Prakash Raj: ಚಂದ್ರಯಾನ-3 ಕುರಿತು ಅಪಹಾಸ್ಯ: ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ನಟ ಪ್ರಕಾಶ್ ರೈ ವಿರುದ್ಧ ದೂರು
ಬಾಗಲಕೋಟೆ, ಆಗಸ್ಟ್, 23: ಚಲನಚಿತ್ರ ನಟ ಪ್ರಕಾಶರಾಜ ಅಲಿಯಾಸ್ ಪ್ರಕಾಶ ರೈ ಎಂಬ ಅರೆಹುಚ್ಚ ತನ್ನ ಮಾನಸಿಕ ಸ್ಥಿತಿಮಿತಿಯನ್ನು ಕಳೆದುಕೊಂಡವರ ರೀತಿ ತನ್ನ ಅಧಿಕೃತ ಟೀಟ್ವರ್ ಐಡಿಯಲ್ಲಿ ನಮ್ಮ ಹೆಮ್ಮೆಯ ವಿಜ್ಞಾನಿಗಳ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಸ್ವದೇಶಿ ಚಿಂತಕರಾದ ಶಿವಾನಂದ ಗಾಯಕವಾಡ ಅವರು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪೋಲಿಸ್ ಠಾಣೆಯ ಪಿಎಸ್‌ಐ ಅವರಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು. ಇದೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 14ರಂದು ನಮ್ಮ ದೇಶವೇ ಹೆಮ್ಮೆ ಪಡುವಂತಹ ಕೆಲಸವನ್ನು ನಮ್ಮ ಐಎಸ್ಆರ್‌ಡಿ ವಿಜ್ಞಾನಿಗಳು ಚಂದ್ರಯಾನ-3 ಉಪಗ್ರಹ ಉಡಾವಣೆ ಮಾಡುವ ಮೂಲಕ ಭಾರತದ ಶಕ್ತಿಯನ್ನು ಇಮ್ಮಡಿಗೊಳ್ಳಿಸಿದ್ದರು.

ಇನ್ನೇನು ಅದು ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿದು ಜಗತ್ತು ಭಾರತದ ವಿಜ್ಞಾನಿಗಳ ಹೊಗಳುವ ಈ ಸಂದರ್ಭದಲ್ಲಿ ಅವರಿಗೆ ಅಪಮಾನ ಆಗುವ ರೀತಿ, ಅಸಹ್ಯ ಅನಿಸುವ ರೀತಿಯಲ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಪ್ರಕಾಶ್ ರೈ ಅವರು ವಿಕೃತಿ ಮೆರೆದಿದ್ದಾರೆ. ತಕ್ಷಣವೇ ಇಂತಹವನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಜು ರಾವಳ, ನಾಗರಾಜ ತಳವಾರ, ರೋಹಿತ ಮತ್ತು ಆಕಾಶ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications