ಹಬ್ಬದ ದಿನವೇ ಬಿ.ಜೆ.ಪಿ ಮುಖಂಡನ ಮನೆಯಲ್ಲಿ ಸೂತಕ

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್ 19: ದೀಪಾವಳಿ ಶುಭಾಶಯದ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಬಿಜೆಪಿ ಮುಖಂಡನ ಪುತ್ರ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್ ಮನೆಯ ಮುಂಭಾಗದಲ್ಲಿ ನಡೆದಿದೆ.

ರವಿಕುಮಾರ್ ಕೊರಪಾಟಿ(24) ಮೃತ ಯುವಕನಾಗಿದ್ದಾನೆ. ರವಿಕುಮಾರ್, ಹುಬ್ಬಳ್ಳಿಯ ಬಿಜೆಪಿ ಮುಖಂಡ ಲಕ್ಷ್ಮಣ ಕೊರಪಾಟಿ ಅವರ ಪುತ್ರ.

ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್ ನ ಮನೆಯ ಮುಂಭಾಗದಲ್ಲಿ ಬುಧವಾರ ಸಂಜೆ ರವಿ ಮತ್ತು ತನ್ನ ಸ್ನೇಹಿತರು ಇರುವ ದೀಪಾವಳಿ ಹಬ್ಬದ ಶುಭಾಶಯದ ಬ್ಯಾನರನ್ನು ಕಟ್ಟಲು ಮುಂದಾಗಿದ್ದಾರೆ. ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ವಿದ್ಯುತ್ ತಂತಿ ನೋಡದೆ ಮುಟ್ಟಿದ್ದಾನೆ.

BJP leader Lakshman son killed after he was electrocuted

ವಿದ್ಯುತ್ ಶಾಕ್ ನಿಂದಾಗಿ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರವಿಕುಮಾರನನ್ನು ಸ್ನೇಹಿತರೆಲ್ಲಾ ಸೇರಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ರವಿಕುಮಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇತ್ತ ಹೆತ್ತ ಮಗನನ್ನು ಕಳೆದುಕೊಂಡ ಬಿ ಜೆ ಪಿ ಮುಖಂಡ ಲಕ್ಷ್ಮಣ ಕೊರಪಾಟಿ ಮತ್ತು ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ರವಿಕುಮಾರ್ ಸಾವಿಗಿಡಾದ ಕಾರಣ ಹುಬ್ಬಳ್ಳಿ ಕಿಮ್ಸ್ ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಇತ್ತ ಸ್ಥಳಕ್ಕೆ ಕೇಶ್ವಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 24-year-old youngster Ravi Korrapati son of BJP leader Lakshman Korrapati was killed after he was electrocuted while he was holding banner near a electric pole near Janata quarters, Hubballi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ