ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಹೆದ್ದಾರಿ ದರೋಡೆಕೋರರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 03: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4 ರಲ್ಲಿ ಕೊಲೆ, ದರೋಡೆ ಸೇರಿದಂತೆ ಇತರೆ ಅಪರಾಧ ಪ್ರಕರಣಗಳನ್ನು ನಡೆಸುತ್ತಿದ್ದ 6 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ.

ಅವರು ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ, ಬೈಕ್ ಮೇಲೆ ಬಂದು ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು ಎಂದರು.[ಹುಬ್ಬಳ್ಳಿ: ಕರುವಿಗೆ ಕಾರು ಡಿಕ್ಕಿ, ಮಾರಕಾಸ್ತ್ರಗಳಿಂದ ಹಲ್ಲೆ]

hubballi

ಸ್ಥಳೀಯ ಶಿವಪುತ್ರ ನಗರದ ಶಾಂತಪ್ಪ ಸದಾನಂದ ವೀರಾಪುರ (27), ಗಿರಣಿ ಚಾಳ ನಿವಾಸಿ ಮಹದೇವ ಸದಾಶಿವ ಭರಮಣ್ಣವರ (28) ಮತ್ತು ಹಳೇಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ನಿವಾಸಿ ಅರ್ಜುನ ಪರಶುರಾಮ ಬುಗಡಿ(19) ಬಂಧಿತರು.[ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]

hubballi

ಬಂಧಿತರಿಂದ 7 ಮೊಬೈಲ್, 2 ಪಲ್ಸರ್ ಬೈಕ್, 1 ಆಟೋ ಮತ್ತು 6,650 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಇವರೊಂದಿಗೆ ಮತ್ತೆ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದ್ದು, ಇವರು 9 ವರ್ಷಗಳ ಕಾಲ ಕಳ್ಳತನ ಮಾಡುತ್ತಿದ್ದರು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು.

hubballi

ಬಂಧಿತರ ಮೇಲಿರುವ ಆರೋಪಗಳು
ಶಾಂತಪ್ಪ ಮತ್ತು ಮಹಾದೇವ ಇಬ್ಬರು ನಗರದ ಬೈಪಾಸ್ ಬಳಿಯ ತಾರಿಹಾಳ ಸೇತುವೆ ಹತ್ತಿರ ಬೈಕ್ ಅಡ್ಡಗಟ್ಟಿ ಬಾಲು ನಾಯಕ ಎಂಬುವರನ್ನು ಬೆದರಿಸಿ 58 ಸಾವಿರ ರೂ.ಗಳನ್ನು ದೋಚಿದ್ದರು. ಇಬ್ಬರು ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದರೆನ್ನಲಾಗಿದೆ.

hubballi

ಇನ್ನೋರ್ವ ಆರೋಪಿ ಅರ್ಜುನ ನಗರದ ಹೊರವಲಯದಲ್ಲಿನ ಅಂಚಟಗೇರಿ ಬಳಿ ಕುಂದಗೋಳ ಪಟ್ಟಣದ ಮೌಲಾಸಾಬ ಬಾಪುಸಾಬ ಚಂದರಗಿ ಎಂಬುವರನ್ನು ಕೊಲೆ ಮಾಡಿ ಅವರಿಂದ 17 ಸಾವಿರ ರೂ. ದೋಚಿದ್ದನು. ಇದೇ ವ್ಯಕ್ತಿ ಇತ್ತೀಚೆಗೆ ಉಡುಪಿ ಮೂಲದ ಮಂಜುನಾಥ ಕೃಷ್ಣಾ ಶೆಟ್ಟಿ ಎಂಬುವರ ಕಾರನ್ನು ಅಡ್ಡಗಟ್ಟಿ 4300 ರೂ. ನಗದು ಮತ್ತು ಮೊಬೈಲ್ ದರೋಡೆ ಮಾಡಿದ್ದ ಎಂದು ಆಯುಕ್ತ ರಾಣೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi police has arrested 6 robbers including 3 minor youth on 03 Aug 2016. Hubballi-Dharwad Police commissioner Panduranga Rane informed. The Robbers targeting peoples who are traveling in Pune-Bengaluru Highway, Hubballi outskirts.
Please Wait while comments are loading...