ಹುಬ್ಬಳ್ಳಿ-ಧಾರವಾಡದ ಗೃಹಿಣಿಯರೇ ಸರಗಳ್ಳರಿದ್ದಾರೆ ಎಚ್ಚರ!

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 21: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಸರಗಳ್ಳರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಬುಧವಾರ ರಾತ್ರಿ ಮತ್ತು ಗುರುವಾರ ವಿವಿಧೆಡೆ ಕೈಚಳಕ ತೋರಿಸಿದ ಖದೀಮರು ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ.

ವಿದ್ಯಾನಗರದ ಉತ್ತರಾದಿಮಠ ಬಳಿಯ ನಿವಾಸಿ ವರ್ಷಾ ಕೃಷ್ಣಾನಂದ ಅಂಗಡಿ (28) ಎಂಬುವವರು ಕಸ ಚೆಲ್ಲಲು ಮನೆಯಿಂದ ಹೊರಬಂದಾಗ ಅವರ ಕೊರಳಿನಲ್ಲಿದ್ದ ತಾಳಿಯನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.[ನರಗುಂದ ಬಂಡಾಯಕ್ಕೆ 36: ಹುಬ್ಬಳ್ಳಿಯಲ್ಲಿ ಕರಾಳ ದಿನ]

chain

ವರ್ಷಾ ಅವರು ರಸ್ತೆಯ ಮೇಲೆ ಕಸ ಚೆಲ್ಲಲು ಹೊರಟಾಗ ಬೈಕ್ ನಲ್ಲಿ ಬಂದ ಅಪರಿಚಿತರು ಅವರ ಮುಂದೆ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದಾರೆ. ಆಗ ಬೈಕ್ ನಲ್ಲಿ ಹಿಂದೆ ಕುಳಿತು ವ್ಯಕ್ತಿಯು ವರ್ಷಾ ಅವರ 15 ಗ್ರಾಂ. ತೂಕದ ಚಿನ್ನದ ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ವಿಜಯನಗರದಲ್ಲಿ ಮಹಿಳೆಯೋರ್ವರ 40 ಗ್ರಾಂ.ತೂಕದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.[ನಿಮ್ಮ ಒಡವೆ ಎಗರಿಸಿದ್ದು ಇವನೇನಾ? ವಸಿ ನೋಡಿ!]

ಮೂಲತಃ ಹುಬ್ಬಳ್ಳಿ ತಾಲೂಕು ಕುರ್ಡಿಕೇರಿ ಗ್ರಾಮದ ನಿವಾಸಿ ಕೋಮಲಾ ಚನ್ನಬಸಪ್ಪ ಹುಲಮನಿ ಎಂಬುವವರು ತಮ್ಮ ಅಕ್ಕನ ಮನೆಗೆಂದು ವಿಜಯನಗರಕ್ಕೆ ಬಂದಿದ್ದಾಗ ಅವರನ್ನು ವಂಚಿಸಿ ಕಳ್ಳತನ ಮಾಡಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡದಲ್ಲೂ ಸರಗಳ್ಳತನ:
ಧಾರವಾಡ ನಗರದ ನಾರಾಯಣಪುರ ಪ್ರದೇಶದಲ್ಲಿ ಭಾಗೀರಥಿ ಹೆಗಡೆ ಎಂಬುವವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಗುರುವಾರ ಜರುಗಿದೆ. ಬೈಕ್ ನಲ್ಲಿ ಮೂವರು ಕಳ್ಳರು ಬಂದು ಭಾಗೀರಥಿಯವರ ಕೊರಳಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆಗ ಪ್ರತಿಭಟಿಸಿದ ಭಾಗೀರಥಿಯನ್ನು ನೂಕಿದ ದುಷ್ಕರ್ಮಿಗಳು ಅರ್ಧ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುಮಾರು 10 ಗ್ರಾ.ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ.[ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಲ್ಯಾಪ್ ಟಾಪ್ ಕಳ್ಳ]

ಇದೇ ರೀತಿ ಹುಬ್ಬಳ್ಳಿಯ ರಸ್ತೆಯ ಯಾಲಕ್ಕಿ ಶೆಟ್ಟರ್ ಕಾಲನಿಯಲ್ಲಿ ಮಹಿಳೆಯೋರ್ವರ ಚಿನ್ನದ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Series of chain snatching incidents have shocked Huballi and Dharwad on 20 and 21 July. Since two days total 4 such incidents have been reported.
Please Wait while comments are loading...