ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿ ಅಪ್ಡೇಟ್
ಹುಬ್ಬಳ್ಳಿ, ಡಿಸೆಂಬರ್, 09: ರಾಜ್ಯದ ಹಲವೆಡೆ ರೈಲ್ವೆ ಕಾಮಗಾರಿಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಅಪ್ಡೇಟ್ ಮಾಹಿತಿಯನ್ನು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಕೊಟ್ಟಿದ್ದಾರೆ. ಇಲ್ಲಿದೆ ನೋಡಿ ವಿವರ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ ಅವರು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕಾಮಗಾರಿಯನ್ನು 2027ರ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನಗರದ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ರೈಲ್ವೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ವಾಸ್ಕೋಡ ಗಾಮ ಜೋಡಿ ಮಾರ್ಗದ ಪೂರ್ಣಗೊಳಿಸಲಾಗುತ್ತಿದೆ. ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಬಗ್ಗೆ ವಿವರವಾದ ಯೋಜನಾ ವರದಿ ಸಿದ್ಧವಾಗಿದೆ ಎಂದು ಹೇಳಿದರು.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಗಿಣಿಗೇರಾ-ರಾಯಚೂರು ಹೊಸ ಮಾರ್ಗ, ಕಡೂರು-ಚಿಕ್ಕಮಗಳೂರು ಹೊಸ ಮಾರ್ಗ, ಬಾಗಲಕೋಟೆ-ಕುಡಚಿ ಹೊಸ ಮಾರ್ಗ, ಧಾರವಾಡ-ಬೆಳಗಾವಿ ಹೊಸ ಮಾರ್ಗ, ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗ, ರಾಯದುರ್ಗ-ತುಮಕೂರು ಹೊಸ ಮಾರ್ಗ, ಗದಗ-ವಾಡಿ ಹೊಸ ಮಾರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ಮಾರ್ಗ, ಬಾಗಲಕೋಟೆ-ಕುಡಚಿ ಹೊಸ ಮಾರ್ಗ, ಹಾಸನ-ಬೇಲೂರು ಹೊಸ ಮಾರ್ಗ, ಶಿವಮೊಗ್ಗ-ಶಿಕಾರಿಪುರ - ರಾಣೆಬೆನ್ನೂರ, ಹೊಟಗಿ-ಕುಡ್ಗಿ-ಗದಗ ದ್ವಿಪಥ, ಭೂಸ್ವಾಧೀನ, ಡಿಪಿಆರ್, ಟೆಂಡರ್ ಪ್ರಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಯೋಜನೆಗಳನ್ನು ಅವುಗಳ ಪೂರ್ವನಿರ್ಧರಿತ ಸ್ಥಿತಿಯೊಂದಿಗೆ ವಿವರವಾಗಿ ಚರ್ಚಿಸಲಾಯಿತು.
ಅಲ್ಲದೆ, ಆದ್ಯತೆಯ ಆಧಾರದ ಮೇಲೆ ಜೂನ್ 2027ರೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಎಲ್ಲಾ ರೈಲ್ವೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಹಾಗೆಯೇ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಕುಂದು ಕೊರತೆಗಳನ್ನು ತೆರವುಗೊಳಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕಕ್ಕೆ ನೈಋತ್ಯ ರೈಲ್ವೆಯ ಗಣನೀಯ ಕೊಡುಗೆಗಳನ್ನು ಶ್ಲಾಘಿಸಿದರು. ರೈಲ್ವೆ ಯೋಜನೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಮತ್ತು ಉಳಿದ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 22 ಪ್ರಮುಖ ಯೋಜನೆಗಳಿಗೆ ಆದ್ಯತೆ ನೀಡಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
IRCTC ಸರ್ವರ್ ಡೌನ್: ಐಆರ್‌ಸಿಟಿಸಿಯು ಭಾರತೀಯ ರೈಲ್ವೆ ಪ್ರವಾಸೋದ್ಯಮ ವಿಭಾಗವಾಗಿದೆ. ಇನ್ನು ಇದೀಗ ಈ ವೆಬ್‌ಸೈಟ್ ಒಂದು ಗಂಟೆಯವರೆಗೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲಾಗದೇ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಹಾಗಾದರೆ ಟಿಕೆಟ್ ಬುಕ್ಕಿಂಗ್‌ಗೆ ಪರ್ಯಾಯ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತ್ವರಿತ ಟಿಕೆಟ್ ಬುಕಿಂಗ್ ಸಮಯದಲ್ಲಿ ಐಆಆರ್‌ಸಿಟಿಸಿ ವೆಬ್‌ಸೈಟ್ ಸ್ಥಗಿತಗೊಂಡಿದೆ. ಈ ಸ್ಥಳದಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ. ಆದ್ದರಿಂದ ಮುಂದಿನ 1 ಗಂಟೆಯವರೆಗೆ ಯಾವುದೇ ಬುಕಿಂಗ್ ಇರುವುದಿಲ್ಲ ಎಂದು ಐಆಆರ್‌ಸಿಟಿಸಿ ತಿಳಿಸಿದೆ.
ಐಆರ್‌ಸಿಟಿಸಿಯು ಸರ್ವರ್ ಡೌನ್ ಆಗಿರುವುದರಿಂದ ಮತ್ತು ಆನ್‌ಲೈನ್‌ನಲ್ಲು ಟಿಕೆಟ್ ಕಾಯ್ದಿರಿಸಲು ಆಗದ ಹಿನ್ನೆಲೆ ರೈಲು ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಭಾರತೀಯ ರೈಲ್ವೆ ಪ್ರಯಾಣಿಕರ ಪ್ರಶ್ನೆಗೆ ತ್ವರಿತವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲರಿಗೂ ಬುಕಿಂಗ್ ಲಭ್ಯವಾಗಲಿದೆ ಅಂತಲೂ ತಿಳಿಸಿದೆ.












Click it and Unblock the Notifications