ಕರ್ನಾಟಕದ ಮಹಿಳೆಯರು ಪ್ರಿಯಾಂಕ ಗಾಂಧಿಯನ್ನು ನಾಯಕಿ ಮಾಡಲು ತಯಾರಿಲ್ಲ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ, ಜನವರಿ 16: ಯುವಜನೋತ್ಸವ ಅಲ್ಲ ವಿನಾಶೋತ್ಸವ ಎಂದ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿನ ಯಥಾ ಬುದ್ಧಿ ತಥಾ ಮಾತು. ಕಾಂಗ್ರೆಸ್‌ಗೆ ವಿನಾಶದ ಕನಸುಗಳು ಬೀಳುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿನಾಶದ ಕನಸುಗಳೇ ಬಿಳುತ್ತಿವೆ. ಇತ್ತೀಚೆಗೆ ಅವರ ಮಾತು ನಡುವಳಿಕೆ ಕೆಳ ಮಟ್ಟದ ಮಾತುಗಳನ್ನು ಆಡುತ್ತಿದ್ದಾರೆ. ಅವರು ಬಹಳ ಹತಾಶೆಯಿಂದ ಇದ್ದಾರೆ ಎಂದರು.

ನಾ ನಾಯಕಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಿಯಾಂಕಾ ಗಾಂಧಿ ಬರಲಿ ಬಿಡಿ, ಅದಕ್ಕೆ ನಮ್ಮ ತಕರಾರು ಇಲ್ಲ. ಅವರ ಟೈಟಲ್ ನೋಡಿದೆ ನಾ ನಾಯಕಿ ಅಂದ್ರೇನು..? ಅವರ ಫೋಟೋ ಹಾಕಿ ಅವರೇ ನಾ ನಾಯಕಿ ಎನ್ನುತ್ತಿದ್ದಾರೆ. ನಮ್ಮ ಕರ್ನಾಟಕದ ಮಹಿಳೆಯರು ಅವರನ್ನು ನಾಯಕಿ ಮಾಡಲು ತಯಾರಿಲ್ಲ ಎಂದು ವ್ಯಂಗ್ಯ ಮಾಡಿದರು.

CM Basavaraj Bommai Lashes out At Congress

ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಅಧಿಕಾರ ಸಿಕ್ಕರೇ ತಾನೆ ಅವರು ಪ್ರತ್ಯೇಕ ಬಜೆಟ್ ಮಾಡುವುದು. ಅವರು ಏನೇನೋ ಆಶ್ವಾಸನೆ ಕೊಡುತ್ತಿದ್ದಾರೆ ಎಂದರು.

ಇಂಧು ಯುವಜನೋತ್ಸವ ಸಮಾರೋಪ ಸಮಾರಂಭ ಮಾಡುತ್ತಿದ್ದಾರೆ. ಅನುರಾಗ್ ಸಿಂಗ್ ಠಾಕೂರ್‌ ಬಂದಿದ್ದಾರೆ. ಬಹಳ ಅದ್ಭುತವಾದ ರೀತಿಯಲ್ಲಿ ಯುವಜನೋತ್ಸವ ಆಗಿದೆ. ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಭಾಗದಲ್ಲಿ ಈ ರೀತಿ ಕಾರ್ಯಕ್ರಮ ಆದರೆ ಯುವಕರಿಗೆ ಸ್ಪೂರ್ತಿ ಸಿಗುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+