ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆಟ್ರೋಲ್ ನಿಂದ ಗ್ಯಾಸ್ ಉತ್ಪತ್ತಿ : ಹುಬ್ಬಳ್ಳಿಯಲ್ಲೊಂದು ಸಂಶೋಧನೆ

By ಶಂಭು, ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 7- ಸಾಮಾನ್ಯವಾಗಿ ನಾವು ನಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಂಡು ಓಡಿಸುತ್ತೇವೆ. ಆದರೆ ಹುಬ್ಬಳ್ಳಿಯ ಈ ಸಂಶೋಧಕ ವಾಹನಕ್ಕೆ ತುಂಬುವ ದ್ರವರೂಪದ ಇಂಧನವನ್ನು ಅನಿಲವಾಗಿ ಪರಿವರ್ತಿಸು ವಾಹನ ಚಲಾಯಿಸಬಹುದು ಎಂದು ತೋರಿಸಿಕೊಟ್ಟಿದ್ದಾನೆ!

ಅತಿ ಕಡಿಮೆ ದರದಲ್ಲಿ ಇಂತಹ ವಾಹಕವನ್ನು ಕಂಡು ಹಿಡಿದಿರುವ ಆ ಸಂಶೋಧಕನ ಹೆಸರು ರಾಜುಭಾಯ್ ರಾಟ್ವಾ. ಇವರು ಇಲ್ಲಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಚಿಕ್ಕ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

Hubballi:a man invented a machine to convert petrol in to gas

ದ್ರವರೂಪದ ಇಂಧನವನ್ನು ಹೆಚ್ಚು ಖರ್ಚಿಲ್ಲದೆ ಅನಿಲ ರೂಪಕ್ಕೆ ಪರಿವರ್ತಿಸುವಂತಹ ವಾಹಕವನ್ನು ಅವರು ಸಂಶೋಧಿಸಿದ್ದಾರೆ. ಇದರಿಂದ ಹೆಚ್ಚು ಶ್ರಮವಿಲ್ಲದೆ ವಾಹನಕ್ಕೆ ಪೆಟ್ರೋಲ್ ಅನ್ನು ತುಂಬಿಸುತ್ತಿದ್ದಂತೆಯೇ ಅದು ಗ್ಯಾಸ್ ಆಗಿ ಪರಿವರ್ತನೆ ಆಗುತ್ತದೆ. ವಾಹನದ ಮೈಲೇಜ್ ಸಹ ಹೆಚ್ಚಾಗುತ್ತದೆ ಎನ್ನುತ್ತಾರೆ ಈ ಸಂಶೋಧಕ.

ಇವರ ಸಂಶೋಧನೆಯ ಹಿಂದೆ ಯಾವುದೇ ಡಿಗ್ರಿಗಳಿಲ್ಲ. ಇವರು ಓದಿದ್ದು, ಕೇವಲ 5ನೇ ತರಗತಿ ಆದರೂ ಸಹ ಯಾವ ಎಂಜಿನಿಯರ್ ಗೂ ಕಮ್ಮಿ ಇಲ್ಲ ಎಂಬಂತೆ ಇಂದನ ಪರಿವರ್ತಿತ ವಾಹಕವನ್ನು ಕಂಡುಹಿಡಿದಿದ್ದಾರೆ.

Hubballi:a man invented a machine to convert petrol in to gas

"ಈ ವಾಹಕವನ್ನು ವಾಹನದ ಕಾರ್ಬೋರೇಟರ್ ಗೆ ಸೇರಿಸಿದರೆ ಸಾಕು. ದ್ರವರೂಪದ ಇಂಧನ ಅನಿಲವಾಗಿ ಪರಿವರ್ತನೆಯಾಗಿ ಬೈಕ್ ಓಡಲಾರಂಭಿಸುತ್ತದೆ. ಇದರಿಂದ ವಾಹನದ ವೇಗವೂ ಹೆಚ್ಚುತ್ತದೆ, ಮತ್ತು ವಾಯುಮಾಲಿನ್ಯವೂ ಸಹ ಕಮ್ಮಿಯಾಗುತ್ತದೆ. ಎನ್ನುತ್ತಾರೆ ರಾಜುಭಾಯ್.
ಅತಿ ಕಡಿಮೆ ಹಣ ವ್ಯಯಿಸಿ ಸಂಶೋಧಿಸಿರುವ ಈ ವಾಹಕದ ತಂತ್ರಜ್ಞಾನವನ್ನು ಯಾವುದಾದರೂ ಸಂಸ್ಥೆ ವಾಹನಗಳಿಗೆ ಅಳವಡಿಸಲು ಮುಂದೆ ಬಂದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳುವ ರಾಜುಭಾಯ್ ಅವರು ಸಂಸ್ಥೆಗಳ ನೆರವಿಗಾಗಿ ಕಾಯುತ್ತಿದ್ದಾರೆ.

Hubballi:a man invented a machine to convert petrol in to gas

ಅಷ್ಟೇ ಅಲ್ಲದೇ ಈ ವಾಹಕವನ್ನು ಎಲ್ಲ ವಿಧಧ ಬೈಕ್ ಗಳಿಗೆ ಜೋಡಿಸಬಹುದು ಎಂದು ರಾಜುಭಾಯ್ ಹೇಳಿದ್ದಾರೆ. ಈ ವಾಹಕಕ್ಕೆ 'ಸಹೀ' ಎಂಬ ಹೆಸರನ್ನಿಡುವ ಯೋಚನೆಯಲ್ಲಿ ರಾಜುಭಾಯ್ ಇದ್ದಾರೆ.

ಇದೇ ಪ್ರೇರಣೆಯಿಂದ ಮುಂದಿನ ದಿನಗಳಲ್ಲಿ ಹೈ ಸ್ಪಾರ್ಕ್, ಸ್ಪಾರ್ಕ್ ಪ್ಲಗ್, ಹೈ ಸ್ಪೀಡ್ ಬೈಸಿಕಲ್, ಎಲೆಕ್ಟ್ರಿಕ್ ಬೈಕ್ ಸೆಲ್ಫ್ ಚಾರ್ಜಿಂಗ್, ಎಲೆಕ್ಟ್ರಿಕ್ ಜನರೇಟರ್ ( ಗಾಳಿಯಿಂದ), ಎಲೆಕ್ಟ್ರಿಸಿಟಿ ಜನರೇಶನ್ ಇನ್ ಸೀ, ಮಾಗ್ನೆಟಿಕ್ ಮೋಟರ್ ( ವಿದ್ಯುತ್ ಇಲ್ಲದೇ), ಹೊಸ ಕ್ಲಚ್ ವಿಧಾನ, ಹೊಸ ಏರೋಡೈನಾಮಿಕ್ ವಿಧಾನ ಮತ್ತು ಎಚ್ಐವಿ ಗೆ ಔಷಧಿ ಕಂಡು ಹಿಡಿಯುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

Hubballi:a man invented a machine to convert petrol in to gas

ನನ್ನ ಸಾಧನೆಯಿಂದ ಇಡೀ ದೇಶಕ್ಕೆ ವಿಶ್ವದಲ್ಲಿ ಹೆಸರು ಬಂದರೆ ಸಾಕು ಎನ್ನುವರ ರಾಜುಭಾಯ್ ಗೆ ನಾವೂ ಒಂದಿಷ್ಟು ಶುಭಾಶಯ ಹೇಳೋಣ. ರಾಜುಭಾಯ್ ಮೊಬೈಲ್ ಸಂಖ್ಯೆ 9343108310.

English summary
A Man invented a low cost machine which is convert petrol in to gas, in Hubballi, the machine is able to adopt all types of bike. and it will also have a capacity to increase bike mileage and speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X