ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲು ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದ ಡಿ.ಕೆ.ಶಿವಕುಮಾರ್‌

|
Google Oneindia Kannada News

Recommended Video

ಶ್ರೀರಾಮುಲು ವಿರುದ್ಧ ಡಿಕೆಶಿ ಹೋರಾಟ ಆರಂಭ..!

ಹುಬ್ಬಳ್ಳಿ, ಮೇ 10: ಮಾಜಿ ಸಚಿವ ಶಿವಳ್ಳಿ ಸಾವಿಗೆ ಕಾಂಗ್ರೆಸ್ ಕಾರಣ ಎಂದಿದ್ದ ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಸಚಿವ ಡಿ.ಕೆ.ಶಿವಕುಮಾರ್ ಅವರು ಗರಂ ಆಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಉಪಚುನಾವಣೆ: ಜೆಡಿಎಸ್ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಗರಂ ಉಪಚುನಾವಣೆ: ಜೆಡಿಎಸ್ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಗರಂ

ಚುನಾವಣಾ ಸಮಯದಲ್ಲಿ ಅಸಂಬದ್ಧ ಹೇಳಿಕೆಯನ್ನು ನೀಡಿರುವ ಶ್ರೀರಾಮುಲು ಅವರ ಕಾರ್ಯ ಅಕ್ಷಮ್ಯ, ಅವರು ಕಾಂಗ್ರೆಸ್‌ ಮೇಲೆ ಆಧಾರವೇ ಇಲ್ಲದ ಆರೋಪ ಮಾಡಿದ್ದಾರೆ ಎಂದು ಡಿಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

Congress filled complaint against Sriramulu for false alligation: DK Shivakumar

ಮಾಜಿ ಸಚಿವ ಶಿವಳ್ಳಿ ಅವರು ಡಿ.ಕೆ.ಶಿವಕುಮಾರ್ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದರು, ಅವರನ್ನು ನೆನೆದು ನಿನ್ನೆಯಷ್ಟೆ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದರು.

ಭ್ರಷ್ಟಾಚಾರ ಹಣದಿಂದ ಉಪ ಚುನಾವಣೆ ನಡೆಸುತ್ತಿಲ್ಲ ಬಿಎಸ್‌ವೈಗೆ ಶಿವಕುಮಾರ್ ತಿರುಗೇಟುಭ್ರಷ್ಟಾಚಾರ ಹಣದಿಂದ ಉಪ ಚುನಾವಣೆ ನಡೆಸುತ್ತಿಲ್ಲ ಬಿಎಸ್‌ವೈಗೆ ಶಿವಕುಮಾರ್ ತಿರುಗೇಟು

ಭ್ರಷ್ಟಾಚಾರದ ಹಣದಿಂದ ಉಪಚುನಾವಣೆ ನಡೆಸುತ್ತದ್ದಾರೆ ಎಂದಿದ್ದ ಯಡಿಯೂರಪ್ಪ ಅವರ ವಿರುದ್ಧವೂ ಕಿಡಿಕಾರಿರುವ ಡಿಕೆ ಶಿವಕುಮಾರ್, ಭ್ರಷ್ಟಾಚಾರ ನಡೆದಿದ್ದರೆ ಅದರ ಬಗ್ಗೆ ದಾಖಲೆ ಬಿಡುಗಡೆ ಆಗಲಿ, ಯಾರು ಭ್ರಷ್ಟರು ಎಂದು ತನಿಖೆ ಆಗಲಿ, ಚುನಾವಣೆ ಆಯೋಗ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ? ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?

ಈ ಉಪಚುನಾವಣೆ ಶ್ರೀಮಂತರು ಬಡವರ ನಡುವೆ ನಡೆಯುತ್ತಿರುವ ಹೋರಾಟ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ, ತಮಗೆ ಕಡಿಮೆ ಮತ ಬಂದ ಕ್ಷೇತ್ರಗಳಿಗೆ ನೀರು ಸರಬರಾಜು ಮಾಡದೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.

ಸಂತೋಶ್ ಲಾಡ್ ಸೇರಿ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಶ್ರೀರಾಮುಲು ಹೇಳಿಕೆಯನ್ನು ಖಂಡಿಸಿದ್ದಾರೆ. ಮಾಜಿ ಸಚಿವ ಶಿವಳ್ಳಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು, ಈಗ ಅವರ ಪತ್ನಿ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದಾರೆ.

English summary
Minister DK Shivakumar said congress filled complaint against Sriramulu for making false allegation on congress. Sriramulu said yesterday that congress is the reason for Shivalli's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X