ಹುಬ್ಬಳ್ಳಿಯಲ್ಲಿ ಮುಷ್ಕರದ ಬಿಸಿ, ಹಣ ಬಾಚಿದ ಆಟೋಗಳು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 26: ಹುಬ್ಬಳ್ಳಿಯಲ್ಲಿ ಮಂಗಳವಾರವೂ ಸಾರಿಗೆ ಮುಷ್ಕರದ ಬಿಸಿ. ಸಾರಿಗೆ ಸಿಬ್ಬಂದಿಯ ಮುಷ್ಕರದಿಂದ ಮಹಾನಗರದಲ್ಲಿ ಮಂಗಳವಾರ ಬೆಳಗಿನಿಂದಲೇ ಖಾಸಗಿ ವಾಹನಗಳದೇ ದರ್ಬಾರ್ ಜೋರಾಗಿತ್ತು.

ಆಟೋ, ಟಂಟಂ ಟ್ರಾಕ್ಸ್, ಕ್ರೂಸರ್ ಮತ್ತಿತರ ವಾಹನಗಳನ್ನು ಬಸ್ ನಿಲ್ದಾಣಗಳ ಮುಂದೆಯೇ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿತ್ತು.[ಬಸ್ ನಿಲ್ದಾಣಕ್ಕೆ ಬೈಕಲ್ ಏರಿ ಬಂದ ಶೆಟ್ಟರ್]

ಕೆಲವೆಡೆ ಸ್ವಂತ ವಾಹನಗಳನ್ನು ಹೊಂದಿರುವವರು ತಮ್ಮವರನ್ನು ಕರೆ ತರಲು ಬಸ್ ನಿಲ್ದಾಣಕ್ಕೆ ಬರುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಇನ್ನೊಂದು ವಿಶೇಷವಾದ ಸಂಗತಿ ಎಂದರೆ ಕೆಲವು ಸಾರಿಗೆ ಸಂಸ್ಥೆಯ ಚಾಲಕರು ಸ್ವಂತ ಆಟೋ, ಟಂಟಂ, ಟ್ರಾಕ್ಸ್ ಹೊಂದಿದ್ದಾರೆ. ಅವರೂ ಕೂಡ ತಮ್ಮ ಮುಷ್ಕರದ ಲಾಭವನ್ನು ಪಡೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು.

ಬಿಕೋ ಎಂದ ಸರಕಾರಿ ಕಚೇರಿಗಳು

ಬಿಕೋ ಎಂದ ಸರಕಾರಿ ಕಚೇರಿಗಳು

ಬಸ್ ಬಂದ್ ಹಿನ್ನೆಲೆಯಲ್ಲಿ ಕೆಲ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿತ್ತು. ಇದೇ ರೀತಿ ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲೂ ಸಿಬ್ಭಂದಿಗಳಿರಲಿಲ್ಲ. ಕೆಲ ಗ್ರಾಮೀಣ ಪ್ರದೇಶಗಳ ಸಿಬ್ಬಂದಿಗಳು ಬಸ್ ಬಂದ್ ಹಿನ್ನೆಲೆಯಲ್ಲಿ ಕಚೇರಿಗೆ ಬರಲಾಗುವುದಿಲ್ಲ ಎಂದು ಹೇಳಿಕೊಂಡಿದ್ದರು.

ಪ್ರವಾಸಿಗರಿಂದ ತುಂಬಿ ತುಳುಕಿದ ಬಸ್

ಪ್ರವಾಸಿಗರಿಂದ ತುಂಬಿ ತುಳುಕಿದ ಬಸ್

ಹುಬ್ಬಳ್ಳಿ ನಗರದಿಂದ ಒಂದು ದಿನದಲ್ಲಿ ಹೋಗಿ ಬರಬಹುದಾದ ಮಾಗೋಡ್, ಜೋಗ್, ಗೋಕಾಕ್, ಫಾಲ್ಸ್ ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ತೆರಳಿದ್ದರು. ಶಾಲಾ-ಕಾಲೇಜುಗಳು ರಜೆ ಇದ್ದುದರಿಂದ ಮತ್ತು ವ್ಯಾಪಾರ ವಹಿವಾಟು ಕೂಡ ಅಷ್ಟೊಂದು ಜೋರಾಗಿ ನಡೆಯದಿರುವುದರಿಂದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದೇವೆ ಎಂದು ಪ್ರವಾಸಿಗರು ಹೇಳಿದರು.

ಸಂಜೆಯ ಹೊತ್ತಿಗೆ ಬಸ್ ಪ್ರಾರಂಭ

ಸಂಜೆಯ ಹೊತ್ತಿಗೆ ಬಸ್ ಪ್ರಾರಂಭ

ಮಂಗಳವಾರ ಸಂಜೆಯ ಹೊತ್ತಿಗೆ ಸಾರಿಗೆ ಬಸ್ ಆರಂಭವಾದರೂ ನಂತರ ಮತ್ತೆ ಬಂದ್ ಮಾಡಲಾಯಿತು. ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಸಮಸ್ಯೆ ಆರಂಭವಾಯಿತು.

ವಾಗ್ಯುದ್ಧ

ವಾಗ್ಯುದ್ಧ

ಬಸ್ ನಿಲ್ದಾಣದ ಸಮೀಪ ಪೊಲೀಸರು ಮತ್ತು ಜನರ ನಡುವೆ ವಾಗ್ಯುದ್ಧ ನಡೆದ ಪ್ರಕರಣಗಳು ವರದಿಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi:Employees of state road transport corporations commencing an indefinite strike, seeking wage hike, normal life has been affected across Karnataka on Tuesday. Commuters started facing trouble since yesterday evening with drivers and conductors not turning up for work.
Please Wait while comments are loading...