Get Updates
Get notified of breaking news, exclusive insights, and must-see stories!

ಒಂದೇ ಕ್ಷೇತ್ರದಲ್ಲಿ 8 ಬಾರಿ ಗೆಲುವು: ವರ್ಲ್ಡ್‌ ಬುಕ್‌ ಆಫ್ ರೆಕಾರ್ಡ್ ಗೌರವಕ್ಕೆ ಪಾತ್ರರಾದ ಹೊರಟ್ಟಿ

ಹುಬ್ಬಳ್ಳಿ, ಸೆಪ್ಟೆಂಬರ್ 2 : ಸುಮಾರು ನಾಲ್ಕು ದಶಕಗಳ ಕಾಲ ಯಶಸ್ವಿ ರಾಜಕಾರಣಿ. ಕೃಷಿಕನಾಗಿ, ಶಿಕ್ಷಕನಾಗಿ, ರಾಜಕಾರಣಿಯಾಗಿ ಹಲವು ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಈಗ ದಾಖಲೆಯನ್ನು ಬರೆದಿರುವ ಬಸವರಾಜ ಹೊರಟ್ಟಿ ಲಂಡನ್ನಿನ ವರ್ಲ್ಡ ಬುಕ್‌ ಆಫ್ ರೆಕಾರ್ಡ್ ಗೌರವಕ್ಕೆ ಭಾಜನರಾಗಿದ್ದಾರೆ.

ಕಳೆದ ಐದು ದಶಕಗಳಿಂದ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ವಿಧಾಯಕ ಸೇವೆಗಳನ್ನು ಸಲ್ಲಿಸುವ ಮೂಲಕ ಬಸವರಾಜ ಹೊರಟ್ಟಿಯವರ ಹೆಸರು ಕನ್ನಡ ನಾಡಿಗೆ ಚಿರ ಪರಿಚಿತವಾಗಿದೆ. ಅವರು ವಿಧಾನ ಪರಿಷತ್ತಿಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ ಮೇಲ್ಮನೆ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರಿಗೆ ಲಂಡನ್ನಿನ ವರ್ಲ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ದಾಖಲೆಯ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ.

1980 ರಿಂದ ವಿಧಾನ ಪರಿಷತ್ತಿಗೆ ಒಂದೇ ಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸಾಮಾನ್ಯ ಶಿಕ್ಷಕರಾದ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ, ವಿವಿಧ ಖಾತೆಗಳ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದು ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಣ ವಲಯಕ್ಕೆ ಅಭಿಮಾನದ ಸಂಗತಿ, ಸಾರ್ವಜನಿಕವಾಗಿ ಅವರು ಮಾಡಿದ ಅಪ್ರತಿಮ ಸೇವೆ ಕಳೆದ 5 ದಶಕಗಳಿಂದ ಶಿಕ್ಷಕರ ಹಿತಕ್ಕಾಗಿ ಹೋರಾಟ ಮಾಡುತ್ತಾ ಬರುವ ಮೂಲಕ ಹೋರಾಟದ ಹೊರಟ್ಟಿ ಎಂದೇ ನಾಡಿಗೆ ಚಿರಪರಿಚಿತರಾದವರು. ಶೈಕ್ಷಣಿಕ ಸೇವೆಯಲ್ಲಿ ಅವರು ಮಾಡಿದ ಹೆಗ್ಗುರುತುಗಳು ನಿತ್ಯ ಶಿಕ್ಷಕ ವಲಯ ಮೆಲಕು ಹಾಕುತ್ತಿದೆ. ಶಿಕ್ಷಕರ ಹೊಟ್ಟೆ ಮತ್ತು ರಟ್ಟೆಗಟ್ಟಿಗೊಳಿಸಿದ ಹೊರಟ್ಟಿಯವರೆಂದೇ ನಾಡಿಗೆ ಚಿರಪರಿಚಿತರಾಗಿದ್ದಾರೆ.

Horatti has been Honored in the World Book of Records

ಹೊರಟ್ಟಿಯವರು ಜಾಗತಿಕ ಶಾಂತಿಗಾಗಿ ಅವರು ಸಲ್ಲಿಸಿದ ಮಾನವೀಯ ಸೇವೆಗಾಗಿ ಅವರ ವ್ಯಕ್ತಿತ್ವದ ಇತರೆ ಮಜಲುಗಳನ್ನು, ಸಾಧನೆಗಳನ್ನು ಹಾಗೂ ಮೇಲ್ಮನೆಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಶಿಕ್ಷಕರ ಮತ್ತು ಹೊರಟ್ಟಿಯವರ ಅವಿನಾಭಾವ ಸಂಬಂಧದ ಕುರಿತು ಅಧ್ಯಯನ ಮಾಡಿ ಒಬ್ಬ ಮೇರು ಸಾಧಕ ಎಂದು ಲಂಡನ್‌ನ ವರ್ಲ್ಡಬುಕ್ ಆಫ್ ರಿಕಾರ್ಡ್‌ ಸಂಸ್ಥೆಯವರು ಹೊರಟ್ಟಿಯವರ ದಾಖಲೆಗಳನ್ನು ದಾಖಲೀಕರಿಸಿ ಸಂಖ್ಯೆ:198/2022 ದಿನಾಂಕ:29-08-2022 ರಂದು ದೃಢೀಕರಣ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.

Horatti has been Honored in the World Book of Records

ಇತ್ತೀಚೆಗೆ ಹೊರಟ್ಟು ಜೆಡಿಎಸ್‌ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಂತರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 8ನೇ ಬಾರಿಗೆ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+