ಹುಬ್ಬಳ್ಳಿ: ಮಳೆ ಅವಾಂತರ, ಸೂರು ಕಳೆದುಕೊಂಡ ವೃದ್ಧ ಕುಟುಂಬ
ಹುಬ್ಬಳ್ಳಿ, ಮೇ 6: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿರುವ ಘಟನೆ ಹುಬ್ಬಳ್ಳಿಯ ರಾಯಾಪೂರದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿದ ಯುವತಿಯೊಬ್ಬಳಿಗೆ ಗಾಯಗೊಂಡಿದ್ದು, ಯುವತಿಯನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳಿಯಲ್ಲಿ ಸುರಿದ ಮಳೆ ಅವಾಂತರಕ್ಕೆ ಮನೆ ಕಳೆದುಕೊಂಡ ರಾಯಾಪೂರದಾ ಫಕೀರಪ್ಪ ಚಿಕ್ಕಣ್ಣವರ ಹಾಗೂ ನೀಲಮ್ಮ ಚಿಕ್ಕಣ್ಣ ಎಂಬುವ ಮನೆಗಳು ಬಿರುಗಾಳಿ ಮಳೆಗೆ ಮನೆ ಕುಸಿದು, ಹಾನಿಯಾಗಿದೆ. ಇದ್ದರಿಂದ ನೊಂದ ವೃದ್ಧರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಚಾವಣಿ ಕುಸಿದುಬಿದ್ದು, ಮನೆಯಲ್ಲಿದ್ದ ವಸ್ತುಗಳು ಕೂಡ ಹಾನಿಯಾಗಿದೆ. ಮಳೆ ನೀರಿನಿಂದ ಮನೆ ಜಲಾವೃತ್ತಗೊಂಡು ಮನೆಯ
ಮಳೆಗೆ ಆವಾಂತರ ಸೃಷ್ಟಿ ಮಾಡಿದೆ. ಧಾರಾಕಾರ ಮಳೆ, ಪ್ರವಾಹ ಸ್ಥಿತಿ ಎದುರಾಗಿದೆ. ಮಳೆ ಅಬ್ಬರಕ್ಕೆ ಹುಬ್ಬಳ್ಳಿ ಜನರು ತತ್ತರ ಗೊಂಡಿದ್ದಾರೆ ಎಂದರೆ ತಪ್ಪಾಗಲಾಗದು.

ಹುಬ್ಬಳ್ಳಿಯಲ್ಲಿ ಬೃಹತ್, ಬಿರುಗಾಳಿ ಮಳೆಯಿಂದಾಗಿ ಹಲವೆಡೆ ಆತಂಕ ಶುರುವಾಗಿದೆ. ಎಲ್ಲಾ ಮನೆಗಳು ಜಲಾವೃತ್ತಗೊಂಡಿದ್ದು, ಕುಟುಂಬಗಳ ಪರದಾಟವಾಗಿದೆ.

ಮನೆಗೆ ನುಗ್ಗಿದ ನೀರನ್ನು ಎತ್ತಿ ಹೊರಗಡೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಮಳೆ ಅವಾಂತರಕ್ಕೆ ವೃದ್ಧ ಕುಟುಂಬ ಬೀದಿಪಾಲಾಗಿದ್ದಾರೆ. ಆಸರೆಯಾಗಿದ ಮನೆ ಕಳೆದುಕೊಂಡು ವೃದ್ಧರು ಆಸರೆಗಾಗಿ ಸೂರು ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications