ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಚದಲ್ಲಿ ಮಲಗಿಸಿ ಅಧಿಕಾರದ ಖುರ್ಚಿ ಹತ್ತಿದವರು ಬಿಜೆಪಿಗರು: ಹುಬ್ಬಳ್ಳಿಯಲ್ಲಿ ಸಿ.ಎಂ.ಇಬ್ರಾಹಿಂ ಲೇವಡಿ

ಬಿಜೆಪಿಯವರೇ 13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದಿದ್ದೀರಿ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ, 05: ಬಿಜೆಪಿಯವರೇ 13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದಿದ್ದೀರಿ. ನಿಮಗೆ ನಾಚಿಕೆ ಆಗಬೇಕು. 13 ಜನರಲ್ಲಿ 12 ಜನ ಮಂತ್ರಿ ಆಗಿದ್ದಾರೆ‌. ಇವತ್ತು ಜಾರಕಿಹೊಳಿ ಸಿ.ಡಿ. ತಗೊಂಡು ಗೃಹ ಸಚಿವರ ಬಳಿ ಹೋಗಿದ್ದಾರೆ. ನನ್ನ ಮಗ ಸಿ.ಡಿ ಅಂದರೆ ಏನು ಅಂತಾ ಕೇಳುತ್ತಿದ್ದಾನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಿಜೆಪಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿರುದ್ಧ ವ್ಯಂಗ್ಯವಾಡಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಕಟೀಲು ಪೀಟಲು ಬಾರಸಿ ಹೇಳುತ್ತಾನೆ. ರೋಡ್ ಬೇಡಾ, ಅಭಿವೃದ್ಧಿ ಬೇಡ ಅವನಿಗೆ ಬೇಕಿರುವುದು ಲವ್ ಜಿಹಾದ್. ಇವತ್ತು ಜಾರಕಿಹೊಳಿ ವಿಷಯನ್ಯಾಕೆ ಮಾತನಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಇಂತಹ ಪಾಪಿಗಳನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಸದಾನಂದಗೌಡ ಸೇರಿ 12 ಜನರ ಕ್ಯಾಸೆಟ್ ಹೊರಗೆ ಹಾಕಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಸ್ಯಾಂಟ್ರೋ ರವಿ ಎಲ್ಲಿದ್ದಾನೆ, ಅವನ ಬಗ್ಗೆ ಸುದ್ದಿನೇ ಇಲ್ಲ. ಮಂಚ ಮುರಿಯೋದೇ ಅಚ್ಚೇ ದೀನ್ ನಾ," ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪಗೆ ಕ್ಲೀನ್ ಚೀಟ್ ಕೊಡಿಸಿದ್ದೀರಿ

13 ಜನ ಬಂದು ರಾಜೀನಾಮೆ ಕೊಟ್ಟವರು ದರಿದ್ರದವರು. ಯಡಿಯೂರಪ್ಪ, ನಿನ್ನ ಮಗ ಮೂರು ಸಲ ಎಂಪಿ ಆಗಿದ್ದಾನೆ. 30 ಸಾವಿರ ಜನರಿಗೆ ಮಣ್ಣು ಹಾಕಿದ್ದೀರಿ. ಈಶ್ವರಪ್ಪಗೆ ಕ್ಲೀನ್ ಚೀಟ್ ಕೊಡಿಸಿದ್ದೀರಿ. ಅದು ಸಿಬಿಐ ತನಿಖೆಯಾಗಬೇಕು. ಬಿಜೆಪಿಯಲ್ಲಿ ದರಿದ್ರ ಗ್ರಹಗಳು ಸೇರಿಕೊಂಡಿವೆ. ನಿಮ್ಮನ್ನು ತೆಗೆದು ಹಾಕಬೇಕು. ಇಂತಹ ದರಿದ್ರಗಳನ್ನು ತೆಗೆಯಬೇಕು ಎಂದು ಮನವಿ ಮಾಡಿದ ಅವರು, ದೇವೆಗೌಡ ಅವರ ರಾಜಕೀಯದಲ್ಲಿ ಒಂದು ರೂಪಾಯಿ ತಗೊಂಡಿಲ್ಲ ಎಂದು ಹೇಳಿದರು.

C.M. Ibrahim outrage against Pralhad Joshi

ಪ್ರಲ್ಹಾದ್‌ ಜೋಶಿ ವಿರುದ್ಧ ಇಬ್ರಾಹಿಂ ಕಿಡಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರೇ ಇದೇನಾ ನವಗೃಹ ಪೂಜೆ. ಬನ್ನಿ ಸಂವಾದ ಮಾಡೋಣ. ಈದ್ಗಾ ಮೈದಾನದಲ್ಲಿ ಗಣಪತಿ ಪೂಜೆ ಕೂರಿಸಿದರೇ ಅಲ್ಲ. ಜನರ ಮನಸ್ಸಲ್ಲಿ ಗಣಪತಿ ಕೂರಸಿ. ದರ್ಗಾ ತೆರವು ಮಾಡಿದ್ದೀರಿ, ಅದು ಏನು ಮಾಡಿತ್ತು ನಿಮಗೆ? ಬೈರಿದೇವರಕೊಪ್ಪ ದರ್ಗಾ ತೆರವು ಮಾಡಿದೀರಿ, ಏನು ಸಿಕ್ತು ನಿಮಗೆ.? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

English summary
JDS state president C.M. Ibrahim outrage against union minister Pralhad Joshi in huballi, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X