ಹುಬ್ಬಳ್ಳಿ: ಕೈಗಳಿಲ್ಲದಿದ್ದರೂ ಸಾಧನೆ ಎಂಬ ಹಠ ಬಿಡದ ಬಾಲಕಿ, ಯುವತಿಯ ಬಾಳಿಗೆ ಬೆಳಕಾದ ಅಜ್ಜಿ
ಹುಬ್ಬಳ್ಳಿ, ಜನವರಿ, 10: ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡ ಬಾಲಕಿಯೊಬ್ಬಳು ಉಳಿದುಕೊಳ್ಳಲು ಸೂರಿಲ್ಲದೇ ಪರದಾಡುತ್ತಿದ್ದಾಳೆ. ಬಾಲಕಿ ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದು, ಮತ್ತೊಂದೆಡೆ ಕೈಗಿಳಿಲ್ಲವೆಂದು ಹೆತ್ತ ತಾಯಿಯೇ ಬಾಲಕಿಯನ್ನು ಒಬ್ಬೊಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಷ್ಟಕ್ಕೂ ಮನಕಲಕುವ ದೃಶ್ಯಗಳು ಹುಬ್ಬಳ್ಳಿ ಪಕ್ಕದಲ್ಲಿರುವ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕಂಡು ಬಂದಿವೆ.
ಲಕ್ಷ್ಮಿ 12 ವರ್ಷದ ಬಾಲಕಿ ಆಗಿದ್ದು, ಹುಟ್ಟಿನಿಂದಲೇ ಆಕೆಗೆ ಎರಡೂ ಕೈಗಳಿಲ್ಲ. ಸದ್ಯ ಅಜ್ಜಿಯ ಮಡಿಲಲ್ಲೇ ಈಕೆ ಬೆಳೆಯುತ್ತಿದ್ದಾಳೆ. ಕೈ ಇಲ್ಲದೇ ಹುಟ್ಟಿದ್ದಕ್ಕೆ ತಾಯಿ ಕೂಡ ಆರೈಕೆ ಮಾಡಲು ಮನಸ್ಸು ಮಾಡಲಿಲ್ಲ. ಈಗ ಇಕ್ಷ್ಮಿಗೆ ಒಂದು ಸೂರು ಬೇಕಾಗಿದೆ. ಎರಡು ಕೈ ಇಲ್ಲದೆ ಇದ್ದರೂ ಊಟ ಮಾಡುವುದು, ಓದುವುದು, ಬರೆಯುವುದನ್ನು ಮಾಡುತ್ತಿದ್ದಾರೆ. ಹುಟ್ಟುವಾಗಲೇ ಎರಡೂ ಕೈ ಇಲ್ಲದೇ ಹುಟ್ಟಿದ್ದಾಳೆ. ಮೂಲತಃ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವಳಾದ ಈಕೆ, ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ತನ್ನ ಅಜ್ಜಿಯ ಮನೆಯಲ್ಲೇ ಇದ್ದಾಳೆ. ಇನ್ನು ಈಕೆ ತಂದೆ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಹುಟ್ಟಿದಾಗ ಇವಳಿಗೆ ಕೈ ಇಲ್ಲ ಎಂದು ಗೊತ್ತಾದಾಗ ತಾಯಿ ಕೂಡ ದೂರ ಆಗಿದ್ದಾಳೆ.

ಸೂರಿಗಾಗಿ ಪರದಾಡುತ್ತಿರಿವ ಲಕ್ಷ್ಮಿ
ಹೀಗಾಗಿ ಈಕೆಯನ್ನು ಅಜ್ಜಿಯೇ ಸಾಕಿ ಬೆಳೆಸಿದ್ದಾಳೆ. ತಂದೆ ಸಾವಿನ ನಂತರ ಲಕ್ಷ್ಮಿ ಅಕ್ಕ ಹಾಗೂ ತಮ್ಮನ ಜೊತೆ ತಾಯಿ ಕೂಡ ಗಂಜಿಗಟ್ಟಿಯಲ್ಲೇ ಬಂದು ಇದ್ದಾಳೆ. ಸದ್ಯ ಲಕ್ಷ್ಮಿ ಕುಟುಂಬ ಸೋದರ ಮಾವನ ಮನೆಯಲ್ಲೇ ಇದ್ದಾಳೆ. ಇವರಿಗೆ ಇರುವುದಕೆ ಸ್ವಂತ ಮನೆಯಿಲ್ಲ. ಎಷ್ಟು ದಿನ ಅಂತಾ ಮಾವನ ಮನೆಯಲ್ಲಿ ಇರುವುದು ಎಂಬುದು ಇವರ ಪ್ರಶ್ನೆಯಾಗಿದೆ. ಯಾಕಂದರೆ ಅಜ್ಜ, ಅಜ್ಜಿ ಇರುವವರೆಗೆ ಈ ಮನೆಯಲ್ಲಿ ಇರಬಹುದು.

ಲಕ್ಷ್ಮಿಯ ನೆರವಿಗೆ ನಿಂತ ಅಜ್ಜಿ
ಆದರೆ ನಾಳೆ ಅವರ ನಂತರ ಜೀವನ ಹೇಗೆ ಎಂದು ವಿಚಾರ ಮಾಡಲಾಗುತ್ತಿದೆ. ಲಕ್ಷ್ಮಿ ಅಕ್ಕ ಈಗ ಹುಬ್ಬಳ್ಳಿ ಹಾಸ್ಟೆಲ್‌ನಲ್ಲೇ ಇದ್ದು, ಆಕೆ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಚಿಕ್ಕ ತಮ್ಮ ಗಂಜಿಗಟ್ಟಿ ಗ್ರಾಮದಲ್ಲೇ ಲಕ್ಷ್ಮಿ ಜೊತೆ ಶಾಲೆಗೆ ಹೋಗುತ್ತಾನೆ. ಸದ್ಯ ಇವರಿಗೆ ಒಂದು ಸೂರು ಆದರೆ ಸಾಕಾಗಿದೆ.

ಶಾಲೆಗೆ ಹೋಗಲು ಕೂಡ ಹಿಂದೆಟು, ಏಕೆ?
ಇನ್ನು ಲಕ್ಷ್ಮಿಗೆ ಬಟ್ಟೆ ತೊಡಿಸುವುದರಿಂದ ಆಕೆಯ ಎಲ್ಲ ಕೆಲಸ ಅಜ್ಜಿನೇ ಮಾಡುತ್ತಿದ್ದಾರೆ. ಹುಟ್ಟಿನಿಂದ ಅಜ್ಜಿನೇ ಎಲ್ಲ ಕೆಲಸಗಳನ್ನು ಮಾಡುತ್ತಾ ಬಂದಿದ್ದಾಳೆ. ಲಕ್ಷ್ಮಿಗೆ ಕೃತಕ ಕೈಹಾಕಲು ಕೂಡ ಬರದಂತಾಗಿದೆ. ದೇಹದಿಂದ ಕೈಗಳು ಸ್ವಲ್ಪ ಹೊರಗೆ ಬಂದಿದ್ದರೆ ಕೃತಕ ಕೈ ಹಾಕಬಹುದಿತ್ತು. ಆದರೆ ಅವು ಭುಜಕ್ಕೆ ಅಂಟಿಕೊಂಡೇ ಇವೆ. ಇನ್ನು ಶಾಲೆಗೆ ಹೋದಾಗ ಇವಳಿಗೆ ಕೈ ಇಲ್ಲದ್ದನ್ನ ನೋಡಿದ ಮಕ್ಕಳು ಹಿಯಾಳಿಸುತ್ತಲೇ ಇರುತ್ತಾರೆ. ಹೀಗಾಗಿ ಈಕೆ ಶಾಲೆಗೆ ಹೋಗಲು ಕೂಡ ಹಿಂದೆಟು ಹಾಕುತ್ತಿದ್ದಾಳೆ. ಆದರೆ ಅಜ್ಜಿ ಇವಳ ಬೆನ್ನಿಗೆ ನಿಂತು ಶಾಲೆಗೆ ಕಳಿಹಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಲಕ್ಷ್ಮಿಯ ವಿದ್ಯಾಭ್ಯಾಸದ ವಿವರ
ಸದ್ಯ ಲಕ್ಷ್ಮಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಜ್ಜಿ ತಟ್ಟೆಯಲ್ಲಿ ಅನ್ನ ಹಾಕಿಕೊಟ್ಟರೆ ತಾನೇ ಕಾಲಿನಿಂದಲೇ ಊಟ ಮಾಡುತ್ತಾಳೆ. ನೀರು ಕೂಡ ತಾನೇ ಕುಡಿಯುತ್ತಾಳೆ. ಕಾಲಿನಿಂದಲೇ ಬರೆಯುವುದನ್ನು ಕಲಿತಿದ್ದಾಳೆ. ಆದರೆ ಇಷ್ಟೆಲ್ಲ ಇದ್ದರೂ ಕೂಡ ಅಜ್ಜಿಯ ನಂತರ ಮುಂದೇನು ಎಂದು ಈಕೆಗೆ ಚಿಂತೆ ಕಾಡುತ್ತಿದೆ. ಅಜ್ಜಿ ಇರುವಾಗಲೇ ಜೀವನಕ್ಕೆ ದಾರಿ ಹುಡುಕಬೇಕೆಂಬುದೇ ಈಕೆಯ ಚಿಂತೆಯಾಗಿದೆ. ಇನ್ನು ಲಕ್ಷ್ಮಿಗೆ ವಿಕಲಚೇತನರ ವೇತನ ಬರುತ್ತದೆ. ಆದರೆ ಕೆಲವೊಮ್ಮೆ ಅದೂ ಬರದೇ ಇದ್ದಾಗ, ಅಜ್ಜಿ ಕರೆವ್ವಾ ಓಡಾಡಿ ವೇತನವನ್ನು ಬರುವಂತೆ ಮಾಡಬೇಕು. ಅದನ್ನೆಲ್ಲ ನೋಡುವ ಲಕ್ಷ್ಮಿ ಕಣ್ಣಲ್ಲಿ ನೀರನ್ನು ತಂದೇ ಬಿಡುತ್ತಾಳೆ. ಸದ್ಯ ಲಕ್ಷ್ಮಿ ತನ್ನ ಎರಡು ಕೈಗಿಳಿಲ್ಲದಿದ್ದರೂ, ತನ್ನ ಸ್ವಾಭಿಮಾನ ಮಾತ್ರ ಬಿಡುತ್ತಿಲ್ಲ. ಒಳ್ಳೆಯ ಶಿಕ್ಷಣ ಕಲಿತು ತನ್ನ ಕಾಲಿನ ಮೇಲೆ ನಿಲ್ಲಬೇಕು ಎನ್ನುವ ಇವಳ ಹಠ ಅದೆಷ್ಟೋ ಜನಕ್ಕೆ ಮಾದರಿಯಾಗಲಿದೆ. ಇವಳ ಸಾಧನೆಗೆ ಕೈ ಜೋಡಿಸಲು ಸಹಾಯ ಹಸ್ತ ಬೇಕಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications