ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ 'ಬುಕ್ ಸ್ಟಾಲ್': ಲಕ್ಷಾಂತರ ರೂ.ನಷ್ಟ
ಹುಬ್ಬಳ್ಳಿ, ಜೂನ್ 03: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾನುವಾರ ರಾತ್ರಿ ಬುಕ್ ಸ್ಟಾಲ್‌ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ದಾಸ್ತಾನು ಬೆಂಕಿಗೆ ಸುಟ್ಟಿದೆ, ಮಾಲೀಕರಿಗೆ ನಷ್ಟವಾಗಿದೆ.
ಮೂಲಗಳ ಪ್ರಕಾರ, ಭಾನುವಾರ ರಾತ್ರಿ ಬುಕ್ ಸ್ಟಾಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಡೀ ಬುಕ್ ಸ್ಟಾಲ್ ಸುಟ್ಟು ಭಸ್ಮವಾಗಿದೆ. ಈ ಘಟನೆ ಹುಬ್ಬಳ್ಳಿಯ ಕಮರಿಪೇಟೆ ಹತ್ತಿರ ರಾಮದೇವ್ ಬಿಲ್ಡಿಂಗ್ ನಲ್ಲಿ ಘಟನೆ ನಡೆದಿದೆ. ಸುಮಾರು 20 ಲಕ್ಷಕ್ಕೂ ಅಧಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಿಯ ನಿವಾಸಿಗಳಾದ ವಿನೋದ ಕಬಾಡಿ ಎಂಬುವರು ಸುಟ್ಟಿರುವ ಈ 'ಬ್ರಾವೇಟಿ ಬುಕ್ ಸ್ಟಾಲ್ ಅಂಗಡಿ' ಮಾಲೀಕರು. ಶಾರ್ಟ್ ಸರ್ಕ್ಯೂಟ್ ಇಲ್ಲವೇ ಹೆಚ್ಚಿಟ್ಟ ದೀಪದಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕ್ಕೊಂಡು ಇಡೀ ಬುಕ್ ಸ್ಟಾಲ್ ಗೆ ಆವರಿಸಿದೆ ಎಂದು ಶಂಕೆ ವ್ಯಕ್ತಾಗಿದೆ.
ಬೆಂಕಿ ನಂದಿಸಲು ಹರಸಾಹಸ
ಬೆಂಕಿಯ ಜ್ವಾಲೆ ದಟ್ಟ ಹೊಗೆ ವ್ಯಾಪ್ತಿಸುತ್ತಿದ್ದಂತೆ ಕೂಡಲೇ ಸ್ಥಳೀಯ ನಿವಾಸಿಗಳು ಗಮನಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಇಡೀ ಅಂಗಡಿಗೆ ಬೆಂಕಿ ಹೊತ್ತಿದ ಪರಿಣಾಮ, ಬೆಂಕಿಯನ್ನು ನಂದಿಸುವುದಕ್ಕೆ ಹರ ಸಾಹಸ ಪಟ್ಟರು.
ಸದ್ಯ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಸಹ ಕಟ್ಟಡದ ಅವಶೇಷಗಳ ತೆರವು ಮಾಡಲಾಗುತ್ತಿದೆ.

ಹಿಂದೂ ಮುಸ್ಲಿಂ ಭಾವೈಕ್ಯತೆ ಘಟನೆ
ಹೆರಿಗೆ ನಂತರ ಪ್ರಜ್ಞೆತಪ್ಪಿದ ಹಿಂದೂ ಬಾಣಂತಿ ಮತ್ತು ನವಜಾತ ಶಿಶುವಿನ ಆರೈಕೆಯನ್ನು ಮುಸ್ಲಿಂ ಕುಟುಂಬ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಏಪ್ರಿಲ್ 20ರಂದು ಗೋಕಾಕ ತಾಲೂಕಿನ ದಂಡಾಪೂರ ಗ್ರಾಮದ ಶಾಂತವ್ವ ನಿಡಸೋಸಿ ಎಂಬುವವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು.
ಈ ಬಾಣಂತಿಗೆ ಸೀಜರ್ ಮೂಲಕ ಹೆರಿಗೆ ಆಗ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಪ್ರಜ್ಞೆತಪ್ಪಿದ್ದರು. ಆಗ ಪಕ್ಕದ ಬೆಡ್ ನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಕೊಣ್ಣೂರ ಗ್ರಾಮದ ಶಮಾ ದೇಸಾಯಿಯವರ ಕುಟುಂಬ ಈ ಹಿಂದೂ ಬಾಣಂತಿ ಮತ್ತು ಶಿಶುವನ್ನು ಆರೈಕೆ ಮಾಡಿದ್ದಾರೆ.
40 ದಿನ ಮನೆಯಲ್ಲಿ ಆರೈಕೆ
ಬೀಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಬಾಣಂತಿ ಮಹಿಳೆ ಹಾಗೂ ಮಗುವಿಗೆ ಯಾರು ಇಲ್ಲದ ಕಾರಣ, ಮುಸ್ಲಿಂ ಕುಟುಂಬಸ್ಥರು ತಮ್ಮ ಮನೆಗೆ ಕರೆದೊಯ್ದು 40ದಿನಗಳ ಕಾಲ ಆರೈಕೆ ಮಾಡಿದ್ದಾರೆ. ಮಹಿಳೆ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಹಿನ್ನೆಲೆ ಪೊಲೀಸರ ಸಮ್ಮುಖದಲ್ಲಿ ಮಗು ಹಸ್ತಾಂತರ ನಡೆದಿದೆ. ಈ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರಲಾಗಿದೆ.
ಮುಸ್ಲಿಂ ಕುಟುಂಬಸ್ಥರ ಆರೈಕೆಯಲ್ಲಿ ತಾಯಿ ಮತ್ತು ಮಗು ಆರೋಗ್ಯವಾಗಿದೆ. ಕೋಮು ಗಲಭೆ, ಗಲಾಟೆ, ಧ್ವೇಷದ ವಾತಾವರಣದಲ್ಲಿ ಇಂತಹ ಬೆಳವಣಿಗೆ ನಡೆಯಬೇಕಿದೆ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications