ಹುಬ್ಬಳ್ಳಿ : ಹೆದ್ದಾರಿಗಳಲ್ಲಿರುವ 212 ಮದ್ಯದ ಅಂಗಡಿಗಳಿಗೆ ನೋಟಿಸ್

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜನೇವರಿ, 09 : ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಆದೇಶದ ಹಿನ್ನಲೆಯಲ್ಲಿ, ಧಾರವಾಡ ಜಿಲ್ಲೆಯ ಹೆದ್ದಾರಿಗಳಲ್ಲಿರುವ ಒಟ್ಟ 212 ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾ ಅಬಕಾರಿ ಇಲಾಖೆ ನೋಟಿಸ್ ನೀಡಿದೆ.

ಈ ಬಗ್ಗೆ ನಮ್ಮ ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತ ರಮೇಶ ಕ್ಯಾತಣ್ಣವರ್,

ಹುಬ್ಬಳ್ಳಿ ತಾಲೂಕಿನ 103, ಧಾರವಾಡ 76, ಕಲಘಟಗಿ 8, ಕುಂದಗೋಳ 11 ಮತ್ತು ನವಲಗುಂದ ತಾಲೂಕಿನ 14 ಮದ್ಯದ ಅಂಗಡಿಗಳನ್ನು ಸ್ಥಳಾಂತರವಾಗಬೇಕಿವೆ. ಮಾರ್ಚ್ 31 ಸ್ಥಳಾಂತರ ಮಾಡಲು ಕೊನೆಯ ದಿನವಾಗಿದ್ದು. ಅಬಕಾರಿ ಇಲಾಖೆ ಈ ಪಟ್ಟಿ ಸಿದ್ಧಪಡಿಸಿದೆ ಎಂದರು.

dharwad Excise department notice issued to near highways 212 wine shops

ಜಿಲ್ಲೆಯಲ್ಲಿ ಒಟ್ಟು 4 ರಾಷ್ಟ್ರೀಯ ಹೆದ್ದಾರಿಗಳಿವೆ. ಇವುಗಳಲ್ಲಿ ಪುಣೆ- ಬೆಂಗಳೂರು, ಅಂಕೋಲಾ-ಗೂಟಿ, ಹುಬ್ಬಳ್ಳಿ-ಸೊಲ್ಲಾಪುರ, ನರೇಂದ್ರ ಕ್ರಾಸ್- ಗಬ್ಬೂರ ಬೈಪಾಸ್ ಕ್ರಾಸ್ ಸೇರಿವೆ.

ಇದೇ ರೀತಿ ಜಿಲ್ಲೆಯಲ್ಲಿ 13 ರಾಜ್ಯ ಹೆದ್ದಾರಿಗಳಿದ್ದು. ಇವುಗಳಲ್ಲಿ ಅಳ್ನಾವರ-ಬೆಟಗೇರಿ, ನವಲಗುಂದ-ಬನವಾಸಿ-ಮುಗವಳ್ಳಿ, ಗಜೇಂದ್ರಗಡ-ಸೊರಬ, ತಾಳಗುಪ್ಪ-ಖಾನಾಪುರ, ಲಕ್ಷ್ಮೇಶ್ವರ- ಮಂಗಸೂಳಿ, ಬೆಳವಣಕಿ- ಬೀಡಿ, ಅಣಸಿ-ಮುಂಡಗೋಡ, ಅರಭಾವಿ-ಚಳ್ಳಕೆರೆ, ಸದಾಶಿವಗಡ-ಔರಾದ್, ಅಣ್ಣಿಗೇರಿ-ಸೂಪಾ, ಕಲ್ಮಲಾ- ಶಿಗ್ಗಾಂವ್, ಕಾರವಾರ- ಇಳಕಲ್ ಮತ್ತು ಪಡುಬಿದ್ರಿ-ಚೆಕ್ಕಾಲಗುಡ್ಡದ ರಸ್ತೆಗಳು ಸೇರಿವೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 189 ಕಿ.ಮೀ. ಇದ್ದರೆ ರಾಜ್ಯ ಹೆದ್ದಾರಿಗಳು 484 ಕಿ.ಮೀ. ವ್ಯಾಪ್ತಿಯನ್ನು ಹೊಂದಿವೆ. ಶೀಘ್ರ ಮದ್ಯದಂಗಡಿಗಳನ್ನು ರಸ್ತೆ ಬದಿಯಿಂದ ಸ್ಥಳಾಂತರ ಮಾಡುತ್ತೇವೆಂದು ಮದ್ಯದಂಗಡಿ ಮಾಲೀಕ ಕೃಷ್ಣಾ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As per supreem court order dharwad Excise department has notice issued to 212 wine shops at near highway.
Please Wait while comments are loading...