ಹುಬ್ಬಳ್ಳಿ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ರಸ್ತೆಗಿಳಿದ ಕೈಗಾರಿಕೋದ್ಯಮಿಗಳು

ಹುಬ್ಬಳ್ಳಿ, ಜೂನ್‌, 15: ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಾಗಿದ್ದು, ಇದರಿಂದ ಕೈಗಾರಿಕೋದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಈ ವಿದ್ಯುತ್ ದರ ಹೆಚ್ಚಳವನ್ನು ಖಂಡಿಸಿ ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳ ಸಂಘದಿಂದ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರದಿಂದ, ಸಣ್ಣ ಕೈಗಾರಿಕೆಗಳು ಭಾರೀ ಸಂಕಷ್ಟಕ್ಕೆ ಸಿಲುಕಿವೆ. ಜೊತೆಗೆ ವಿದ್ಯುತ್ ದರ ಏರಿಕೆಯಿಂದ ಸಣ್ಣ ಕೈಗಾರಿಕೆಗಳು ನೆಲಕಚ್ಚುತ್ತಿವೆ. ಆದ್ದರಿಂದ ಸರ್ಕಾರ ಕೂಡಲೆ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Electricity price hike: Industrialists protest in Hubballi

ಹಲವೆಡೆ ವಿದ್ಯುತ್‌ ದರ ಏರಿಕೆ

ಈ ತಿಂಗಳಿನಲ್ಲಿ ಬಂದಿರುವ ವಾಟರ್ ಬಿಲ್ ಏಕಾಏಕಿ ಏರಿಕೆ ಆಗಿದೆ. ಕೆಲವು ಮನೆಗಳಿಗೆ ಬಂದಿರುವ ನೀರಿನ ಬಿಲ್‌ ಕೂಡ 3-4 ಪಟ್ಟು ಹೆಚ್ಚಳ ಆಗಿದೆ. ಹಾಗೆಯೇ ಬೆಂಗಳೂರಿನ ಕೆಲವು ಮನೆಗಳಲ್ಲಿ ಏಕಾಏಕಿ ನೀರಿನ ಬಳಕೆಯ ಬಿಲ್ ಹೆಚ್ಚಳ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಆಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುತ್ತಿದೆಯಾ ಎನ್ನುವ ಪ್ರಶ್ನೆಗಳು ಕೂಡ ಜನಸಾಮಾನ್ಯದ ಬಾಯಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ

ಮತ್ತೊಂದೆಡೆ ಕೇಂದ್ರದ ಒಪ್ಪಿಗೆ ಆಧಾರದಲ್ಲಿ ನಾವು ಜುಲೈ 1ರಿಂದ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಬಳಿಕ ಕೇಂದ್ರ ಸರ್ಕಾರ ಉಲ್ಟಾ ಹೊಡೆಯುತ್ತಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಇಂದು ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಸುಳ್ಳುರಾಮಯ್ಯ ಅಲ್ಲಾ ಅನ್ನುವುದಾದರೆ ಎಫ್‌ಸಿಐ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಸವಾಲು ಹಾಕಿದರು. ಹಾಗೆಯೇ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಜನರಿಗೆ ಹಣ ಕೊಡಿ, ಅಕ್ಕಿ ತೆಗೆದುಕೊಳ್ಳುತ್ತಾರೆ ಎಂದರು.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಅಕ್ಕಿ ಕಳಿಸುತ್ತೇವೆ ನಿಮ್ಮ ಹೆಸರು ಹಾಕಿಕೊಂಡು ಕೊಡಿ ಅಂತಾ ಕೇಂದ್ರದಿಂದ ಲೆಟರ್ ಕಳಿಸಿಲ್ಲ. ಹಾಗಾದರೆ ಸಿಎಂ ಸಿದ್ದರಾಮಯ್ಯ ಕಮಿಟ್ಮೆಂಟ್ ಲೆಟರ್ ಎಲ್ಲಿದೆ ಎಂದು ತೋರಿಸಲಿ. ಎಫ್.ಸಿ.ಐ. ನಿಮಗೆ ಅಗತ್ಯವಿರುವ ಅಕ್ಕಿಯನ್ನು ಕಳಿಸುತ್ತೇವೆ ಎಂದು ಹೇಳಿದ್ದಾರಾ?. ಆದರೆ ಲೆಟರ್ ತೋರಿಸಿ, ತನ್ನ ಕೈನಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದೀರ ಎಂದು ವಾಗ್ದಾಳಿ ನಡೆಸಿದರು.

BPL ಕಾರ್ಡುದಾರರ ಖಾತೆಗೆ ಹಣ ಹಾಕಿ

ನಾನು ಸಿದ್ದರಾಮಯ್ಯ ಅವರು ನಾಲ್ಕೈದು ತಿಂಗಳ ಬಳಿಕ ಆರೋಪ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಆರೋಪ ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ಜುಲೈ 1ರಿಂದ ಅಕ್ಕಿ ಉಚಿತ ಎಂದು ಭಾಷಣ ಮಾಡಿ, ಈಗ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದೀರ. ನೀವು ಎಲ್ಲಾ ಬಿ.ಪಿ.ಎಲ್. ಕಾರ್ಡುದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.

ಆಕಾಶವೇನು ಕಳಚಿ ಬಿದ್ದಿಲ್ಲ, ಹಣ ಕೊಟ್ಟರೆ ಅಕ್ಕಿ ಸಿಗುತ್ತದೆ. ಮೊದಲು ಹಣ ಹಾಕಿ ಆಮೇಲೆ ಮಾತಾಡಿ. ಹಾಗೆಯೇ ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಇವರ ಕೆಲಸ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+