ಲಾಕ್‌ಡೌನ್; ರೊಚ್ಚಿಗೆದ್ದ ಕುಡುಕರಿಂದ ಬಾರ್ ದರೋಡೆ!
ಹುಬ್ಬಳ್ಳಿ, ಮಾರ್ಚ್ 28: ಕೊರೊನಾ ವೈರಸ್ ಹಾವಳಿ ಹಿನ್ನೆಲೆ ಇಡೀ ಭಾರತ ದೇಶವೇ 21 ದಿನ ಲಾಕ್ ಡೌನ್ ಆಗಿದೆ. ಬಾರ್, ಬಾರ್ & ರೆಸ್ಟೋರೆಂಟ್, ಹೋಲ್ ಸೇಲ್ ಬಾರ್ ಯಾವುದನ್ನು ಸರ್ಕಾರ ಓಪನ್ ಮಾಡಿಲ್ಲ.
ಕೆಲವರಂತೂ ಎಣ್ಣೆ ಇಲ್ಲ ಅಂದ್ರೆ ಕೈ ಕಾಲೇ ಚಲನೆಯಲ್ಲಿ ಇರಲ್ಲ. ಕೆಲವರಿಗೆ ಎಣ್ಣೆ ಇಲ್ಲ ಅಂದ್ರೆ ನಿದ್ದೆನೇ ಬರಲ್ಲ. ಇದರಿಂದ ಡೈಲಿ ಕುಡುಕರಿಗೆ ಆಗುತ್ತಿರುವ ಪ್ರಾಣ ಸಂಕಟ ಅಷ್ಟಿಷ್ಟಲ್ಲ.
ಎಣ್ಣೆ, ಎಣ್ಣೆ ಅಂತ ಹಪಹಪಿಸುವ ಕೆಲ ಕುಡುಕರೆಲ್ಲಾ ಸೇರಿ ರಾತ್ರೋರಾತ್ರಿ ಕ್ಲೋಸ್ ಮಾಡಿದ್ದ ಎಂಆರ್‌ಪಿ ವೈನ್ ಸ್ಟೋರ್‌ನ್ನೇ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 1 ಲಕ್ಷದ 10 ಸಾವಿರ ಮೌಲ್ಯದ ಮದ್ಯ ಕಳ್ಳತನ ನಡೆದಿದೆ.

ಹುಬ್ಬಳ್ಳಿಯ ಗಬ್ಬೂರಿನಲ್ಲಿ
ಎಂಆರ್‌ಪಿ ಮದ್ಯ ಮಾರಾಟ ಮಳಿಗೆಯೊಂದಕ್ಕೆ ಶುಕ್ರವಾರ ರಾತ್ರಿ ನುಗ್ಗಿದ್ದ ಐದಾರು ಜನರ ಗುಂಪೊಂದು ಬಾರ್ ಕೀಲಿ ಒಡೆದು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಗಬ್ಬೂರಿನ ಆರ್‌ಟಿ ಓ ಕಚೇರಿ ಬಳಿಯ ಬಳಿ ನಡೆದಿದೆ.

1 ಲಕ್ಷದ 10 ಸಾವಿರ ಮೌಲ್ಯದ ಮದ್ಯ
ಗಬ್ಬೂರಿನ ಮದ್ಯ ಮಾರಾಟ ಮಳಿಗೆಯ ಕೀಲಿ ಮುರಿದು, ಸೆಟರ್ ಎಳೆದು ಬರೋಬ್ಬರಿ 1 ಲಕ್ಷದ 10 ಸಾವಿರ ಮೌಲ್ಯದ ಮದ್ಯವನ್ನ ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದು, ಬಾರ್ ಲ್ಲಿದ್ದ ಸಿಸಿಟಿವಿಯನ್ನ ಪೊಲೀಸ್ ಠಾಣೆಗೆ ಕೊಟ್ಟು ಹುಬ್ಬಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲಾಕ್‌ಡೌನ್‌ನಿಂದ ಕುಡುಕರಿಗೆ ತೊಂದರೆ
ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ಕುಡುಕರಿಗೆ ದಿನಗಳನ್ನೇ ಕಳೆಯುವುದು ಕಠಿಣವಾಗಿದೆ. ಇತ್ತ ಅಕ್ರಮ ಮದ್ಯ ಮಾರಾಟಕ್ಕೂ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಪ್ರಕರಣಗಳು ಹೆಚ್ಚಾಗುತ್ತಿವೆ
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಶನಿವಾರ ಮಧ್ಯಾಹ್ನಕ್ಕೆ ಕರ್ನಾಟಕದಲ್ಲಿ ಒಟ್ಟು 25 ಜನಕ್ಕೆ ಸೋಂಕು ತಗುಲಿ ನಾಲ್ವರು ಮೃತಪಟ್ಟಿದ್ದಾರೆ. ಭಾರತದಲ್ಲಿ 937 ಪ್ರಕರಣಗಳು ವರದಿಯಾಗಿವೆ. 37 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.












Click it and Unblock the Notifications