Get Updates
Get notified of breaking news, exclusive insights, and must-see stories!

Ganesh Chaturthi 2023: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ 11 ದಿನ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯ

ಹುಬ್ಬಳ್ಳಿ, ಆಗಸ್ಟ್‌, 17: ನಗರದ ಈದ್ಗಾ ಮೈದಾನದಲ್ಲಿ 11 ದಿನ ಗಣೇಶೋತ್ಸವ ಆಚರಣೆ, ಎರಡು ಪೆಂಡಾಲ್‌ಗಳ ನಿರ್ಮಾಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ನಿರ್ಣಯ ತೆಗೆದುಕೊಂಡಿತು.

ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಉತ್ಸವ ಸಮಿತಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಿತ್ತು. ಈ ಮೈದಾನದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮೂರು ದಿನ ಅವಕಾಶ ದೊರಕಿತ್ತು. ಪ್ರಸ್ತುತ ವರ್ಷ 11 ದಿನ ಅವಕಾಶಕ್ಕೆ ಅನುಮತಿ ಪಡೆದು, ಪ್ರತಿದಿನ ಸಂಜೆ ಎರಡರಿಂದ ಮೂರು ತಾಸು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

Demand to allow 11 days Ganesha idol installation in Hubballi Eidgah Maidan

ಎರಡು ಪೆಂಡಾಲ್‌ಗಳನ್ನು ಹಾಕಿ, ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಬೇಕು. ಇದಕ್ಕೆ ಅನುಮತಿ ಪಡೆಯಲು ಆಗಸ್ಟ್‌ 21ರಂದು ಬೆಳಗ್ಗೆ 11ಕ್ಕೆ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮಿತಿ ಸಂಚಾಲಕ ಹನುಮಂತ ನಿರಂಜನ, ಈ ಸ್ಥಳದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎಂದು ನಾವು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೆವು. ಕಳೆದ ವರ್ಷ ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು ಎಂದರು.

ಮೊದಲ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೋರಿ 5 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಗ ಗಜಾನನ ಉತ್ಸವ ಮಹಾಮಂಡಳಿಗೆ ಅವಕಾಶ ನೀಡಲಾಗಿತ್ತು. ಎಲ್ಲ ಸಮಿತಿಗಳು ಒಂದುಗೂಡಿ ಮೂರು ದಿನ ಸಂಭ್ರಮದಿಂದ ಉತ್ಸವ ಆಚರಿಸಿದ್ದವು. ಹಾಗೆಯೇ ಈ ಬಾರಿಯೂ ನಾವು ಮನವಿ ಸಲ್ಲಿಸೋಣ. ಯಾರಿಗೇ ಅನುಮತಿ ನೀಡಿದರೂ ಒಂದುಗೂಡಿ ಕಳೆದ ವರ್ಷಕ್ಕಿಂತ ಅದ್ಧೂರಿಯಾಗಿ ಹಬ್ಬ ಆಚರಿಸಬೇಕು ಎಂದರು.
ಸಾಧ್ಯವಾದರೆ ಐದು ಸಮಿತಿಗಳನ್ನು ಸೇರಿಸಿ ಒಂದೇ ಒಕ್ಕೂಟ ಮಾಡಿಕೊಂಡು ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸೋಣ. ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ಪ್ರತಿಭಾವಂತರಿಗೆ ಸನ್ಮಾನ ಮಾಡುವ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಇನ್ನು ಸಮಿತಿ ಸದಸ್ಯೆ ರಾಜಶ್ರೀ ಜಡಿ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಉತ್ಸವ ಶಾಂತಿಯಿಂದ ನಡೆಯಬೇಕು. ಹತ್ತಾರು ವಿಷಯಗಳನ್ನು ಉಲ್ಲೇಖಿಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸುವ ಬದಲು, ಸ್ಪಷ್ಟವಾಗಿ ಒದೇ ವಿಷಯ ನಮೂದಿಸಬೇಕು. ಒಂದು ಪೆಂಡಾಲ್‌ಗೆ ಅನುಮತಿ ಕೇಳಿದರೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎರಡು ಪೆಂಡಾಲ್‌ ಹಾಕಲು ಅನುಮತಿ ನೀಡುವಂತೆ ಆಗ್ರಹಿಸಬೇಕು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಎಲ್ಲ ಉತ್ಸವ ಸಮಿತಿಗಳನ್ನು ಆಹ್ವಾನಿಸಬೇಕು ಎಂದು ಹೇಳಿದರು.

ಈ ವೇಳೆ ಚಂದ್ರಕಾಂತ ಬಸವ, ಸಾಗರ ಪವಾರ, ಪವನ ಕಾಟವೆ, ಅರುಣ ಲದ್ವಾ, ಹರೀಶ್‌ ಜರತಾರಘರ, ಸಾಯಿಪ್ರಸಾದ ಕಲಬುರಗಿ, ವಿಜಯ ಕಬಾಡಿ, ಶ್ರೀನಿವಾಸ ಡಿ., ಕೃಷ್ಣರಾಜ ಕಾಟವೆ, ವಿನಾಯಕ ಪವಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಆಗಸ್ಟ್‌ 22ರಂದು ಮತ್ತೊಮ್ಮೆ ಸಭೆ

ಕಳೆದ ವರ್ಷ ಗಣೇಶ ಹಬ್ಬದ ಒಂದು ದಿನದ ಮುಂಚೆ ರಾತ್ರಿ 11:30ಕ್ಕೆ ಪಾಲಿಕೆಯಿಂದ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ದೊರಕಿತ್ತು. ಅಲ್ಲದೆ ಪೂರ್ವಸಿದ್ಧತೆಯಿಲ್ಲದೆ ಗಡಿಬಿಡಿಯಲ್ಲಿ ಹಬ್ಬವನ್ನು ಆಚರಿಸಲಾಗಿತ್ತು. ಈ ವರ್ಷ ಪಾಲಿಕೆ 15 ದಿನದ ಮೊದಲೇ ಯಾರಿಗೆ ಎಂದು ಅನುಮತಿ ನೀಡಿದರೆ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವ ತೀರ್ಮಾನವನ್ನು ಮಾಡಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ 100ರಿಂದ 150 ಮಂದಿಯಾದರೂ ಇರಬೇಕು. ಒಂದೇ ವಿನ್ಯಾಸದ ಕರಪತ್ರ ಸಿದ್ಧಪಡಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಬೇಕು. ಆಗಸ್ಟ್‌ 22ರಂದು ಮತ್ತೊಮ್ಮೆ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷೆ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+