Hubballi Corporation: ವಾರ್ಡ್ ಸಮಿತಿ ರಚನೆಗೆ ನಿರಾಸಕ್ತಿ, ನಾಗರಿಕರಿಗೆ ನಿರಾಸೆ: ಬಂದ ಅರ್ಜಿಗಳೆಷ್ಟು?
ಬೆಂಗಳೂರು, ಫೆಬ್ರವರಿ 13: ಉತ್ತರ ಕರ್ನಾಟಕದ ಅವಳಿನಗರ ಹುಬ್ಬಳ್ಳಿ-ಧಾರವಾಡಗಳಿಗೆ ವಾರ್ಡ್ ಸಮಿತಿ ರಚನೆ ವಿಚಾರವಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆ ಸದ್ದು ಮಾಡುತ್ತಿದೆ. ವಾರ್ಡ್ ಸಮಿತಿ ರಚನೆಗೆ ನಿರಾಸಕ್ತಿ ತೋರಿದ್ದು, ಇದರಿಂದ ಅವಳಿನಗರ ನಿವಾಸಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದ್ದರು.
ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ದೃಷ್ಟಿಯಿಂದ ವಾರ್ಡ್ ಸಮಿತಿ ರಚನೆ ಮಾಡುವಂತೆ 'ಹು-ಧಾ ವಾರ್ಡ್ ಸಮಿತಿ ಬಳಗ'ದ ಸದಸ್ಯರು ಪಟ್ಟು ಹಿಡಿದಿದ್ದರು. ಬಹು ದಿನಗಳಿಂದ ನೆನೆಗೂದಿಗೆ ಬಿದ್ದಿದ್ದ ಈ ಕೆಲಸಕ್ಕೆ ಪಾಲಿಕೆ ನಿರಾಸಕ್ತಿ ವಹಿಸುತ್ತಲೇ ಬಂದಿತ್ತು. ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರು ಸಹಿತ ಖ್ಯಾರೆ ಎಂದಿರಲಿಲ್ಲ. ವಿಳಂಬ ಧೋರಣೆ ಅನುಸರಿಸಿತ್ತು.

ಸಾರ್ವಜನಿಕ ಸಹಭಾಗಿತ್ವದಲ್ಲಿ ಸಮಿತಿ ರಚಿಸಿ
ಹೀಗಾಗಿ ಸಮಿತಿ ಸದಸ್ಯರು ಸೋಮವಾರ ಸಾರ್ವಜನಿಕರ ಸಹಭಾಗಿತ್ವದ ಆಶಯದಲ್ಲಿ ಶೀಘ್ರವೇ ವಾರ್ಡ್ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದರು. ಕೂಡಲೇ ಎಚ್ಚೆತ್ತ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಅಹೋರಾತ್ರಿಗೆ ಧರಣಿಗೆ ಮುಂದಾಗಿದ್ದ ಪ್ರತಿಭಟನಾಕಾರರ ಮನವೊಲಿಸಿ ಭರವಸೆ ನೀಡಿದರು.
ಮುಂದಿನ ಮೂರು ದಿನಗಳಲ್ಲಿ ವಾರ್ಡ್ ಸಮಿತಿ ರಚನೆಗೆ ಮಾಡುವುದಾಗಿ ಸಮಿತಿಯ ಸದಸ್ಯರಿಗೆ ಆಯುಕ್ತರು ಭರವಸೆ ನೀಡಿದರು. ಸದ್ಯ ಇದಕ್ಕೆ ಒಪ್ಪಿರುವ ಸದಸ್ಯರು ಮೂರು ದಿನ ಕಾಯ್ದು ನೋಡಲಿದ್ದಾರೆ ಎನ್ನಲಾಗಿದೆ.
ಅರ್ಜಿ ಆಹ್ವಾನಿಸಿ ಬಳಿಕ ನಿರ್ಲಕ್ಷ್ಯ
ಈ ಹಿಂದೆ ಮಹಾನಗರ ಪಾಲಿಕೆಯು ವಾರ್ಡ್ ಸಮಿತಿ ರಚನೆ ಸಂಬಂಧ ಅರ್ಜಿಗಳ್ನು ಆಹ್ವಾನಿಸಿತ್ತು. ಆದರೆ ಆಗಿದ್ದ ಉತ್ಸಾಹ ನಂತರ ಇರಲಿಲ್ಲ. ಸಮಿತಿ ರಚನೆಯಗೆ ಪಾಲಿಕೆ ಉತ್ಸಾಹ ತೋರಲಿಲ್ಲ. ವಾರ್ಡ್ ರಚನೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಯಿತು.
ಇದರಿಂದ ಆಡಳಿತ ವಿಕೇಂದ್ರೀಕರಣದ ಭಾಗವಾಗುವ ಕನಸಿಗೆ ವಿಘ್ನ ತಂದಂತಾಯಿತು. ಹುಬ್ಬಳ್ಳಿ-ಧಾರವಾಡದ ನಾಗರಿಕರಿಗೆ ನಿರಾಸೆ ಉಂಟಾಗಿದ್ದಲ್ಲದೇ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡವು. ಪಾಲಿಕೆಯು ಜನರ ಸಲಹೆಯ ಸೂಚನೆಗಳಿಗೆ ಕವಡೆ ಕಾಸಿನ ಬೆಲೆ ಇಲ್ಲದಂತೆ ವರ್ತಿಸಿತು ಎಂದು ಸದಸ್ಯರು ಪ್ರತಿಭಟನೆ ವೇಳೆ ದೂರಿದರು.

ಸಮಿತಿ ರಚನೆಗಾಗಿ 626 ಅರ್ಜಿ ಸಲ್ಲಿಕೆ
ಸಮಿತಿಗಾಗಿ ಸಾರ್ವಜನಿಕರಿಂದ ಅರ್ಜಿ ಕರೆದಿದ್ದ ಪಾಲಿಕೆಯು, ಮೂರು ಬಾರಿ ದಿನಾಂಕಗಳನ್ನು ವಿಸ್ತರಿಸಿತ್ತು. ಪಾಲಿಕೆ ಆಹ್ವಾನದ ಮೇರೆಗೆ ಅವಳಿನಗರದ 82 ವಾರ್ಡ್‌ಗಳಿಂದ 626 ಅರ್ಜಿಗಳು ವಾರ್ಡ್ ರಚನೆಗಾಗಿ ಸಲ್ಲಿಕೆ ಆಗಿದ್ದವು ಎಂದು ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ಸಂಚಾಲಕರಾದ ಶೆಟ್ಟರ್, ಡಾ.ಸುಭಾಷ್ ಬ್ರಬುವಾಡ ಅಸಮಾಧಾನ ಹೊರ ಹಾಕಿದರು. ಮೂರು ದಿನ ಕಾಯ್ದು ನೋಡುವುದಾಗಿ ಅವರು ತಿಳಿಸಿದ್ದಾರೆ.
ಸ್ವಚ್ಛತೆಗೆ ಆಗ್ರಹಿಸಿ ಪ್ರತಿಭಟನೆ: ಸರ್ಕಾರಕ್ಕೆ ಮನವಿ ಸಲ್ಲಿಕೆ
ಪಾಲಿಕೆ ವ್ಯಾಪ್ತಿಯಲ್ಲಿ ನಗರವನ್ನು ಸ್ವಚ್ಛವಾಗಿಡುವಲ್ಲಿ ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ವಿಲವಾಗಿದೆ. ಇದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಗೆ ಕಾರಣವಾಗಿದೆ ಎಂದು ಆರೋಪಿಸಿ ಮಿನಿ ವಿಧಾನ ಸೌಧ ಬಳಿ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಂಗಳವಾರ ಬೆಳಗ್ಗೆ ಪ್ರತಿಭಟಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 82 ವಾರ್ಡ್ ಗಳಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಬಡಾವಣೆಯ ರಸ್ತೆಗಳಲ್ಲಿ ತ್ಯಾಜ್ಯಗಳು ಅಲ್ಲಲ್ಲಿ ಸಂಗ್ರಹವಾಗಿದೆ. ಸ್ವಚ್ಛ ಮಾಡುವಂತೆ ನಗರಸಭೆಗೆ ಅನೇಕ ಬಾರಿ ಬಡಾವಣೆಯ ಜನತೆ ಲಿಖಿತ ರೂಪದಲ್ಲಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕನಿಷ್ಠ ಮಕ್ಕಳ ಆರೋಗ್ಯದ ದಷ್ಟಿಯಿಂದಾದರೂ ಈ ತ್ಯಾಜ್ಯವನ್ನಾದರೂ ವಿಲೇವಾರಿ ಮಾಡಿ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದೆ ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.












Click it and Unblock the Notifications