ಲಾಡ್ಜ್ ಗೆ ಬಂದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಹುಬ್ಬಳ್ಳಿ ಮಹಿಳೆಯರು

ಹುಬ್ಬಳ್ಳಿ, ಡಿಸೆಂಬರ್ 11: ಕುಡಿದು ಲಾಡ್ಜ್ ಒಳಗೆ ನುಗ್ಗಿದ ಯುವಕನೊಬ್ಬನಿಗೆ ಮಹಿಳೆಯರು ಹಾಗೂ ಮಂಗಳಮುಖಿಯರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಚನ್ನಮ್ಮ ವೃತ್ತದ ಬಳಿ ಮಹಿಳೆಯರು ಇದ್ದ ವಸತಿ ಗೃಹಕ್ಕೆ ಮದ್ಯ ಸೇವಿಸಿದ್ದ ಈ ಯುವಕ ನುಗ್ಗಿದ್ದ ಎನ್ನಲಾಗಿದೆ. ಜೊತೆಗೆ ಅಲ್ಲೇ ಬಸ್ ನಿಲ್ದಾಣದ ಸಮೀಪ ಮಹಿಳೆಯರು ಹಾಗೂ ಮಂಗಳಮುಖಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದನೆಂದು ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಂತರ ಆತನನ್ನು ಬೆನ್ನಟ್ಟಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಜನನಿಬಿಡ ಪ್ರದೇಶವಾದ ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣದ ಬಳಿ ಕೆಲ ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಸಹ ಇಂಥ ಅಹಿತಕರ ಘಟನೆಗಳು ಹೆಚ್ಚಲು ಕಾರಣವಾಗಿದೆ.

Group Of Women Beaten Boy In Hubballi

ಪೊಲೀಸರು ಬಿಗಿ ಕ್ರಮ ಜರುಗಿಸಬೇಕು, ಮರ್ಯಾದಸ್ಥರು ನೆಮ್ಮದಿಯಾಗಿ ಓಡಾಡುವಂಥ ವಾತಾವರಣ ನಿರ್ವಿುಸಬೇಕು ಎಂಬುದು ಸಾರ್ವಜನಿಕರ ಆಗ್ರಹ.‌ ಈ ಕುರಿತು ಪ್ರಕರಣ ದಾಖಲಾಗಿಲ್ಲ.‌ ಅದರೆ ಉಪ ನಗರ ಪೊಲೀಸ್ ವ್ಯಾಪ್ತಿಯಲ್ಲಿ ವಸತಿ ಗೃಹಗಳು ಬರುತ್ತಿರುವುದರಿಂದ ಈ ಭಾಗದಲ್ಲಿ ಗಸ್ತು ಹೆಚ್ಚಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+