರಗಣ್ಣವರ ಪಾಲ್ಗೊಂಡಿದ್ದರು ಎಂದು ಹು-ಧಾ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಬಾಲದಂಡಿ ಮತ್ತಿತರರು ಉಪಸ್ಥಿತರಿದ್ದರು.

English summary
Total 4 robbers was arrested by the police from the Hubballi bringing an end to a notorious gang of robbers. Hubballi witnessed 8 and more house robbery incident in last 15 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X