ಹುಬ್ಬಳ್ಳಿ: ಚಿಂದಿ ಆಯುವ ನೆಪದಲ್ಲಿ ಮನೆಗೆ ಕನ್ನ, ನಾಲ್ವರ ಬಂಧನ

ಹುಬ್ಬಳ್ಳಿ, ಜೂನ್ 28 : ಚಿಂದಿ ಆಯುವ ನೆಪದಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಚಾಲಾಕಿ ಕಳ್ಳಿಯರನ್ನು ಹುಬ್ಬಳ್ಳಿಯ ನವನಗರ ಪೊಲೀಸರು ಬಂಧಿಸಿದ್ದು ಇನ್ನೂ ಮೂವರು ಪರಾರಿಯಾಗಿದ್ದಾರೆ.

ಲಕ್ಷ್ಮೀ ಬಿಲಾನಾ, ಗೀತಾ ಕಾನನ, ರೇಣುಕಾ ಬಿಲಾನಾ, ರೇಣುಕಾ ಬೇಪಾರಿ ಬಂಧಿತ ಕಳ್ಳಿಯರು. ಬಂಧಿತರಿಂದ 106 ಗ್ರಾಮ್ ಚಿನ್ನಾಭರಣ, ಎರಡು ಕೆ.ಜಿ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Four woman arrested in theft case at Hubballi

ನಗರದಲ್ಲಿ ಪದೇ ಪದೇ ಮನೆಗಳ್ಳತ ನಡೆಯುತ್ತಿದ್ದ ಪ್ರಕರಣಗಳು ನಡೆಯುತ್ತಿರುವುದರಿಂದ ನಗರ ಪೊಲೀಸರಿಗೆ ತಲೆನೋವಾಗಿತ್ತು. ಇದರಿಂದ ಇನ್ಸ್ ಪೆಕ್ಟರ್ ಎಸ್.ಆರ್ ನಾಯಕ ಹಾಗೂ ಎಸ್.ಎಸ್ ಹಿರೇಮಠ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಮನೆ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇನ್ನೊಂದು ಪ್ರಕರಣ: ಮತ್ತೊಂದೆಡೆ ಹುಬ್ಬಳ್ಳಿ ಶಹರ ಠಾಣೆ ಪೋಲಿಸರ ಕಾರ್ಯಚರಣೆ ವೇಳೆ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ನವಲಗುಂದ ಜಿಲ್ಲೆಯ ಭದ್ರಪೂರ ಗ್ರಾಮದ ಗವಿಸಿದ್ದಪ್ಪ ಕುಂಬಾರ, ಮಂಜುನಾಥ ಚಲವಾಧಿ ಬಂಧಿತ ಆರೋಪಿಗಳು.

Four woman arrested in theft case at Hubballi

ಸಿಸಿ ಕ್ಯಾಮರಾಗಳ ಸಹಾಯದಿಂದ ಆರೋಪಿಗಳ ಬಂಧಿಸಲಾಗಿದ್ದು, ಆರೋಪಿತರಿಂದ 43 ಗ್ರಾಂ ಚಿನ್ನ ಸೇರಿ ಸುಮಾರು 1,25,280 ರು. ಮೌಲ್ಯದ ಆಭರಣಗಳು ವಶಕ್ಕೆ ಪಡೆಯಲಾಗಿದೆ ಎಂದು ಪೋಲಿಸ್ ಆಯುಕ್ತ ಪಿಎಚ್ ರಾಣೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+